ನವದೆಹಲಿ: ಕರ್ನಾಟಕದ ಮಾಜಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್(82) ಅವರು ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ರಾತ್ರಿ ನಿಧನರಾದರು.
1937ರಲ್ಲಿ ಜನಿಸಿದ ಭಾರದ್ವಾಜ್ 2009ರ ಜೂನ್‍ನಿಂದ 2014ರ ಜೂನ್ 28ರವರೆಗೆ ಕರ್ನಾಟಕದ ರಾಜ್ಯಪಾಲರಾಗಿದ್ದರು. ಕಾಂಗ್ರೆಸ್ ನಾಯಕರಾಗಿದ್ದ ಅವರು 1984ರಲ್ಲಿ ರಾಜ್ಯಸಭಾ ಸದಸ್ಯರಾಗಿ ನೇಮಕಗೊಂಡು ಕಾನೂನು ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು.
Advertisement
Former Union Law Minister Hansraj Bhardwaj dies today. I was sad to hear this news. I knew his during Rajiv Gandhi, P.V. Narasimha Raoand Manmohan Singh tenures as PM. He was a courteous, frank, and knowledgeable person.
— Subramanian Swamy (@Swamy39) March 8, 2020
Advertisement
ಹಂಸರಾಜ್ ಭಾರದ್ವಾಜ್ ನಿಧನಕ್ಕೆ ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಸಂತಾಪ ಸೂಚಿಸಿದ್ದಾರೆ. ರಾಜೀವ್ ಗಾಂಧಿ, ಪಿವಿ ನರಸಿಂಹ ರಾವ್, ಮನಮೋಹನ್ ಸಿಂಗ್ ಅವಧಿಯಿಂದಲೂ ನಾನು ಅವರನ್ನು ಬಲ್ಲೆ. ಅವರು ವಿನಯಶೀಲ, ಸ್ಪಷ್ಟ ಮತ್ತು ಜ್ಞಾನವುಳ್ಳ ವ್ಯಕ್ತಿಯಾಗಿದ್ದರು ಎಂದು ಬಣ್ಣಿಸಿದ್ದಾರೆ.
Advertisement
ಹಂಸರಾಜ್ ಭಾರದ್ವಾಜ್ ಅವರ ಅವಧಿಯಲ್ಲಿ 4 ಮುಖ್ಯಮಂತ್ರಿಗಳು ಪ್ರಮಾಣವಚನ ಸ್ವೀಕರಿಸಿದ್ದರು. ಸಿಎಂ ಯಡಿಯೂರಪ್ಪ ವಿರುದ್ಧ ಎಫ್‍ಐಆರ್ ದಾಖಲಿಸಲು ಅನುಮತಿ ನೀಡಿದ್ದರು. ಬಿಜೆಪಿ ಸರ್ಕಾರವನ್ನು ಅಮಾನತಿನಲ್ಲಿಟ್ಟಿದ್ದು ಸಹ ಭಾರೀ ಸುದ್ದಿಯಾಗಿತ್ತು.
Advertisement
Deeply condole the sad demise of Shri Hansraj Bharadwaj who for long years served as the Law Minister of India. We were together in the Parliament. May his soul Rest In Peace.
— Ravi Shankar Prasad (@rsprasad) March 8, 2020