ಬೆಂಗಳೂರು: ಎದುರಾಳಿಗಳ ಬಾಯಿ ಮುಚ್ಚಿಸಲು ಹೋಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿಪಕ್ಷ ನಾಯಕನ ಸ್ಥಾನ ಹಾಗೂ ಸಿಎಲ್‍ಪಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಅದೇ ರಾಜೀನಾಮೆ ಈಗ ರಾಜಕೀಯ ಎದುರಾಳಿಗಳಿಗೆ ಪ್ರಬಲ ಅಸ್ತ್ರವಾಗಿ ಸಿಕ್ಕಿದೆ. ಈ ಮೂಲಕ ಯಾವುದೋ ಎಮೋಷನಲ್ ನಲ್ಲಿ ಕೊಟ್ಟ ರಾಜೀನಾಮೆ ನಾಯಕನನ್ನ ಈಗ ಬಿಟ್ಟು ಬಿಡದೆ ಕಾಡತೊಡಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಟ್ಟು ತಪ್ಪು ಮಾಡಿ ಬಿಟ್ನಾ ಅಂತಾ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಶನಿವಾರ ಪರಮೇಶ್ವರ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಿದ್ದರಾಮಯ್ಯ ವಿಪಕ್ಷ ನಾಯಕನ ಸ್ಥಾನ ಹಾಗೂ ಸಿಎಲ್‍ಪಿ ನಾಯಕನ ಸ್ಥಾನ ಎರಡರಲ್ಲು ಮುಂದುವರಿಯುವ ಇಚ್ಚೆ ವ್ಯಕ್ತಪಡಿಸಿದ್ದಾರೆ. ಎಲ್ಲಾ ಸ್ಥಾನಗಳಿಗೂ ಹೊಸಬರ ಆಯ್ಕೆ ನಡೆಯಬಹುದು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.
Advertisement
Advertisement
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ನಾನು ರಾಜೀನಾಮೆ ವಾಪಸ್ ಪಡೆಯಲ್ಲ. ಆದರೆ ಹೈಕಮಾಂಡ್ ಹೇಳಿದರೆ ಯೋಚಿಸುತ್ತೇನೆ ಎಂದಿದ್ದಾರೆ. ಆ ಮೂಲಕ ಸಿಎಲ್‍ಪಿ ಹಾಗೂ ವಿಪಕ್ಷ ನಾಯಕನ ಸ್ಥಾನಕ್ಕೆ ಕೊಟ್ಟ ರಾಜೀನಾಮೆಯನ್ನ ಹೈಕಮಾಂಡ್ ಹೇಳಿದರೆ ವಾಪಸ್ ಪಡೆಯುವ ಇಚ್ಚೆ ವ್ಯಕ್ತಪಡಿಸಿದ್ದಾರೆ.
Advertisement
ಸಿದ್ದರಾಮಯ್ಯ ತಾವು ರಾಜೀನಾಮೆ ಕೊಟ್ಟ ಸ್ಥಾನದಲ್ಲೇ ಮುಂದುವರಿಯಲು ಆಸೆ ಪಡುತ್ತಿದ್ದಾರೆ ಎಂಬುದು ಸಭೆಯಲ್ಲಿರುವ ನಾಯಕರಿಗೆ ಖಚಿತವಾಗಿದೆ. ಆದರೆ ಯಾವುದೋ ಎಮೋಷನಲ್‍ನಲ್ಲಿ ಕೊಟ್ಟ ರಾಜೀನಾಮೆ ಈಗ ಮಾಜಿ ಸಿಎಂಗೆ ಕೈಕೈ ಹಿಸುಕಿ ಕೊಳ್ಳುವಂತೆ ಮಾಡಿದ್ದು, ಅದೇ ಕನವರಿಕೆಯಲ್ಲಿ ದಿನ ಕಳೆಯುವಂತಾಗಿದೆ.