ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ 2.0 ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಿದೆ. ಆದರೆ ಈ ಬಾರಿ ಬಜೆಟ್‍ನಲ್ಲಿ ಬೆಲೆ ಇಳಿಕೆಗಿಂತ ಬೆಲೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಬಜೆಟ್ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದ್ದಾರೆ.
ಮೊದಲ ಬಾರಿಗೆ ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಈ ಬಾರಿಯ ಕೇಂದ್ರ ಬಜೆಟ್ ಸಂಕ್ಷಿಪ್ತವಾಗಿದೆ. ಎಲ್ಲವೂ ಸೂರ್ಯನ ಕೆಳಗಿದೆ. ಆದರೆ ಯಾವುದೂ ಕೈಗೆ ಸಿಗಲ್ಲ ಎಂದು ಬರೆದುಕೊಂಡಿದ್ದಾರೆ.
Advertisement
Budget in a nutshell!!
Everything under the sun but nothing to catch it!!#Budget2019
— Siddaramaiah (@siddaramaiah) July 5, 2019
Advertisement
“ದೂರದೃಷ್ಟಿ ಇಲ್ಲದ, ನಿರಾಶಾದಾಯಕ ಕೇಂದ್ರ ಬಜೆಟ್ ನರೇಂದ್ರ ಮೋದಿ ಸರ್ಕಾರದ ಹುಸಿ ಹೆಗ್ಗಳಿಕೆಗಳ ಮಹಾಪೂರದ ಗುಚ್ಚ. ರೈತರು, ಬಡವರು ಮಧ್ಯಮ ವರ್ಗಗಳಿಗೆ ಮತ್ತು ದೇಶದ ಸಮಗ್ರ ಅಭಿವೃದ್ಧಿಗೆ ಗುರುತರ ಹೊಸ ಯೋಜನೆಗಳಿಲ್ಲ. 2030ಕ್ಕೆ ಏನಾಗಬಹುದೆಂಬ ಊಹೆಗಿಂತ 2019ರಲ್ಲಿ ಏನು ದೇಶಕ್ಕೆ ಕೊಡುವಿರಿ ಎಂಬುದರ ಸ್ಪಷ್ಟತೆ ಇಲ್ಲ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
Advertisement
ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‍ನಲ್ಲಿ ಚಿನ್ನ, ಪೆಟ್ರೋಲ್, ಡೀಸೆಲ್, ಆಟೋ ಬಿಡಿಭಾಗಗಳು, ರಬ್ಬರ್, ತಂಬಾಕು ಉತ್ಪನ್ನ, ಮಾರ್ಬಲ್, ಹೀಗೆ ಅನೇಕ ವಸ್ತುಗಳ ಬೆಲೆ ಏರಿಕೆ ಆಗಿದೆ. ಹೀಗಾಗಿ ನೀರೀಕ್ಷೆಗೆ ತಕ್ಕಂತೆ ಬಜೆಟ್ ಇಲ್ಲ ಎಂದು ನಿರಾಸೆ ವ್ಯಕ್ತಪಡಿಸಿದ್ದಾರೆ.