DistrictsHassanKarnatakaLatestMain Post

ನಾವು ಹಿಂದೂ ಪರ-ವಿರೋಧವೂ ಅಲ್ಲ, ಮುಸಲ್ಮಾನ್, ಕ್ರಿಶ್ಚಿಯನ್ ಪರ-ವಿರೋಧವೂ ಅಲ್ಲ: ಸಿದ್ದರಾಮಯ್ಯ

ಹಾಸನ: ನಾವು ಹಿಂದೂ ಪರ ವಿರೋಧವೂ ಅಲ್ಲ. ಮುಸಲ್ಮಾನ್, ಕ್ರಿಶ್ಚಿಯನ್ ಪರ ವಿರೋಧ ಅಲ್ಲ. ಎಲ್ಲರನ್ನು ಸಮಾನತೆಯಿಂದ ಕಾಣುವುದು ಕಾಂಗ್ರೆಸ್ ಪಕ್ಷದ ಧ್ಯೇಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

hbl (2)

ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಯಾರೇ ಗಲಭೆ ಮಾಡಿದರೂ ತಪ್ಪಿತಸ್ಥರು ತಪ್ಪಿತಸ್ಥರೇ. ನನಗೇ ಆ ಬಗ್ಗೆ ಪೂರ್ಣವಾಗಿ ಗೊತ್ತಿಲ್ಲ, ಆದರೆ ನಿರಾಪರಾಧಿಗಳನ್ನು ಅರೆಸ್ಟ್ ಮಾಡಬಾರದು. ತಪ್ಪು ಮಾಡದವರ ಮೇಲೆ ಕ್ರಮ ಕೈಗೊಳ್ಳಬಾರದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: `ಕೆಜಿಎಫ್ 2′ ಸಕ್ಸಸ್ ಅಲೆಗೆ ಬೆದರಿದ ಬಾಲಿವುಡ್: ಚಿತ್ರರಂಗಕ್ಕೆ ಮತ್ತೆ ಶಕ್ತಿ ತುಂಬಲು ಶಾರುಖ್ ಖಾನ್ ಪ್ಲ್ಯಾನ್‌

ಇದೇ ವೇಳೆ ಭ್ರಷ್ಟಾಚಾರಕ್ಕಿಂತ ವ್ಯಾಪಕವಾಗಿ ಕೋಮು ವಿಷಯ ಹರಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಭ್ರಷ್ಟಾಚಾರ ಮುಚ್ಚಿಹಾಕಲು ಕೋಮುವಾದ ಮುನ್ನಲೆಗೆ ತರುತ್ತಿದ್ದಾರೆ. ಇವತ್ತು ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ ಮುಚ್ಚಿಕೊಳ್ಳುವ ಸಲುವಾಗಿ ಕೋಮುವಾದ ಮುನ್ನಲೆಗೆ ತರುತ್ತಿದ್ದಾರೆ, ದ್ವೇಷದ ರಾಜಕಾರಣ ಮುನ್ನಲೆಗೆ ತರುತ್ತಿದ್ದಾರೆ. ಕೇಂದ್ರದಲ್ಲಿ 8 ವರ್ಷದಿಂದ ಅಧಿಕಾರದಲ್ಲಿದ್ದಾರೆ. ಅವರ ಸಾಧನೆ ಏನು ಹೇಳಲಿ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಪತಿ ಸಾವಿನ ಸುದ್ದಿ ಕೇಳಿ ಮಗುವಿನೊಂದಿಗೆ ಗೃಹಿಣಿ ಆತ್ಮಹತ್ಯೆ

ಕಾನೂನು ಸುವ್ಯವಸ್ಥೆ ಕಾಪಾಡುವವರು ಯಾರು? ಸರ್ಕಾರದಲ್ಲಿರುವವರು ಮಾಡಬೇಕು. ಇಂದು ಹಿಜಬ್ ಅಥವಾ ಹಲಾಲ್, ಭಗವದ್ಗೀತೆ ಸಮಸ್ಯೆಗಳನ್ನಾಗಲಿ, ದೇವಸ್ಥಾನ ಬಳಿ ವ್ಯಾಪಾರ ಇವುಗಳನ್ನೆಲ್ಲಾ ಮಾಡಿದವರು ಯಾರು. ಈ ಎಲ್ಲಾ ಸಮಸ್ಯೆಗಳಲ್ಲಿ ನಾವು ಯಾರ ಪರ ಇಲ್ಲ. ಸಂವಿಧಾನದ ವನ್ನ ನಾವು ನಂಬುತ್ತೇವೆ. ಸಂವಿಧಾನ ಬಹುತ್ವ ದೇಶ ಅನ್ನುತ್ತದೆ. ಎಲ್ಲಾ ಧರ್ಮ ಭಾಷೆ ಒಟ್ಟಿಗೆ ಹೊಗಬೇಕೆನ್ನುತ್ತದೆ. ಸರ್ಕಾರ ಯಾವುದೇ ಧರ್ಮದ ಸರ್ಕಾರ ಅಲ್ಲ. ನಾವು ಸಂವಿಧಾನ ಪರ ಇದ್ದೇವೆ. ಅದನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಆ ಕೆಲಸ ನಾವು ಮಾಡುತ್ತೇವೆ. ನಾವು ಹಿಂದೂ ಪರ ವಿರೋಧವೂ ಅಲ್ಲ. ಮುಸಲ್ಮಾನ್, ಕ್ರಿಶ್ಚಿಯನ್ ಪರ ವಿರೋಧ ಅಲ್ಲ. ಎಲ್ಲರನ್ನು ಸಮಾನತೆಯಿಂದ ಕಾಣುವುದು ಕಾಂಗ್ರೆಸ್ ಪಕ್ಷದ ಧ್ಯೇಯ ಎಂದು ತಿಳಿಸಿದ್ದಾರೆ.

Leave a Reply

Your email address will not be published.

Back to top button