Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 56 ಇಂಚಿನ ಎದೆಯ ಮೋದಿ ಯಕಶ್ಚಿತ್ ಒಬ್ಬ ಜೈಲು ಗಿರಾಕಿಯೆದುರು ಮಂಡಿ ಊರಿರುವುದು ಯಾಕೆ: ಸಿದ್ದರಾಮಯ್ಯ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bellary | 56 ಇಂಚಿನ ಎದೆಯ ಮೋದಿ ಯಕಶ್ಚಿತ್ ಒಬ್ಬ ಜೈಲು ಗಿರಾಕಿಯೆದುರು ಮಂಡಿ ಊರಿರುವುದು ಯಾಕೆ: ಸಿದ್ದರಾಮಯ್ಯ

Bellary

56 ಇಂಚಿನ ಎದೆಯ ಮೋದಿ ಯಕಶ್ಚಿತ್ ಒಬ್ಬ ಜೈಲು ಗಿರಾಕಿಯೆದುರು ಮಂಡಿ ಊರಿರುವುದು ಯಾಕೆ: ಸಿದ್ದರಾಮಯ್ಯ

Public TV
Last updated: October 31, 2018 10:38 pm
Public TV
Share
2 Min Read
Janardhan Reddy Siddaramaiah PM Modi
SHARE

ಬೆಂಗಳೂರು: ಜನಾರ್ದನ ರೆಡ್ಡಿ ಅವರನ್ನು ಅಸ್ತ್ರವಾಗಿಟ್ಟುಕೊಂಡ ಸಿದ್ದರಾಮಯ್ಯ ಇಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ವಿರುದ್ಧ ಸರಣಿ ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ.

ಬಲಿಷ್ಠ ಪಕ್ಷ, ಸಮರ್ಥ ಪ್ರಧಾನಿ, 56 ಇಂಚಿನ ಎದೆ ಇವೆಲ್ಲ ಸರಿ, ಇಂತಹ ಬಿಜೆಪಿ ಯಕಶ್ಚಿತ್ ಒಬ್ಬ ಜೈಲು ಗಿರಾಕಿಯೆದುರು ಮಂಡಿ ಊರಿರುವುದು ಯಾಕೆ? ಈ ಅನೈತಿಕ ಸಂಬಂಧದ ಹಿಂದಿನ ಗುಟ್ಟೇನು ಎಂದು ಟ್ವೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿಗೆ ಪ್ರಶ್ನೆ ಎಸೆದಿದ್ದಾರೆ.

ಕಳೆದ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಬಂದಿದ್ದ ನಮ್ಮನ್ನು ಶೇ.10 ಕಮಿಷನ್ ಸರ್ಕಾರ ಎಂದು ಗೇಲಿ ಮಾಡಿದ್ದರು. ಈಗ ನಾನು ಕೇಳುತ್ತೇನೆ, ಈ ಗಣಿಲೂಟಿಕೋರರನ್ನು ಪಕ್ಷದಲ್ಲಿ ಇಟ್ಟುಕೊಳ್ಳಲು ನೀವು ಪಡೆದಿರುವ ಕಮಿಷನ್ ಎಷ್ಟು ಎಂದು ಪ್ರಶ್ನಿಸಿದ್ದಾರೆ.

ಬಲಿಷ್ಠ ಪಕ್ಷ, ಸಮರ್ಥ ಪ್ರಧಾನಿ, 56 ಇಂಚಿನ ಎದೆ- ಇವೆಲ್ಲ ಸರಿ, ಇಂತಹ ಬಿಜೆಪಿ ಯಕಶ್ಚಿತ್ ಒಬ್ಬ ಜೈಲು ಗಿರಾಕಿಯೆದುರು ಮಂಡಿ ಊರಿರುವುದು ಯಾಕೆ? ಈ‌‌ ಅನೈತಿಕ ಸಂಬಂಧದ ಹಿಂದಿನ ಗುಟ್ಟೇನು?@INCKarnataka #BallariByPoll

— Siddaramaiah (@siddaramaiah) October 31, 2018

ಪ್ರಧಾನಿ ನರೇಂದ್ರ ಮೋದಿ ಕಳೆದ ಲೋಕಸಭಾ ಚುನಾವಣಾ ಕಾಲದಲ್ಲಿ ಹೇಳಿದ್ದೇನು? ನಾ ಕಾವೊಂಗಾ, ನ ಕಾನೇದೂಂಗಾ ಎಂದಿದ್ದರು. ಹಾಗಿದ್ದರೆ ಗಣಿ ಲೂಟಿಕೋರ ಜನಾರ್ದನ ರೆಡ್ಡಿಯವರನ್ನು ಯಾಕೆ ಪಕ್ಷದಲ್ಲಿ ಇಟ್ಟುಕೊಂಡಿದ್ದೀರಿ? ಅವರನ್ನು ತಿನ್ನಲು ಯಾಕೆ ಬಿಟ್ಟಿದ್ದೀರಿ? ಯಾರಿಗೆ ಎಷ್ಟು ಕಮಿಷನ್ ಕೊಟ್ಟಿದ್ದಾರೆ ಎಂದು ಮಾಜಿ ಸಿಎಂ ಪ್ರಶ್ನಿಸಿದ್ದಾರೆ.

shah modi

ಜನಾರ್ದನ ರೆಡ್ಡಿ ಪಕ್ಷದ ಪ್ರಚಾರ ಮಾಡಬಾರದೆಂದು ಅಮಿತ್ ಶಾ ಆದೇಶ ನೀಡುತ್ತಾರೆ. ರೆಡ್ಡಿ ಅದಕ್ಕೆ ಕವಡೆ ಕಿಮ್ಮತ್ತೂ ಕೊಡುವುದಿಲ್ಲ. ಹಾಗಿದ್ದರೂ ಮೋದಿ ಅವರಿಂದ ಹಿಡಿದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರವರೆಗೆ ಯಾರೂ ಕೂಡಾ ರೆಡ್ಡಿ ವಿರುದ್ಧ ಮಾತನಾಡುವುದಿಲ್ಲ, ಯಾಕೆ ರೆಡ್ಡಿ ಜತೆ ಇವರಿಗೆಲ್ಲ ಏನು ಸಂಬಂಧ ಎಂದು ಪ್ರಶ್ನಿಸಿ ಕುಟುಕಿದ್ದಾರೆ.

ಶ್ರೀರಾಮುಲು ರೆಡ್ಡಿ ಕೈ ಗೊಂಬೆ:
ಶಾಸಕ ಶ್ರೀರಾಮುಲು ಒಬ್ಬ ಹುಂಬ ಮನುಷ್ಯ. ರೆಡ್ಡಿ ಸೋದರರಿಗೆ ತಮ್ಮ ಆಟವಾಡಲು ಒಂದು ಕೈಗೊಂಬೆ ಬೇಕಿತ್ತು. ಈಗ ರೆಡ್ಡಿ ಸೋದರರು ಶ್ರೀರಾಮುಲು ಅವರನ್ನು ಕೈಗೊಂಬೆ ಮಾಡಿಕೊಂಡಿದ್ದಾರೆ. ಹೀಗಾಗಿ ಅವರು ಆಡಿಸಿದಂತೆ ಶ್ರೀರಾಮುಲು ಆಡುತ್ತಿದ್ದಾರೆ. ರೆಡ್ಡಿ ಸಹೋದರರು ಲೂಟಿ ಮಾಡಿದ ಹಣದಲ್ಲಿ ಒಂದಷ್ಟು ದುಡ್ಡು ಎಸೆಯುತ್ತಾರೆ. ಈ ಶ್ರೀರಾಮುಲು ಅವರ ತಾಳಕ್ಕೆ ತಕ್ಕ ಹಾಗೆ ಕುಣಿಯುತ್ತಾರೆ ಎಂದು ಲೇವಡಿ ಮಾಡಿದ್ದಾರೆ.

SriRamulu Siddaramaiah

ಬಿಸಿಲ ನಾಡು ಬಳ್ಳಾರಿಯ ಜನ ಕಷ್ಟಜೀವಿಗಳು, ಸ್ವಾಭಿಮಾನಿಗಳು. ಇಂತಹ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಚಲಾಯಿಸುವ ಪ್ರತಿಯೊಂದು ಮತವೂ ಗಣಿ ಲೂಟಿ ಮಾಡಿ, ಬಳ್ಳಾರಿಯನ್ನು ನರಕಮಾಡಿ ಜೈಲಿಗೆ ಹೋಗಿ ಬಂದು, ಈಗ ಗಡಿಪಾರಾಗಿರುವ ಜನಾರ್ದನ ರೆಡ್ಡಿಯ ವಿರುದ್ಧದ ಮತ ಎಂದು ಮತದಾರರು ತಿಳಿದುಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ.

ಶ್ರೀರಾಮುಲು ಎಂಬ ವ್ಯಕ್ತಿ ಹುಂಬ ಮನುಷ್ಯ. ರೆಡ್ಡಿ ಸೋದರರಿಗೆ ತಮ್ಮ ಆಟವಾಡಲು ಒಂದು ಕೈಗೊಂಬೆ ಬೇಕು. ರೆಡ್ಡಿ ಸೋದರರು ಶ್ರೀರಾಮುಲು ಆಡಿಸಿದಂತೆ ಆಡುತ್ತಿರುವ ಒಂದು ಗೊಂಬೆ. ಅವರು ಲೂಟಿ ಮಾಡಿದ ಹಣದಲ್ಲಿ ಒಂದಷ್ಟು ದುಡ್ಡು ಎಸೆಯುತ್ತಾರೆ, ಈ ಶ್ರೀರಾಮುಲು ಅವರ ತಾಳಕ್ಕೆ ತಕ್ಕ ಹಾಗೆ ಕುಣಿಯುತ್ತಾರೆ.@INCKarnataka #BallariByPoll

— Siddaramaiah (@siddaramaiah) October 31, 2018

ಈ ಉಪ ಚುನಾವಣೆಯ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಆಗದಿದ್ದರೂ, ಜನರ ಭಾವನೆಗಳು ಯಾವ ಕಡೆಗಿದೆ ಎಂಬುದನ್ನು ಖಂಡಿತವಾಗಿ ತೋರಿಸುತ್ತದೆ. ಬಳ್ಳಾರಿಯಲ್ಲಿ ಈ ಬಾರಿ ಗೆಲುವು ನಮ್ಮದೇ ಎಂಬ ಸಂಪೂರ್ಣ ಭರವಸೆ ನನಗಿದೆ. ಇಲ್ಲಿನ ಜನ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅವರ ಕೈ ಹಿಡಿಯುತ್ತಾರೆ ಎಂಬ ನಂಬಿಕೆಯಿದೆ ಅಂತ ಭರವಸೆ ವ್ಯಕ್ತಪಡಿಸಿದರು.

ಬಳ್ಳಾರಿಯ ಜನತೆ ಬಿಜೆಪಿಯ ಬಗ್ಗೆ ಭ್ರಮನಿರಸನರಾಗಿದ್ದಾರೆ. ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ದಿನೇ ದಿನೇ ಪೆಟ್ರೋಲ್, ಗ್ಯಾಸ್ ಹಾಗೂ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಜನಸಾಮಾನ್ಯರಿಗೆ ಬರಬೇಕಾಗಿದ್ದ ಅಚ್ಚೇ ದಿನ್ ಅಂಬಾನಿ, ಅದಾನಿಗಳಿಗೆ ಬಂದಿದೆ. ಈ ಬಗ್ಗೆ ಉತ್ತರಿಸಬೇಕಿದ್ದ ಪ್ರಧಾನಿಗಳು ಮೌನವಾಗಿದ್ದಾರೆ ಎಂದು ಕಿಡಿಕಾರಿದರು.

ಕಳೆದ ಲೋಕಸಭಾ ಚುನಾವಣಾ ಕಾಲದಲ್ಲಿ @narendramodi ಹೇಳಿದ್ದೇನು? ನಾ ಕಾವುಂಗಾ, ನ ಕಾನೇ ದೂಂಗಾ? ಹಾಗಿದ್ದರೆ ಗಣಿ ಲೂಟಿಕೋರ ಜನಾರ್ಧನ ರೆಡ್ಡಿಯವರನ್ನು ಯಾಕೆ ಪಕ್ಷದಲ್ಲಿ ಇಟ್ಟುಕೊಂಡಿದ್ದೀರಿ? ಅವರನ್ನು ತಿನ್ನಲುಯಾಕೆ ಬಿಟ್ಟಿದ್ದೀರಿ? ಯಾರಿಗೆ ಎಷ್ಟು ಕಮಿಷನ್?@INCKarnataka #BallariByPoll

— Siddaramaiah (@siddaramaiah) October 31, 2018

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

ಜನಾರ್ಧನ ರೆಡ್ಡಿ ಪಕ್ಷದ ಪ್ರಚಾರ ಮಾಡಬಾರದೆಂದು ಅಮಿತ್ ಶಹಾ ಆದೇಶ ನೀಡುತ್ತಾರೆ. ರೆಡ್ಡಿ ಅದಕ್ಕೆ ಕವಡೆ ಕಿಮ್ಮತ್ತೂ ಕೊಡುವುದಿಲ್ಲ. ಹಾಗಿದ್ದರೂ ಮೋದಿಯವರಿಂದ ಹಿಡಿದು ಯಡಿಯೂರಪ್ಪನವರ ವರೆಗೆ ಯಾರೂ ಕೂಡಾ ರೆಡ್ಡಿ ವಿರುದ್ಧ ಮಾತನಾಡುವುದಿಲ್ಲ. ಯಾಕೆ?
ರೆಡ್ಡಿ ಜತೆ ಇವರಿಗೆಲ್ಲ ಏನು ಸಂಬಂಧ? @INCKarnataka #BallariByPoll

— Siddaramaiah (@siddaramaiah) October 31, 2018

ಬಿಸಿಲ ನಾಡು ಬಳ್ಳಾರಿಯ ಜನ ಕಷ್ಟಜೀವಿಗಳು, ಸ್ವಾಭಿಮಾನಿಗಳು. ಇಂತಹಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಚಲಾಯಿಸುವ ಪ್ರತಿಯೊಂದು ಮತವೂ ಗಣಿ ಲೂಟಿ ಮಾಡಿ ಬಳ್ಳಾರಿಯನ್ನು ನರಕಮಾಡಿ ಜೈಲಿಗೆ ಹೋಗಿ ಬಂದು ಈಗ ಗಡಿಪಾರಾಗಿರುವ ಜನಾರ್ಧನ ರೆಡ್ಡಿಯ ವಿರುದ್ಧದ ಮತ.@INCKarnataka #BallariByPoll

— Siddaramaiah (@siddaramaiah) October 31, 2018

ಬಳ್ಳಾರಿಯ ಜನತೆ ಬಿಜೆಪಿಯ ಬಗ್ಗೆ ಭ್ರಮನಿರಸನರಾಗಿದ್ದಾರೆ. ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ದಿನೇ ದಿನೇ ಪೆಟ್ರೋಲ್, ಗ್ಯಾಸ್ ಹಾಗೂ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಜನಸಾಮಾನ್ಯರಿಗೆ ಬರಬೇಕಾಗಿದ್ದ ಅಚ್ಚೇ ದಿನ್ ಅಂಬಾನಿ, ಅದಾನಿಗಳಿಗೆ ಬಂದಿದೆ. ಈ ಬಗ್ಗೆ ಉತ್ತರಿಸಬೇಕಿದ್ದ ಪ್ರಧಾನಿಗಳು ಮೌನವಾಗಿದ್ದಾರೆ.

— Siddaramaiah (@siddaramaiah) October 31, 2018

TAGGED:Amit Shahbs yeddyurappaformer CM SiddaramaiahJanardhan Reddyprime minister narendra modiPublic TVsriramuluಅಮಿತ್ ಶಾಜನಾರ್ದನ ರೆಡ್ಡಿಪಬ್ಲಿಕ್ ಟಿವಿಪ್ರಧಾನಿ ನರೇಂದ್ರ ಮೋದಿಬಿ.ಎಸ್.ಯಡಿಯೂರಪ್ಪಮಾಜಿ ಸಿಎಂ ಸಿದ್ದರಾಮಯ್ಯಶ್ರೀರಾಮುಲು
Share This Article
Facebook Whatsapp Whatsapp Telegram

Cinema news

Dhurandhar
600 ಕೋಟಿಯತ್ತ ಧುರಂಧರ್ ಕಲೆಕ್ಷನ್ – FA9LA ಸಾಂಗ್‌ಗೆ ಹೆಜ್ಜೆ ಹಾಕಿದ ಶಿಲ್ಪಾ ಶೆಟ್ಟಿ
Bollywood Cinema Latest Top Stories
Sudeep
`ಯುದ್ಧಕ್ಕೆ ಸಿದ್ಧ.. ನಾವು ನಮ್ಮ ಮಾತಿಗೆ ಬದ್ಧ’ – ಸುದೀಪ್ `ಯುದ್ಧ’ ಸಾರಿದ್ದು ಯಾರ ವಿರುದ್ಧ..?
Bengaluru City Cinema Dharwad Districts Karnataka Latest Main Post Sandalwood
chandrachuda
ಪೈರಸಿ ವಿರುದ್ಧ ಕಿಚ್ಚನ ನಡೆ, ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಳ್ಳೋದು ಯಾಕೆ? – ಚಕ್ರವರ್ತಿ ಚಂದ್ರಚೂಡ್
Cinema Latest Sandalwood Top Stories
The Devil
10,500ಕ್ಕೂ ಹೆಚ್ಚು ಪೈರಸಿ ಲಿಂಕ್ ಡಿಲಿಟ್ – ಡೆವಿಲ್ ಚಿತ್ರತಂಡ ಅಧಿಕೃತ ಪೋಸ್ಟ್
Bengaluru City Cinema Latest Main Post Sandalwood

You Might Also Like

DK Shivakumar 9
Bengaluru City

ಗಾಂಧೀಜಿ ಹೆಸರಿಗೆ ಕತ್ತರಿ, ಬಿಜೆಪಿ ಅಂತಿಮ ದಿನಗಳು ಆರಂಭ: ಡಿಕೆಶಿ

Public TV
By Public TV
18 minutes ago
Shiv Sena UBT Anand Dubey
Latest

ಕಾಂಗ್ರೆಸ್‌ ಟೂರಿಸ್ಟ್‌ ಪಾರ್ಟಿ, ನಾಯಕರಿಗೆ ಅಹಂಕಾರ ಬಂದಿದೆ: ಶಿವಸೇನೆ ಉದ್ಧವ್‌ ಬಣ ಟೀಕೆ

Public TV
By Public TV
31 minutes ago
DK Shivakumar 11
Bengaluru City

2027ರ ಡಿಸೆಂಬರ್ ವೇಳೆಗೆ ಬೆಂಗಳೂರಿನಲ್ಲಿ 175 ಕಿ.ಮೀ ಮೆಟ್ರೋ ಮಾರ್ಗ ಸಂಚಾರ: ಡಿಕೆಶಿ

Public TV
By Public TV
41 minutes ago
Yellow Line Metro
Bengaluru City

ಹಳದಿ ಮಾರ್ಗದ ಮೆಟ್ರೋಗೆ ನಾಳೆ 6ನೇ ರೈಲು ಸೇರ್ಪಡೆ

Public TV
By Public TV
1 hour ago
Chinnaswamy Stadium
Cricket

ಬೆಂಗಳೂರಿನ ಕೊಹ್ಲಿ ಫ್ಯಾನ್ಸ್‌ಗೆ ನಿರಾಸೆ – ಅಭಿಮಾನಿಗಳಿಲ್ಲದೇ ನಡೆಯುತ್ತಾ ವಿಜಯ್‌ ಹಜಾರೆ ಪಂದ್ಯ?

Public TV
By Public TV
1 hour ago
Finance Ministry
Latest

ಕರ್ನಾಟಕಕ್ಕೆ ವಿಶೇಷ ಅನುದಾನ ಬಾಕಿ ಇರಿಸಿಕೊಂಡಿಲ್ಲ: ಕೇಂದ್ರ ಸ್ಪಷ್ಟನೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?