– ಇದು ಅಶ್ವಿನಿ-ರಘು ಸ್ವಯಂವರ ತರ ಅನಿಸ್ತಿದೆ ಎಂದ ಗಿಲ್ಲಿ
– ರಘು ಈಗ ಮಗು ಎಂದ ಅಶ್ವಿನಿ
ಬಿಗ್‌ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) ಫಿನಾಲೆಗೆ ಇನ್ನೇನು ಕೆಲವೇ ವಾರಗಳು ಬಾಕಿಯಿವೆ. ದಿನಗಳೆದಂತೆ ಮನೆಯಲ್ಲಿ ಮೋಜು, ಮಸ್ತಿ ಹೆಚ್ಚಾಗುತ್ತಿದೆ. ಇದೀಗ ಬಿಗ್‌ಬಾಸ್‌ಗೆ ಮನೆಗೆ ಮಾಜಿ ಸ್ಪರ್ಧಿ ಅನುಪಮಾ ಗೌಡ (Anupama Gowda) ಎಂಟ್ರಿಕೊಟ್ಟಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 9ರ ಸ್ಪರ್ಧಿಯಾಗಿದ್ದ ಅನುಪಮಾ ಗೌಡ ಇದೀಗ ಸೀಸನ್ 12ರ ಮನೆಗೆ ಆಗಮಿಸಿದ್ದಾರೆ. ಅನುಪಮಾ ಅವರನ್ನು ಕಂಡು ಸ್ಪರ್ಧಿಗಳು ಕೂಡ ಖುಷಿಯಾಗಿದ್ದಾರೆ. ಈ ವೇಳೆ ಅನುಪಮಾ ಗೌಡ ಮನೆಯವರಿಗೆ ತಮ್ಮ ಬಗ್ಗೆ ಪರಿಚಯ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ. ಅಶ್ವಿನಿ ಗೌಡ ಮಾತನಾಡುತ್ತಾ ರಘು ಅವರನ್ನು ಹಾಡಿಹೊಗಳಿದ್ದಾರೆ. ಇದನ್ನೂ ಓದಿ: ಪ್ಯಾರಾಗ್ಲೈಡರ್ ಟೇಕಾಫ್ ಆದ ಕೆಲಹೊತ್ತಲ್ಲೇ ಅಪಘಾತ; ಪೈಲಟ್ ಸಾವು, ಪ್ರವಾಸಿಗನಿಗೆ ಗಾಯ
ನಾವೆಲ್ಲ 14ನೇ ವಾರದಲ್ಲಿದ್ದೇವೆ. ಅವತ್ತು ರಘುವನ್ನು ಕಂಡೇ, ಆದರೆ ಇದೀಗ ಮಗುವನ್ನು ನೋಡುತ್ತಿದ್ದೇನೆ. ಮನೆಯವರೆಲ್ಲರೂ ಪ್ರೀತಿಯಿಂದ ರಘು ಅಣ್ಣ ಅಂತ ಕರೀತಾರೆ, ನನಗೂ ಅನಿಸುತ್ತೆ ಆದ್ರೆ….. ಎಂದು ನಾಚಿಕೊಂಡಿದ್ದಾರೆ. ಅವರು ನನ್ನನ್ನು ಅರ್ಥ ಮಾಡಿಕೊಂಡಿದ್ದಾರೆ, ನಾನು ಅವರನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಅನುಪಮಾ ಗೌಡ.
ಬಿಗ್ ಬಾಸ್ | ಇಂದು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್‌ಫುಲ್‌ಕತೆ #colorfulstory #KicchaSudeep #ExpectTheUnexpected #CKPromo pic.twitter.com/LU0qsTxfwo
— Colors Kannada (@ColorsKannada) December 28, 2025
ಬಳಿಕ ರಘು ಮಾತನಾಡಿ, ಒಬ್ಬ ವ್ಯಕ್ತಿಯಾಗಿ ನನಗೆ ಅವರು ತುಂಬಾ ಇಷ್ಟ ಎಂದಿದ್ದಾರೆ. ಇದೆಲ್ಲ ನೋಡಿದ ಮನೆಯವರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಇದೆಲ್ಲವನ್ನು ನೋಡೋಕೆ ಆಗುತ್ತಿಲ್ಲ ಎಂದಿದ್ದಾರೆ. ಇನ್ನೂ ಗಿಲ್ಲಿ ನನಗೆ ಇದನ್ನು ನೋಡಿದರೆ ಸ್ವಯಂವರ ತರ ಅನ್ನಿಸುತ್ತಿದೆ ಎಂದಿದ್ದಾರೆ.
ಈ ವಾರ ಕಿಚ್ಚ ಸುದೀಪ್ ಅವರ ಅನುಪಸ್ಥಿತಿಯಲ್ಲಿ ಎಲಿಮಿನೇಷನ್ ನಡೆಯುತ್ತಿದ್ದು, ಅತಿಥಿಗಳು ಆಗಮಿಸಿ ನಾಮಿನೇಟ್ ಆಗಿರುವ ಸ್ಪರ್ಧಿಗಳ ಪೈಕಿ ಕೆಲವರನ್ನು ಸೇಫ್ ಮಾಡುತ್ತಾರೆ. ಅದರಂತೆ ಇನ್ನುಳಿದ ಸ್ಪರ್ಧಿಗಳು ಮಾತ್ರ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಶನಿವಾರದ ಎಪಿಸೋಡ್‌ನಲ್ಲಿ (ಡಿ.28) ಸೂರಜ್ ಮನೆಯಿಂದ ಹೊರಹೋಗಿದ್ದಾರೆ. ಇದನ್ನೂ ಓದಿ: ಕೋರ್ಟ್ ಆದೇಶ ಉಲ್ಲಂಘಿಸಿ ಮಠದ ಆಸ್ತಿ ಮಾರಾಟ – ಮುರುಘಾಶ್ರೀ ವಿರುದ್ಧ ಮತ್ತೊಂದು ಆರೋಪ


