ಬೆಂಗಳೂರು: ತಮ್ಮ ರಾಜಕೀಯ ಗುರು ಎಸ್.ಎಂ.ಕೃಷ್ಣ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಯೂ ಟರ್ನ್ ಹೊಡೆದ್ರಾ ಎಂಬ ಅನುಮಾನಗಳು ಇದೀಗ ವ್ಯಕ್ತವಾಗುತ್ತಿದೆ.
ಗುರುವಿಗೆ ತಮ್ಮ ಸಮ್ಮುಖದಲ್ಲೇ ಅವಮಾನವಾದಾಗ ವೀರಾವೇಶದಿಂದ ಮಾತನಾಡಿದ್ದ ಪರಮೇಶ್ವರ್ ಈಗ ಮೌನವಾಗಿರುವುದೇಕೆ ಅನ್ನೋ ಪ್ರಶ್ನೆಗಳು ಕಾಡಲಾರಂಭಿಸಿವೆ. ಕೆಪಿಸಿಸಿ ಅಧ್ಯಕ್ಷರುಗಳ ಫೋಟೋಗಳ ಸಾಲಿನಲ್ಲಿದ್ದ ಎಸ್.ಎಂ.ಕೃಷ್ಣರ ಫೋಟೋ ತೆಗೆದು ಕೃಷ್ಣಾರಿಗೆ ಅವಮಾನ ಮಾಡಿದ್ದರ ಬಗ್ಗೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದ ಪರಂ ಬಳಿಕ ತಣ್ಣಗಾಗಿದ್ದರು.
Advertisement
ಘಟನೆ ನಡೆದು ತಿಂಗಳು ಕಳೆಯುತ್ತಾ ಬಂದ್ರೂ ಇನ್ನೂ ಕ್ರಮ ಕೈಗೊಂಡಿಲ್ಲ. ಪಕ್ಷದ ಕಾರ್ಯಕರ್ತರು ಪಕ್ಷ ಬಿಟ್ಟ ನಾಯಕರ ವಿರುದ್ಧ ವ್ಯಕ್ತಪಡಿಸಿದ ಸಾಮಾನ್ಯ ಪ್ರಕ್ರಿಯೆ ಇದು. ಹೀಗಾಗಿ ಯಾರ ವಿರುದ್ಧವೂ ಕ್ರಮ ಬೇಡ ಅಂತ ಹೈಕಮಾಂಡ್ ಸೂಚಿಸಿದೆ. ಈ ಮೂಲಕ ಪಕ್ಷ ಬಿಟ್ಟವರಿಗೆ ಸಿಗುವುದು ಇಷ್ಟೇ ಗೌರವ ಅಂತ ಮೆಸೇಜ್ ಪಾಸ್ ಮಾಡೋಕೆ ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ.
Advertisement
https://www.youtube.com/watch?v=IfRFx5wQj5Q