ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಹೊಸ ಗುದ್ದಾಟಕ್ಕೆ ಮತ್ತೊಂದು ವೇದಿಕೆ ರೆಡಿಯಾಗಿದೆ. ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಹೋಗಿದ್ದ ಇನ್ಸ್ ಪೆಕ್ಟರ್ ಗಳು ವಾಪಸ್ ಆಗಿದ್ದಾರೆ. ಪುತ್ರನ ವಿರುದ್ಧ ಕೇಸ್ ಹಾಕಿ ಮೈಸೂರಿನಿಂದ ಎತ್ತಂಗಡಿ ಆಗಿದ್ದವರು ವಾಪಸ್ ಆಗಿದ್ದಾರೆ. ಕೆಂಪಯ್ಯ ಅವರ ಟಾರ್ಗೆಟ್ ಲಿಸ್ಟ್ ನಲ್ಲಿ ಇದ್ದ ಇನ್ಸ್ ಪೆಕ್ಟ್ ರಗಳೆಲ್ಲ ಆಯಕಟ್ಟಿನ ಸ್ಥಳಕ್ಕೆ ಶಿಫ್ಟ್ ಆಗಿದ್ದಾರೆ. ಸಿಎಂ ಹೆಚ್‍ಡಿಕೆ ಮತ್ತು ಡಿಸಿಎಂ ಪರಮೇಶ್ವರ್ ಇಬ್ಬರೂ ಸೇರಿ ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನ ವರ್ಗಾ ಮಾಡಿಸಿದ್ರಾ ಎಂಬ ಪ್ರಶ್ನೆಯೊಂದು ಮೂಡಿದೆ.
Advertisement
Advertisement
ವರ್ಗವಾದ 141 ಇನ್ಸ್ ಪೆಕ್ಟರ್‍ಗಳಲ್ಲಿ ಸಿದ್ದರಾಮಯ್ಯ ಅವರ ಕಾಲದಲ್ಲಿ ಟಾರ್ಗೆಟ್ ಆದವರೂ ಇದ್ದಾರೆ. ಹೀಗಾಗಿ ಕಾಂಗ್ರೆಸ್ ಶಾಸಕರುಗಳ ಏರಿಯಾದ ಮೇಲೂ ಹೆಚ್‍ಡಿಕೆ ಹಸ್ತಕ್ಷೇಪ ಮಾಡಿಬಿಟ್ಟರಾ ಎಂಬ ಪ್ರಶ್ನೆಯೊಂದು ಇದೀಗ ರಾಜಕೀಯ ವಲಯದಲ್ಲಿ ಮೂಡಿದೆ.
Advertisement
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕರುಗಳಿಂದ ತೀವ್ರ ಆಕ್ಷೇಪವ್ಯಕ್ತವಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ, ಕೈ ಶಾಸಕರ ಆಕ್ಷೇಪಕ್ಕೆ ಮನ್ನಣೆ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv