ತುಮಕೂರು: ಜಿಲ್ಲೆಯಲ್ಲಿ ಮಾಜಿ ಡಿಸಿಎಂ ಜಿ.ಪರಮೇಶ್ವರ್ ಅವರಿಗೆ ಘೆರಾವ್ ಹಾಕಿದರ ಪರಿಣಾಮ ಎರಡು ದಿನದೊಳಗೆ ಬೋರ್ವೆಲ್ ಕೊರೆಸಿ ನೀರು ಹರಿಸುವ ಪ್ರಯತ್ನ ಮಾಡಿದ್ದಾರೆ
ಕೊರಟಗೆರೆ ಕ್ಷೇತ್ರದ ಮುದ್ದೇನಹಳ್ಳಿ ಗ್ರಾಮಸ್ಥರು ಕುಡಿಯುವ ನೀರಿನ ಬವಣೆಯಿಂದ ಬೇಸತ್ತಿದ್ದರು. ಮಂಗಳವಾರ ಕೆಸ್ತೂರು ಗ್ರಾಮದಲ್ಲಿ ವಿವಿಧ ಕಾಮಗಾರಿ ಶಂಕುಸ್ಥಾಪನೆಗೆ ಹೋಗುತಿದ್ದ ಜಿ.ಪರಮೇಶ್ವರ್ ಅವರ ಕಾರನ್ನು ಮುದ್ದೆನಹಳ್ಳಿ ಗ್ರಾಮಸ್ಥರು ತಡೆದಿದ್ದರು. ನಂತರ ಘೆರಾವ್ ಹಾಕಿ ನೀರು ಪೂರೈಸುವಂತೆ ಆಕ್ರೋಶ ವ್ಯಕ್ತಪಡಿಸಿದ್ದರು.
Advertisement
Advertisement
ಗ್ರಾಮಸ್ಥರು ಘೆರಾವ್ ಹಾಕಿದ್ದರಿಂದ ಎಚ್ಚೆತ್ತುಕೊಂಡ ಪರಮೇಶ್ವರ್ ಅಂದೇ ಬೋರ್ವೆಲ್ ಕೊರೆಸಲು ಆದೇಶಿದ್ದರು. ಹಾಗಾಗಿ ಗುರುವಾರದಂದೇ ಊರ ಹೊರಗಿನ ಗೋಮಾಳದಲ್ಲಿ ಬೋರ್ವೆಲ್ ಕೊರೆಸಲಾಗಿದೆ. ಗುರುವಾರ ರಾತ್ರಿಯಿಂದಲೇ ಬೋರ್ವೆಲ್ನಲ್ಲಿ ಸುಮಾರು 3 ಇಂಚು ನೀರು ಬರುತಿದ್ದು, ಮುದ್ದೇನಹಳ್ಳಿ ಗ್ರಾಮದ ಜನರು ಸಂತಸಗೊಂಡಿದ್ದಾರೆ. ತಮ್ಮ ಕ್ಷೇತ್ರದ ಶಾಸಕ, ಮಾಜಿ ಡಿಸಿಎಂ ಪರಮೇಶ್ವರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.