ಬೆಂಗಳೂರು: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದಾರೆ.
ಸಿವಿಲ್ ಸೇವೆಗಳ ವೃಂದ ಮತ್ತು ನೇಮಕಾತಿಗಳಲ್ಲಿ ಮೀಸಲಾತಿ ಪಾಲನೆ ಮಾಡುವಂತೆ ಪತ್ರದಲ್ಲಿ ಬರೆದಿದ್ದಾರೆ. ಅಲ್ಲದೇ ಸರ್ಕಾರಿ ಮತ್ತು ಅನುದಾನಿತ ಸಂಸ್ಥೆಗಳಲ್ಲಿ ನೇಮಕಾತಿ ವೇಳೆ ಎಸ್ಸಿ/ಎಸ್ಟಿ, ಓಬಿಸಿ, ನಿರ್ದಿಷ್ಟ ಮೀಸಲಾತಿ ಜಾರಿಯಲ್ಲಿದೆ. ಸರ್ಕಾರದ ನಿಯಮದ ವಿರುದ್ಧವಾಗಿ ನೇಮಕಾತಿ ನಡೆಸಬಾರದು. ಒಂದು ವೇಲೆ ಸರ್ಕಾರದ ವಿರುದ್ಧವಾಗಿ ಮಾಡಿದ್ರೆ ಅದು ಸಾಮಾಜಿಕ ನ್ಯಾಯಕ್ಕೆ ವಿರೋಧವಾದ ನಿಲುವಾಗಿದೆ. ಕೆಪಿಎಸ್ಸಿಗೆ ತಕ್ಷಣ ಸರ್ಕಾರ ನಿರ್ದೇಶನ ನೀಡಬೇಕು ಅಂತ ಉಲ್ಲೇಖಿಸಿದ್ದಾರೆ.
ನೇಮಕಾತಿಯಲ್ಲಿ ಹಿಂದಿನ ಮೀಸಲಾತಿ ಮತ್ತು ಸಾಮಾನ್ಯ ವರ್ಗದ ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಬೇಕು. ಎಲ್ಲಾ ನೇಮಕಾತಿಯಲ್ಲೂ ಮೀಸಲಾತಿ ಪಾಲನೆ ಮಾಡಬೇಕು ಅಂತ ಸಿಎಂಗೆ ಬರೆದ ಪತ್ರದಲ್ಲಿ ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv