ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲೂಕಿನ ದುಂಡಶಿ ತಾಂಡಾ ಗ್ರಾಮದ ಮಾಜಿ ಶಿಕ್ಷಣ ಹಾಗೂ ಸಕ್ಕರೆ ಖಾತೆ ಸಚಿವರಾದ ಡಾ. ಹೆಗ್ಗಪ್ಪ ದೇಶಪ್ಪ ಲಮಾಣಿ (Dr. Heggappa Deshappa Lamani) (ಡಾ.ಎಚ್.ಡಿ. ಮಾಣಿ) (84) ಸೋಮವಾರ ನಿಧನರಾದರು.
ಮೃತರಿಗೆ ಪತ್ನಿ ನಾಲ್ಕು ಜನ ಪುತ್ರರು ಅಪಾರ ಬಂದು ಬಳಗದಿಂದ ಅಗಲಿದ್ದಾರೆ. ಡಾ. ಹೆಗ್ಗಪ್ಪ ದೇಶಪ್ಪ ಲಮಾಣಿ (ಡಾ.ಎಚ್.ಡಿ ಲಮಾಣಿ) ಅವರು ಬಿಜಾಪೂರ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಧಾರವಾಡದ ಕೆಸಿಡಿ ಹಿಂದಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಹಿಂದಿ ವಿಭಾಗದ ಮಖ್ಯಸ್ಥರಾಗಿ ಸೇವೆ ಸಲ್ಲಸುತ್ತಿದ್ದರು.
Advertisement
ಹಾವೇರಿ (Haveri) ಜಿಲ್ಲೆಯ ಬ್ಯಾಡಗಿ ಮೀಸಲು ಕ್ಷೇತ್ರಕ್ಕೆ ಶಾಸಕರಾಗಿ ಆಯ್ಕೆಯಾಗಿ ಎಸ್. ಬಂಗಾರೆಪ್ಪ ಆಡಳಿತದಲ್ಲಿ ಮುಖ್ಯ ಸಚೇತರಾಗಿ ಕಾರ್ಯನಿರ್ವಹಿಸಿದ್ದರು. ನಂತರ ಅವರು ಹಾವೇರಿ ಜಿಲ್ಲೆಯ ಮೋಟೆಬೆನ್ನೂರ ಜಿ.ಪಂ ಮತಕ್ಷೇತ್ರದಿಂದ ಸದಸ್ಯರಾಗಿ ಆಯ್ಕೆಯಾದರು. ಇದನ್ನೂ ಓದಿ: ನಂದುಗೆ ಕೈಕೊಟ್ಟು ಬೇರೆ ಹುಡುಗಿ ಜೊತೆ ಬಿಗ್ ಬಾಸ್ ಜಶ್ವಂತ್ ಡೇಟಿಂಗ್?
Advertisement
ವೀರಪ್ಪ ಮೊಯ್ಲಿ ಮುಖ್ಯ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಬ್ಯಾಡಗಿ ಮೀಸಲು ಮತಕ್ಷೇತ್ರದಿಂದ ಶಾಸಕರಾಗಿ ಮರು ಆಯ್ಕೆಗೊಂಡು ಶಿಕ್ಷಣ ಖಾತೆ ಸಕ್ಕರೆ ಖಾತೆ ಸಚಿವರಾಗಿದ್ದರು. ಇವರ ಅಂತ್ಯ ಸಂಸ್ಕಾರವನ್ನು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಧುಂಡಶಿ ತಾಂಡಾ ಗ್ರಾಮದ ಸ್ವಂತ ಜಮೀನಿನಲ್ಲಿ ನೆರವೇರಿಸುವುದಾಗಿ ಸಂಬಂದಿ ಸೀನಪ್ಪ ಲಮಾಣಿ ತಿಳಿಸಿದರು.
Advertisement
ಸಂತಾಪ: ಹಿರಿಯರಾದ ಎಚ್.ಡಿ.ಲಮಾಣಿ ಅವರಿಗೆ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ಮಾಜಿ ಶಾಸಕ ಸೈಯ್ಯದ ಅಜ್ಜೀಂಪೀರಖಾದ್ರಿ, ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣಾ ಬೇವಿನಮರದ, ಜಿಲ್ಲಾ ರೈತ ಸೇನಾ ಅಧ್ಯಕ್ಷ ವರುಣ ಎಂ.ಪಾಟೀಲ್, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಎಂ.ಎಂ.ಹಿರೇಮಠ, ಕೆಪಿಸಿಸಿ ಸದಸ್ಯ ಸಣ್ಮೂಖ ಶಿವಳ್ಳಿ, ಹಾವೇರಿ ನಗರ ಸಭಾ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಕಾಂಗ್ರೇಸ್ ಯುವ ಮುಖಂಡ ಕಿರಣ.ಎಂ.ಪಾಟೀಲ, ತಾಲೂಕಾ ಅಧ್ಯಕ್ಷ ಶಂಭುಲಿಂಗ ಅಜೂರ ತೀವ್ರ ಸಂತಾಪ ಸೂಚಿಸಿದ್ದಾರೆ.
Advertisement
ಎಪಿಎಂಸಿ ಮಾಜಿ ಅಧ್ಯಕ್ಷ ಅರ್ಜಪ್ಪ ಲಮಾಣಿ, ತಾಲೂಕಾ ಬಂಜಾರ ಸಂಘದ ತಾಲೂಕಾ ಅಧ್ಯಕ್ಷ ದಾಮ್ಲಪ್ಪ ಲಮಾಣಿ, ಯುವ ಮುಖಂಡ ಸುದೀರ ಲಮಾಣಿ, ತಾಲೂಕಾ ಪತ್ರಕರ್ತರ ಸಂಘದ ಅಧ್ಯಕ್ಷ ಪರಮೇಶ ಲಮಾಣಿ, ಅಂಜುಮನ್ ಸಮೀತಿ ಮಾಜಿ ಅಧ್ಯಕ್ಷ ಆಸ್ಪಕಲಿ ಮತ್ತೇಖಾನ ಇನ್ನೂ ಹಲವಾರು ಮುಖಂಡರುಗಳು ಸಂತಾಪ ಸೂಚಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k