ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಗೇಮ್ ಆಡಲು ಸಿದ್ಧರಾಗಿದ್ದಾರೆ.
ಬಜೆಟ್ ಮಂಡನೆಯಾಗಿ, ಸಚಿವ ಸಂಪುಟ ರಚನೆಯಾದರೂ ಸಿದ್ದರಾಮಯ್ಯರಿಗೆ ಅಧಿಕೃತ ಸ್ಥಾನಮಾನ ಸಿಕ್ಕಿರಲಿಲ್ಲ. ಆದ್ದರಿಂದ ಈಗ ಸಿದ್ದರಾಮಯ್ಯ ನನಗೆ, ನಿಮ್ಮ ಕ್ಯಾಬಿನೆಟ್ ದರ್ಜೆ ನನಗೆ ಬೇಕಿಲ್ಲ. ಮೊದಲು ಸಮನ್ವಯ ಸಮಿತಿಯನ್ನ ರಚಿಸಿ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ಆದೇಶ ಮಾಡಿದ್ದಾರಂತೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.
Advertisement
ನನಗೆ ಸಿಬ್ಬಂದಿ ಬೇಕು, ನನಗೆ ಕೆಲಸ ಮಾಡಲು ಆಗುತಿಲ್ಲ. ಸಿಬ್ಬಂದಿ ಇದ್ದರೆ ತಾನೇ ಸಮನ್ವಯ ಸಮಿತಿ ಕೆಲಸ ನಡೆಯುವುದು. ಸ್ಟಾಫ್ ಕೊಡಬೇಕು ಅಂದರೆ ಸಮನ್ವಯ ಸಮಿತಿ ರಚಿಸಿ ಸರ್ಕಾರಿ ಆದೇಶ ಆಗಬೇಕು. ಸಮನ್ವಯ ಸಮಿತಿ ರಚನೆ ಮಾಡಿದರೆ ಸಾಕು, ನನಗೇನು ಕ್ಯಾಬಿನೆಟ್ ಸ್ಥಾನಮಾನ ಬೇಡ ಎಂದು ಸಿಎಂ ಹೆಚ್‍ಡಿಕೆಗೆ ಸಿದ್ದರಾಮಯ್ಯ ಸಂದೇಶ ರವಾನಿಸಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.
Advertisement
ಸಿಎಂ ಕುಮಾರಸ್ವಾಮಿ ಸರ್ಕಾರದಿಂದಲೇ ಸಮನ್ವಯ ಸಮಿತಿ ರಚಿಸುವುದಾಗಿ ಒಪ್ಪಿಕೊಂಡಿದ್ದರು. ಸರ್ಕಾರದಿಂದ ಅಧಿಕೃತ ಆದೇಶವಾದರೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯಗೂ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಸಿಗುತ್ತಿತ್ತು. ಆದರೆ ಈಗ ಸಮನ್ವಯ ಸಮಿತಿ ರಚನೆಗೆ ಸಿಎಂ ಹಿಂದೇಟು ಹಾಕುತ್ತಿದ್ದಾರಂತೆ. ಆದ್ದರಿಂದ ಸಿಎಂ ಕುಮಾರಸ್ವಾಮಿ ವಿಳಂಬ ನೀತಿಯಿಂದಾಗಿ ಸಿದ್ದರಾಮಯ್ಯರಿಗೆ ಆತಂಕ ಶುರುವಾಗಿದೆಯಂತೆ. ಆದ್ದರಿಂದ ಹೆಚ್‍ಡಿಕೆ ವಿಳಂಬ ನೀತಿಗೆ ಸಿದ್ದರಾಮಯ್ಯ ಬೇರೆ ದಾರಿಯಲ್ಲಿ ಹೋಗುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ.
Advertisement