ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆ ಮೇಲೆ ಮಾಜಿ ಸಿಎಂ ಗರಂ

Public TV
2 Min Read
BGK Siddaramaih 2

– ಬಿಜೆಪಿಯವರು ಸತ್ಯ ಹರಿಶ್ಚಂದ್ರರಾಗಿದ್ದರೆ ಜಂಟಿ ಸದನ ಸಮಿತಿಗೆ ರಫೇಲ್ ಪ್ರಕರಣ ಒಪ್ಪಿಸಲಿ
– ನಾನೇನು ಅವನ ನಾಲಿಗೆನಾ? ದಿನೇಶ್ ಗುಂಡೂರಾವ್ ವಿರುದ್ಧ ಕಿಡಿ

ಬಾಗಲಕೋಟೆ: ಬಾದಾಮಿ ಗೃಹಕಚೇರಿಯಲ್ಲಿ ನಡೆದಿದ್ದ ಅಹವಾಲು ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ ಗರಂ ಆದ ಪ್ರಸಂಗ ಇಂದು ನಡೆಯಿತು.

ಬಾದಾಮಿ ತಾಲೂಕಿನ ತಳಕವಾಡ ಗ್ರಾಮದ ನಿವಾಸಿ ಪ್ರೇಮಾ, ಸಿದ್ದರಾಮಯ್ಯ ಅವರ ಕೈಮುಟ್ಟಿ ನಮಸ್ಕರಿಸಿ ಮನವಿಪತ್ರ ಸಲ್ಲಿಸಿ ಸಮಸ್ಯೆ ತೋಡಿಕೊಂಡರು. ಈ ವೇಳೆ ಕೋಪದಲ್ಲಿದ್ದ ಮಾಜಿ ಸಿಎಂ ಏಯ್.. ನಡೆಯಮ್ಮ ಎಂದು ಗದರಿಸಿದರು. ಬಳಿಕ ಮಾಧ್ಯಮದವರನ್ನು ನೋಡಿ ತಕ್ಷಣವೇ ಎಚ್ಚೆತ್ತುಕೊಂಡು ಮಹಿಳೆ ಸಮಸ್ಯೆ ಪರಿಹರಿಸುವಂತೆ ಸಿಪಿಐಗೆ ಸೂಚಿಸಿದರು.

BGK Siddaramaih 1 1

ಪತಿಯಿಂದ ನನಗೆ ಅನ್ಯಾಯವಾಗಿದೆ. ಕಳೆದ ಮೂರು ತಿಂಗಳಿನಿಂದ ಪೊಲೀಸ್ ಠಾಣೆಗೆ ಅಲೆದಾಡಿದರು ನ್ಯಾಯ ಸಿಗುತ್ತಿಲ್ಲ. ನನಗೆ ನ್ಯಾಯ ಕೊಡಿಸಿ ಎಂದು ಪ್ರೇಮಾ ಮಾಜಿ ಸಿಎಂ ಸಿದ್ದರಾಮಯ್ಯ ಬಳಿ ಸಿಪಿಐ ಬಳಿ ಅಳಲು ತೋಡಿಕೊಂಡರು.

ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಸಂಪುಟ ವಿಸ್ತರಣೆಯಲ್ಲಿ ಒಂದೆರಡು ಸ್ಥಾನಗಳು ಬದಲಾಗಬಹುದು, ಉತ್ತರ ಕರ್ನಾಟಕಕ್ಕೆ ಅನ್ಯಾವಾಗಲು ನಾನು ಬಿಡುವುದಿಲ್ಲ. ಉತ್ತರ ಕರ್ನಾಟಕಕ್ಕೂ ನ್ಯಾಯ ಸಿಗಬೇಕು, ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಪ್ರದೇಶಕ್ಕೂ ನ್ಯಾಯ ಸಿಗಬೇಕು ಎಂದರು.

BGK Siddaramaih 2 1

ಕೆಲವು ಹಾಲಿ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರಾವ್ ಹೇಳಿದ್ದಾರೆ. ನಿಮ್ಮ ಅಭಿಪ್ರಾಯವೇನು ಮಾಧ್ಯಮದವರು ಪ್ರಶ್ನಿಸುತ್ತಿದ್ದಂತೆ ಗರಂ ಆದ ಮಾಜಿ ಸಿಎಂ, ನಾನೇನು ಅವನ ನಾಲಿಗೆನಾ? ಈ ಪ್ರಶ್ನೆ ನನ್ನನ್ಯಾಕೆ ಕೇಳ್ತೀರಿ, ಅವ್ರನ್ನೇ ಕೇಳಿ ಎಂದು ಗುಡುಗಿದರು. ವಿಧಾನ ಪರಿಷತ್ ಸಭಾಪತಿ ಆಯ್ಕೆ ವಿಚಾರದ ಬಗ್ಗೆ ನಿಮಗೆ ಸಮಾಧಾನವಿದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯದಲ್ಲಿ ಸಮಾಧಾನ, ಅಸಮಾಧಾನ ಎಂಬ ವಿಚಾರ ಇರುವುದಿಲ್ಲ, ಸಭಾಪತಿ ಸ್ಥಾನಕ್ಕೆ ನಾನು ಎಸ್.ಆರ್.ಪಾಟೀಲ್ ಹೆಸರು ಸೂಚಿಸಿದ್ದು ನಿಜ. ಆದರೆ ಆಯ್ಕೆ ಮಾಡಿದ್ದು ಹೈಕಮಾಂಡ್ ಎಂದರು.

siddaramaiah

ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣದ ಕುರಿತು ಮಾತನಾಡಿದ ಮಾಜಿ ಸಿಎಂ, ವಿಮಾನ ಖರೀದಿಯಲ್ಲಿ ಬಿಜೆಪಿ ಭ್ರಷ್ಟಾಚಾರವನ್ನೇ ಮಾಡಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿಲ್ಲ. ಬಿಜೆಪಿಯವರು ಸತ್ಯ ಹರಿಶ್ಚಂದ್ರರು ಆಗಿದ್ದರೆ ಜಂಟಿ ಸದನ ಸಮಿತಿಗೆ ಪ್ರಕರಣ ಕೊಡಲಿ ನೋಡೋಣ ಎಂದು ಸವಾಲ್ ಎಸೆದರು.

ಕಳ್ಳತನ ಮಾಡಿ ಸಿಕ್ಕಿ ಹಾಕಿಕೊಳ್ಳುತ್ತೇವೆ ಅಂತಾ ಅವರು ಜಂಟಿ ಸದನ ಸಮಿತಿಗೆ ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣ ಒಪ್ಪಿಸುತ್ತಿಲ್ಲ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಕಾಲದ ಬೊಫೋರ್ಸ್ ಹಗರಣವನ್ನು ಜಂಟಿ ಸದನ ಸಮಿತಿಗೆ ಕೊಟ್ಟಿದ್ದರು. ಹಾಗೇ ಬಿಜೆಪಿಯವರು ರಫೇಲ್ ಡೀಲ್ ಹಗರಣವನ್ನು ಒಪ್ಪಿಸಲಿ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *