– ಮೃತನ ಕುಟುಂಬದವರಿಗೆ 3 ಲಕ್ಷ ರೂ. ವೈಯಕ್ತಿಕ ಧನ ಸಹಾಯ
ಶಿವಮೊಗ್ಗ: ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಅವರ ನಿವಾಸಕ್ಕೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ (K.S.Eshwarappa) ಭೇಟಿ ನೀಡಿದರು. ಮೃತ ನೌಕರನ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, 3 ಲಕ್ಷ ರೂ. ವೈಯಕ್ತಿಕ ಧನ ಸಹಾಯ ಮಾಡಿದರು.
Advertisement
ಶಿವಮೊಗ್ಗದ (Shivamogga) ಕೆಂಚಪ್ಪ ಬಡಾವಣೆಯಲ್ಲಿರುವ ಚಂದ್ರಶೇಖರ್ ಮನೆಗೆ ಶುಕ್ರವಾರ ಈಶ್ವರಪ್ಪ ಭೇಟಿ ನೀಡಿದರು. ಚಂದ್ರಶೇಖರ್ ಪತ್ನಿ ಕವಿತಾ ಹಾಗೂ ಮಕ್ಕಳಿಗೆ ಸಾಂತ್ವನ ಹೇಳಿದರು. ನಿಮ್ಮೊಂದಿಗೆ ನಾವಿದ್ದೇವೆಂದು ಧೈರ್ಯ ತುಂಬಿದರು. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ 94 ಕೋಟಿ ಹಗರಣ – ಅಕ್ರಮದ ತನಿಖೆಗೆ ಇಳಿಯುತ್ತಾ ಸಿಬಿಐ?
Advertisement
Advertisement
ಬಳಿಕ ಮಾತನಾಡಿದ ಈಶ್ವರಪ್ಪ, ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ನೋವು, ಮತ್ತೊಂದು ಸಂತೋಷ. ಪ್ರಾಮಾಣಿಕ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡನಲ್ಲ ಅನ್ನೋದು ನೋವು. ಸಂತೋಷ ಯಾಕಂದ್ರೆ, ದೊಡ್ಡ ಹುದ್ದೆ ಇದ್ದರೂ ಅವನ ಪತ್ನಿ ಒಡವೆ ಅಡವಿಟ್ಟು 20 ಲಕ್ಷ ಸಾಲ ತೆಗೆದುಕೊಂಡಿದ್ದಾರೆ. ಓದುತ್ತಿರುವ ಮಕ್ಕಳಿಗೆ ಓದಿಸಲು ನೆರವು ಕೊಡಬೇಕು. ಕುಟುಂಬದವರಿಗೆ ನೌಕರಿ ಕೊಡಬೇಕು. ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ತಕ್ಷಣ ಕೊಡಬೇಕು. ಈ ಮನೆ ನಮಗೆ ಬಹಳ ಮೊದಲಿನಿಂದಲೂ ಹತ್ತಿರದ್ದು. ಇದಕ್ಕೆ ರಾಜಕಾರಣ ಬೆರೆಸಲು ಇಷ್ಟಪಡಲ್ಲ. ಚುನಾವಣಾ ನೀತಿ ಸಂಹಿತೆ ಮುಗಿದ ನಂತರ 50 ಲಕ್ಷ ರೂ. ಪರಿಹಾರ ಕೊಡಬೇಕು. ಸರ್ಕಾರ ಪರಿಹಾರ ಕೊಡದಿದ್ದರೆ ಶಿವಮೊಗ್ಗ ನಗರದಲ್ಲಿ ಹಣ ಸಂಗ್ರಹ ಮಾಡಿ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.
Advertisement
ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಕರ್ನಾಟಕ ರಾಜ್ಯದ ಜನರ ಗಮನ ಸೆಳೆದಿದೆ. ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ಪ್ರಾಮಾಣಿಕ ಅಧಿಕಾರಿ ಬಹಿರಂಗ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವುದು ದುರ್ದೈವ. ಪ್ರಾಮಾಣಿಕ ಅಧಿಕಾರಿ ಮನೆಗೆ ನಾನು ಹೋಗಿದ್ದೆ. ಕುಟುಂಬಸ್ಥರು ಹೇಳಿದ ಮಾತು ಕೇಳಿ ಕರುಳು ಕಿವುಚಿ ಬಂತು. ಚಂದ್ರಶೇಖರ್ ತನ್ನ ಪತ್ನಿ ಒಡವೆ ಒತ್ತೆ ಇಟ್ಟು 20 ಲಕ್ಷ ಸಾಲ ಮಾಡಿದ್ದಾರೆ. ಇವತ್ತು ಅರ್ಧ ಕೆಜಿ ಅಕ್ಕಿ ಅವರ ಮನೆಯಲ್ಲಿಲ್ಲ, ಕಡು ಬಡತನ. ಅಧಿಕಾರಿಗಳ ಐಶಾರಾಮಿ ಜೀವನ ನೋಡ್ತಿದ್ದೇವೆ. ಪ್ರಾಮಾಣಿಕ ಅಧಿಕಾರಿ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ಈ ರೀತಿ ಸಾಯಬಾರದು. ಭ್ರಷ್ಟಾಚಾರ ನಡೆಯುತ್ತಿದ್ದರೆ ಅಧಿಕಾರಿಗಳು ತಿಳಿಸಬೇಕು. ರಾಜ್ಯ ಸರ್ಕಾರ ಸಹ ಗೌಪ್ಯತೆ ಕಾಪಾಡಿಕೊಳ್ಳಬೇಕು. ಭ್ರಷ್ಟಾಚಾರ ತಡೆಯಲು ಆಗದೇ ಪ್ರಾಮಾಣಿಕ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಆ ಕುಟುಂಬಕ್ಕೆ ನಾನು ವೈಯಕ್ತಿಕವಾಗಿ 3 ಲಕ್ಷ ಪರಿಹಾರ ಕೊಟ್ಟಿದ್ದೇನೆ. ಸರ್ಕಾರ ಕನಿಷ್ಠ 50 ಲಕ್ಷ ಪರಿಹಾರವನ್ನು ಕುಟುಂಬಕ್ಕೆ ಕೊಡಬೇಕು. ಸರ್ಕಾರ ಪರಿಹಾರ ಕೊಡದಿದ್ದರೆ ನಾನೇ ದಾನಿಗಳ ಮೂಲಕ ಸಂಗ್ರಹಿಸಿ 50 ಲಕ್ಷ ಪರಿಹಾರ ಕೊಡ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: 94 ಕೋಟಿ ಹಗರಣ – ಸಿಬಿಐಗೆ ದೂರು ನೀಡಿ ಮೂವರನ್ನು ಅಮಾನತುಗೊಳಿಸಿದ ಯೂನಿಯನ್ ಬ್ಯಾಂಕ್
ಪರಮೇಶ್ವರ್ ಅವರು ನನ್ನ ಕೇಸನ್ನು ಹೋಲಿಕೆ ಮಾಡಿದ್ದಾರೆ. ಈಶ್ವರಪ್ಪ ಕೇಸ್ ಬೇರೆ ಈ ಕೇಸ್ ಬೇರೆ ಅಂದಿದ್ದಾರೆ. ಅದು ಹೇಗೆ ಬೇರೆ ಬೇರೆ ಆಗ್ತದೆ? ಮಂತ್ರಿಗಳ ಮೌಖಿಕ ಸೂಚನೆ ಮೇರೆಗೆ ಹಣ ವರ್ಗಾವಣೆ ಅಂತಾ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ಬಿಜೆಪಿ ಬಗ್ಗೆ ನಿಜಕ್ಕೂ ನನಗೆ ಹೆಮ್ಮೆ ಎನಿಸುತ್ತದೆ. ನನ್ನ ಹೆಸರು ಬರುತ್ತಿದ್ದ ಹಾಗೆ ರಾಜೀನಾಮೆ ಕೊಟ್ಟೆ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನನ್ನ ರಾಜೀನಾಮೆಗೆ ಬೃಹತ್ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಅವರದ್ದು ಈಗ ಏಕೆ ಡಬಲ್ ಸ್ಟ್ಯಾಂಡರ್ಡ್? ಸಿದ್ದರಾಮಯ್ಯ ಅವರು ವಕೀಲರು ಇದ್ದಾರೆ. ಸಚಿವರು ಮೌಖಿಕ ಸೂಚನೆ ಕೊಟ್ಟಿದ್ದರು ಅಂದ್ಮೇಲೆ ಸಚಿವರ ರಾಜೀನಾಮೆ ಪಡೆಯಲು ಏನು ಸಮಸ್ಯೆ? ಸಂಬಂಧಪಟ್ಟ ಸಚಿವ ರಾಜೀನಾಮೆ ಕೊಡುವ ವರೆಗೆ ಈ ರಾಜ್ಯದ ಜನ ಹೋರಾಟ ಮಾಡ್ತಾರೆ. ಕ್ರಮ ಕೈಗೊಳ್ಳದಿದ್ದರೆ ಎಲ್ಲಾ ಮಂತ್ರಿಗಳು ಇದನ್ನೇ ಮುಂದುವರಿಸುತ್ತಾರೆ. ಸಂಬಂಧಪಟ್ಟ ಸಚಿವರು ತಕ್ಷಣ ರಾಜೀನಾಮೆ ಕೊಡಬೇಕು. ರಾಜೀನಾಮೆ ಕೊಡುವ ವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದು ಎಚ್ಚರಿಸಿದರು.
ಇಷ್ಟೆಲ್ಲಾ ಹಗರಣ ನಡೆದರೂ ಸಂಬಂಧಪಟ್ಟ ಮಂತ್ರಿ ಉಳಿಸುತ್ತಿದ್ದೀರಲ್ಲ ಸಿದ್ದರಾಮಯ್ಯ ಅವರೇ ದೇವರು ಮೆಚ್ತಾನಾ? ಇದು ರಾಜ್ಯದ ಮರ್ಯಾದೆ ಪ್ರಶ್ನೆ. ಭ್ರಷ್ಟಾಚಾರ ಮುಕ್ತ ಮಾಡಲು ಕ್ರಮ ಕೈಗೊಳ್ಳಲು ಅವಕಾಶ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ. ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ, ದೊಡ್ಡ ಜಾಲ ಇದೆ. ಎಲ್ಲಾ ಸತ್ಯ ಹೊರಗೆ ಬರಬೇಕು ಅಂದರೆ ಸಿಬಿಐಗೆ ವಹಿಸಿ. ಇನ್ನೂ ಯಾವುದೇ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳಲು ಸರ್ಕಾರ ಬಿಡಬಾರದು ಎಂದರು.