ಈಗಾಗಲೇ ಅನೇಕ ರಾಜಕಾರಣಿಗಳು ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಅವರು ಸಿನಿಮಾ ರಂಗದಲ್ಲಿ ತೊಡಗಿಸಿಕೊಳ್ಳದೇ ಇದ್ದರೂ, ಅತಿಥಿ ಪಾತ್ರದಲ್ಲಿ (cameos) ಕೆಲವರು ನಟಿಸಿದ್ದಾರೆ. ಈಗ ಅವರ ಸಾಲಿಗೆ ಹೊಸ ಸೇರ್ಪಡೆ, ಮಾಜಿ ಉಪಮುಖ್ಯಮಂತ್ರಿ, ಹಾಲಿ ಶಾಸಕರಾದ ಲಕ್ಷ್ಮಣ ಸವದಿ.
ಹೌದು, ಲಕ್ಷ್ಮಣ ಸವದಿ (Lakshmana Savadi) ಸದ್ದಿಲ್ಲದೇ ಸಿನಿಮಾ ರಂಗ ಪ್ರವೇಶ ಮಾಡಿದ್ದಾರೆ. ‘ದೇಸಾಯಿ’ (Desai) ಹೆಸರಿನ ಚಿತ್ರದಲ್ಲಿ ಅವರು ಅತಿಥಿ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ. ನಾಗರೆಡ್ಡಿ ನಿರ್ದೇಶನದಲ್ಲಿ ಈ ಸಿನಿಮಾ ತಯಾರಾಗುತ್ತಿದ್ದು, ಮಹಾಂತೇಶ್ ಚೊಳಚಗುಡ್ಡ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಲಕ್ಷ್ಮಣ ಸವದಿ ಅವರಿಗೆ ನಿರ್ಮಾಪಕರು ಆಪ್ತರು. ಆ ಕಾರಣದಿಂದಾಗಿ ಅವರು ಒಪ್ಪಿಕೊಂಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಲಕ್ಷ್ಮಣ ಸವದಿ ಕೂಡ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಕುಸ್ತಿ ಪಟುಗಳಿಗೆ ಬಹುಮಾನ ವಿತರಣಾ ಸಮಾರಂಭವೊಂದು ಸಿನಿಮಾದಲ್ಲಿದ್ದು, ಈ ಸಮಾರಂಭಕ್ಕೆ ಸವದಿ ಗೆಸ್ಟ್. ಗೆದ್ದವರಿಗೆ ಬಹುಮಾನ ನೀಡುವಂತಹ ಪಾತ್ರ ಅದಾಗಿದೆ.
Web Stories