ನವದೆಹಲಿ: ಹೋರ್ಡಿಂಗ್ಗಳು ಮತ್ತು ಪೋಸ್ಟರ್ಗಳನ್ನು ತೆಗೆದು ಹಾಕಿದ್ದಕ್ಕೆ ಮಾಜಿ ಕಾಂಗ್ರೆಸ್ ಶಾಸಕರೊಬ್ಬರು ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಸ್ಡಿಎಂಸಿ) ಸಿಬ್ಬಂದಿಯ ಮೇಲೆ ಲಾಠಿ ಪ್ರಹಾರ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Advertisement
ಈ ಘಟನೆ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿಕೊಳ್ಳುವುದಾಗಿ ಶುಕ್ರವಾರ ತಿಳಿಸಿದ್ದಾರೆ. ಆದರೆ ಇದೀಗ ಕಾಂಗ್ರೆಸ್ ಮಾಜಿ ಶಾಸಕ ಮೊಹಮ್ಮದ್ ಆಸಿಫ್ ಖಾನ್ ಹಲ್ಲೆಗೊಳಗಾದವರು ಎಸ್ಡಿಎಂಸಿ ಸಿಬ್ಬಂದಿ ಎಂಬುವುದೇ ನನಗೆ ತಿಳಿದಿರಲಿಲ್ಲ. ಈ ಘಟನೆ ಕುರಿತಂತೆ ನನಗೆ ಎಸ್ಡಿಎಂಸಿ ಕಡೆಯಿಂದ ಯಾವುದೇ ಕರೆ ಅಥವಾ ಸಂದೇಶ ಕೂಡ ಬಂದಿಲ್ಲ ಎಂದು ಹೇಳುತ್ತಿದ್ದಾರೆ.
Advertisement
ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಮೊಹಮ್ಮದ್ ಆಸಿಫ್ ಖಾನ್ ಕೋಲಿನಿಂದ ನಾಲ್ಕು ಜನರಿಗೆ ಥಳಿಸಿ ಕಿವಿಗಳನ್ನು ಹಿಡಿದುಕೊಳ್ಳುವಂತೆ ನಿರ್ದೇಶಿಸುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಬೆಂಗಳೂರಿನ ಮತ್ತೊಂದು ಕಾಲೇಜಿನಲ್ಲಿ ಕೊರೊನಾ ಬ್ಲಾಸ್ಟ್ – 12 ವಿದ್ಯಾರ್ಥಿಗಳಿಗೆ ಪಾಸಿಟಿವ್
Advertisement
“We are registering a case in connection with a viral video where former Congress MLA from Okhla, Asif Khan was seen misbehaving with some people who had removed a poster outside his home,” says Delhi Police. pic.twitter.com/5jd5muyOhw
— ANI (@ANI) November 26, 2021
Advertisement
ಇನ್ನೂ ಈ ಕುರಿತಂತೆ ಪ್ರತಿಕ್ರಿಯಿಸಿರುವ ಮೊಹಮ್ಮದ್ ಆಸಿಫ್ ಖಾನ್ ಅವರು, ಓಖ್ಲಾ ಪ್ರದೇಶದಲ್ಲಿ ನಾನು ಹಾಕಿಸಿದ್ದ ಕಾಂಗ್ರೆಸ್ ಹೋರ್ಡಿಂಗ್ಗಳು ಮತ್ತು ಪೋಸ್ಟರ್ಗಳನ್ನು ಮಾತ್ರ ತೆಗೆದುಹಾಕಲಾಯಿತು. ಆದರೆ ಇತರ ಪಕ್ಷಗಳ ಪೋಸ್ಟರ್ ಮತ್ತು ಹೋರ್ಡಿಂಗ್ಗಳನ್ನು ತೆಗೆದುಹಾಕಿರಲಿಲ್ಲ. ಹೀಗಾಗಿ ನಾನಾ ಈ ಬಗ್ಗೆ ಪ್ರಶ್ನಿಸಿದೆ. ಆದರೆ ಯಾರು ಉತ್ತರಿಸಲಿಲ್ಲ. ಹಾಗಾಗಿ ನಾನು ಅವರಿಗೆ ಪಾಠ ಕಲಿಸಿದೆ. ಆದರೆ ನನಗೆ ಅವರೆಲ್ಲಾ ಯಾರು ಅಂತ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇಂದು 400 ಗಡಿದಾಟಿದ ಕೊರೊನಾ – 6 ಸಾವು
ಇನ್ನೂ ಹಲ್ಲೆಗೊಳಗಾದವರು ನಾಗರಿಕ ಸಂಸ್ಥೆಗೆ ಸೇರಿದವರಾಗಿದ್ದು, ಈ ವಿಚಾರ ಕುರಿತಂತೆ ಕೇಂದ್ರ ವಲಯದ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಮತ್ತು ಅಧಿಕಾರಿಗಳು ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ” ಎಂದು ಹಿರಿಯ ಎಸ್ಡಿಎಂಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.