ಬೆಂಗಳೂರು: ಆಟೋ ಚಾಲಕ ಸುಬ್ರಹ್ಮಣ್ಯ ಮೇಲೆ ಐಟಿ ದಾಳಿ ನಡೆದ ಬಳಿಕ ಈತನ ಅಸಲಿತನ ಒಂದೊಂದೇ ಬಯಲಾಗುತ್ತಿದೆ.
2013ರಲ್ಲಿ ಆಟೋದಲ್ಲಿ ವೈಟ್‍ಫೀಲ್ಡ್ ನಲ್ಲಿರುವ ವಿಲ್ಲಾಗೆ ಬಂದ ಸುಬ್ರಮಣ್ಯ ವಿದೇಶಿ ಮಹಿಳೆ ವಿಲ್ಲಾ ತೆಗೆದುಕೊಳ್ಳುತ್ತಾರೆ ಎಂದು ವಿಲ್ಲಾ ಮಾಲೀಕರಾದ ಲಕ್ಷ್ಮೀ ಜತ್ತಿಗೆ ಹೇಳಿದ್ದಾನೆ. ಆದರೆ ವಿಲ್ಲವನ್ನು ಫಾರಿನ್ ಲೇಡಿ ಲೋರಾ ಸುಬ್ರಹ್ಮಣ್ಯ ಹೆಸರಿಗೆ ಮಾಡಿದ್ದೇ ತಡ, ಬಡ್ಡಿ ವ್ಯವಹಾರ ಮಾಡಿಕೊಂಡು ಹತ್ತಾರು ಆಟೋಗಳನ್ನು ಬಾಡಿಗೆಗೆ ಬಿಟ್ಟಿದ್ದಾನೆ.
ಆರು ಜನ ಬಾಡಿ ಗಾರ್ಡ್ಸ್ ಇಟ್ಟುಕೊಂಡು ಮಧ್ಯರಾತ್ರಿ ತನಕ ಕುಡಿದು ದಾಂಧಲೆ ಮಾಡುತ್ತಾನೆ. ವಿಲ್ಲಾದ ತುಂಬೆಲ್ಲ ಸಿಸಿಟಿವಿ ಹಾಕ್ಕೊಂಡು ಅದರ ಡಿವಿಆರ್ ನ್ನು ತನ್ನ ಮನೆಯಲ್ಲಿ ಇಟ್ಕೊಂಡಿದ್ದಾನೆ. ಕೇಳೋಕೆ ಹೋದವರ ಮೇಲೆ ಜಾತಿ ನಿಂದನೆ ಕೇಸ್ ಹಾಕುತ್ತಾನೆ. ಹೀಗಾಗಿ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದ ಬಿಡಿ ಜತ್ತಿ ಮಗನಾಗಿ ಕೇವಲ ಆಟೋ ಡ್ರೈವರ್ ಗೆ ಹೆದರಿಕೊಂಡು ಬದುಕುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಿನಲ್ಲಿ ಇಡೀ ವಿಲ್ಲಾಗೆ ನಾನೋಬ್ಬನೆ ಲೋಕಲ್, ಬಾಲ ಬಿಚ್ಚಿದ್ರೆ ಹುಷಾರ್ ಎಂದು ಬೆದರಿಕೆ ಹಾಕುತ್ತಿದ್ದು, ಇನ್ನಾದ್ರು ಸ್ಥಳೀಯ ಪೊಲೀಸರು ಈ ಆಟೋವಾಲನಿಂದ ಇಲ್ಲಿನ ವಾಸಿಗಳ ರಕ್ಷಣೆ ಮಾಡಲಿ ಎಂದು ಡಿ.ಬಿ ಜತ್ತಿ ಒತ್ತಾಯಿಸಿದ್ದಾರೆ.