ನವದೆಹಲಿ: ಕಾಂಗ್ರೆಸ್ (Congress) ನಿಂದ ಬಿಜೆಪಿಗೆ (BJP) ಪಕ್ಷಾಂತರ ಮಾಡಿರುವ ನಾಯಕರಿಗೆ ಪಕ್ಷದಲ್ಲಿ ಪ್ರಮುಖ ಹುದ್ದೆಗಳನ್ನ ನೀಡಲಾಗಿದೆ.
3 ತಿಂಗಳ ಹಿಂದೆಯಷ್ಟೇ ರಾಷ್ಟ್ರೀಯ ಕಾಂಗ್ರೆಸ್‌ಗೆ (National Congress) ಗುಡ್‌ಬೈ ಹೇಳಿದ್ದ ಜೈವೀರ್ ಶೆರ್ಗಿಲ್ (Jaiveer Shergill) ಅವರನ್ನ ಬಿಜೆಪಿ ರಾಷ್ಟ್ರೀಯ ವಕ್ತಾರರನ್ನಾಗಿ ನೇಮಕ ಮಾಡಿದೆ. ಇದರೊಂದಿಗೆ ಪಂಜಾಬ್ (Punjab) ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ (Captain Amarinder Singh) ಹಾಗೂ ಮಾಜಿ ಕಾಂಗ್ರೆಸ್ ನಾಯಕ ಸುನೀಲ್ ಜಾಖರ್ ಅವರಿಗೆ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ ಸದಸ್ಯತ್ವ ನೀಡಲಾಗಿದೆ.
Advertisement
Former Congress spokesperson Jaiveer Shergill appointed as national spokesperson of BJP
(file pic) pic.twitter.com/X1LT8tUg08
— ANI (@ANI) December 2, 2022
Advertisement
ಜೊತೆಗೆ ಪಕ್ಷವು ಸ್ವತಂತ್ರ ದೇವ್ ಸಿಂಗ್, ಮದನ್ ಕೌಶಿಕ್, ರಾಣಾ ಗುರ್ಮಿತ್ ಸಿಂಗ್ ಸೋಧಿ, ಮನೋರಂಜನ್ ಕಾಲಿಯಾ ಅವರನ್ನ ಗುಂಪಿನಲ್ಲಿ ಸೇರಿಸಿದೆ. ಇದನ್ನೂ ಓದಿ: ಕಾಂಗ್ರೆಸ್‍ನ ರಾಷ್ಟ್ರೀಯ ವಕ್ತಾರ ಸ್ಥಾನಕ್ಕೆ ಜೈವೀರ್ ಶೆರ್ಗಿಲ್ ರಾಜೀನಾಮೆ
Advertisement
Advertisement
ಕಳೆದ ಆಗಸ್ಟ್ 24 ರಂದು ಜೈವೀರ್ ಶೆರ್ಗಿಲ್ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಕುರಿತು ಸೋನಿಯಾಗಾಂಧಿ ಅವರಿಗೆ ಪತ್ರ ಬರೆದಿದ್ದರು. ಇದನ್ನೂ ಓದಿ: ಕಾಂಗ್ರೆಸ್ ರೌಡಿಗಳನ್ನ ತಯಾರು ಮಾಡೋ ಫ್ಯಾಕ್ಟರಿ – ಆರ್.ಅಶೋಕ್
“It pains me to say that decision-making is no longer for interests of public & country,rather it’s influenced by the self-serving interests of individuals indulging in sycophancy & consistently ignoring on-ground reality”, wrote Shergill in his resignation letter to Sonia Gandhi pic.twitter.com/EHRODA5PoR
— ANI (@ANI) August 24, 2022
ಪತ್ರದಲ್ಲಿ, ಉನ್ನತ ನಾಯಕರು ತಮ್ಮ ಸಿದ್ಧಾಂತಕ್ಕಾಗಿ ಹೋರಾಡುವುದಕ್ಕಿಂತ ವಿದೇಶ ಪ್ರವಾಸದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಪಕ್ಷಕ್ಕಾಗಿ ನಾವು ಕೆಲಸ ಮಾಡಲು ಸಾಧ್ಯವಿಲ್ಲ. ಅಲ್ಲದೆ ಪಕ್ಷದ ನಿರ್ಧಾರವು ಸ್ವಯಂ ಸೇವಾ ಹಿತಾಸಕ್ತಿಗಳಿಂದ ಪ್ರಭಾವಿತವಾಗಿದೆ. ಇದು ನನಗೆ ತುಂಬಾ ನೋವುಂಟು ಮಾಡಿದೆ ಎಂದು ಹೇಳಿಕೊಂಡಿದ್ದರು.