ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಆಪ್ತ ರಮೇಶ್ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಬೆದರಿಕೆಯಿಂದ ಆತ್ಮಹತ್ಯೆಗೆ ಶರಣಾದ್ರಾ ಎಂಬ ಪ್ರಶ್ನೆ ಕೇಳಿ ಬರುತ್ತಿದೆ.
ಆತ್ಮಹತ್ಯೆಗೂ ಮುನ್ನ ರಮೇಶ್ ಕುಟುಂಬಸ್ಥರ ಜೊತೆಗೆ ಭಾವನಾತ್ಮಕ ಕ್ಷಣ ಕಳೆದಿದ್ದರು. ಕುಟುಂಬಸ್ಥರು ಧೈರ್ಯ ನೀಡಿದ್ದರೂ ರಮೇಶ್ ಮನೆಯಿಂದ ತೆರಳಿ ಜ್ಞಾನಭಾರತಿ ಕ್ಯಾಂಪಸ್‍ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು ಮನೆಯಿಂದ ತೆರಳುತ್ತಿದ್ದಾಗ ಕುಟುಂಬಸ್ಥರಿಗೆ ಕೈಬಿಸಿ ಬರುತ್ತೇನೆ ಎಂದು ಹೇಳಿದ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಪರಮೇಶ್ವರ್ ಪಿಎ ರಮೇಶ್ ವಿಚಾರಣೆ ನಡೆಸಿಲ್ಲ: ಐಟಿ ಸ್ಪಷ್ಟನೆ
Advertisement
Advertisement
ಐಟಿ ವಿಚಾರಣೆಯಿಂದ ಹೆದರಿದ್ದ ರಮೇಶ್ ಅವರನ್ನು ಮನೆಗೆ ಕರೆಸಿದ್ದ ಪರಮೇಶ್ವರ್ ಧೈರ್ಯ ಹೇಳಿದ್ದರು. ಅಲ್ಲಿಂದ ಉಲ್ಲಾಳದ ತಮ್ಮ ಮನೆಗೆ ವಾಪಸ್ ಆಗಿದ್ದ ರಮೇಶ್ ಕುಟುಂಬಸ್ಥರನ್ನು ಭೇಟಿಯಾಗಿದ್ದರು. ಬಳಿಕ ಉಪಾಹಾರ ಸೇವಿಸಿದ ರಮೇಶ್ ಮನೆಯಿಂದ ಹೊರಡುವಾಗ ಕುಟುಂಬಸ್ಥರಿಗೆ ಟಾಟಾ ಮಾಡಿದ್ದರು. ವಿದಾಯದ ಅರಿವಿಲ್ಲದೆ ಕುಟುಂಬಸ್ಥರು ಕೂಡ ಸಂತೋಷದಿಂದಲೇ ರಮೇಶ್‍ರನ್ನು ಕಳುಹಿಸಿಕೊಟ್ಟಿದ್ದರು. ಉಲ್ಲಾಳ ಮನೆಯಿಂದ ಬೆಳಗ್ಗೆ 9:02 ಗಂಟೆಗೆ ಹೊರಟ ರಮೇಶ್ ಜ್ಞಾನಭಾರತಿ ಕ್ಯಾಂಪಸ್‍ಗೆ ಬಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗಿದ್ದೇನೆ, ಪತ್ನಿ-ಮಕ್ಕಳಿಗೆ ಟಾರ್ಚರ್ ಕೊಡ್ಬೇಡಿ: ರಮೇಶ್
Advertisement
ಈ ಪ್ರಕರಣಕ್ಕೆ ಸಂಬಂಧಿದಂತೆ ಐಟಿ ಅಧಿಕಾರಿಗಳು ಗುರುವಾರ ಮಧ್ಯಾಹ್ನ 1:15ಕ್ಕೆ ರಮೇಶ್ ಅವರ ನಿವಾಸಕ್ಕೆ ಬಂದಿದ್ದರು. ಈ ದೃಶ್ಯವು ರಮೇಶ್ ಅವರ ಮನೆಯ ಹೊರಗೆ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಂದು ಐಟಿ ಅಧಿಕಾರಿಗಳು ರಮೇಶ್ ಅವರನ್ನು ವಿಚಾರಣೆ ಒಳಪಡಿಸಿದ್ದರು ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
Advertisement
ಪರಮೇಶ್ವರ್ ನಿವಾಸಲ್ಲಿ ಸಿಕ್ಕಿದ್ದ ಹಣಕ್ಕೆ ಸಾಕ್ಷಿಯಾಗಿದ್ದ ರಮೇಶ್‍ರನ್ನು ಪಂಚನಾಮೆ ಮಾಡುವಾಗ ಐಟಿ ಅಧಿಕಾರಿಗಳು ಬೆದರಿಸಿದ್ದ ಹಾಕಿದ್ದರು. ಆರೋಪಿಯ ರೀತಿ ಎಲ್ಲಾ ಕಡೆ ಕರೆದುಕೊಂಡು ಹೋಗಿದ್ದರು. ಅಷ್ಟೇ ಅಲ್ಲದೆ ಪಂಚನಾಮೆ ಮಾಡೋವಾಗಲೇ ಹವಾಲದ ಬಗ್ಗೆ ಮಾತನಾಡಿಸಿದ್ದರು ಎಂದು ಹೇಳಲಾಗುತ್ತಿದೆ.
ಮೆಡಿಕಲ್ ಸೀಟ್‍ಗಳನ್ನು ಎಷ್ಟಕ್ಕೆ ಮಾರಾಟ ಮಾಡುತ್ತಿರಿ ಎಂದು ಐಟಿ ಅಧಿಕಾರಿಗಳು ರಮೇಶ್‍ರನ್ನು ಪ್ರಶ್ನಿಸಿದ್ದರು. ಜೊತೆಗೆ ಅವರ ಮನೆಯಲ್ಲಿ ಕೆಲವೊಂದು ದಾಖಲೆಗಳು ಸಿಕ್ಕಿದ್ದವು. ಅವುಗಳನ್ನು ವಶಕ್ಕೆ ಪಡೆದು ಪಂಚನಾಮೆ ಮಾಡಿದ್ದರು. ಇದನ್ನೆಲ್ಲಾ ನೋಡುತ್ತಾ ಇದ್ದ ರಮೇಶ್ ಅವರಿಗೆ ಭಯ ಎದುರಾಗಿತ್ತು. ಇವತ್ತು ನಮ್ಮನ್ನು ಸಾಕ್ಷಿಯನ್ನಾಗಿ ಮಾಡಿದ್ದಾರೆ. ಮುಂದಿನ ದಿನ ನಾನು ಆರೋಪಿ ಆಗಬಹುದು ಎಂಬ ಭಯ ಕಾಡ ತೊಡಗಿತ್ತು. ಹೀಗಾಗಿ ರಮೇಶ್ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.
https://www.youtube.com/watch?v=U7jgbwAAatQ