ಚಿನ್ನದ ಕುರ್ಚಿ, ಕಮೋಡ್, ಕಿರೀಟ ಬಂದಿದ್ದು ಹೇಗೆ: ರೆಡ್ಡಿಗೆ ಸಿದ್ದರಾಮಯ್ಯ ಪ್ರಶ್ನೆ

Public TV
1 Min Read
SMG SIDDU

ಶಿವಮೊಗ್ಗ: ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿಯವರು ರಾಜಮನೆತನದಿಂದ ಬಂದವರಾ? ಬೇಕಾದಷ್ಟು ಆಸ್ತಿಯಿತ್ತೆ? ಚಿನ್ನದ ಕುರ್ಚಿ, ಕಮೋಡ್, ಕಿರೀಟಗಳನ್ನು ಮಾಡಿಸಿಕೊಂಡಿದ್ದು ಹೇಗೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ, ರೆಡ್ಡಿ ಜೊತೆ ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ. ಅವನು ಬರಲಿ ಅಂತ ಏಕವಚನದಲ್ಲೇ ಜನಾರ್ದನ ರೆಡ್ಡಿಗೆ ಸವಾಲೆಸೆದ್ರು.

vlcsnap 2018 10 30 09h06m02s50 e1540870600691

ನೂರಾರು ಕೋಟಿ ಹಣ ಖರ್ಚು ಮಾಡಿ ಮಗಳ ಮದುವೆ ಮಾಡಿದ್ದಾರೆ. ಅಲ್ಲದೇ ಅವರು ಮನೆ ಕಟ್ಟಿದ್ದಾರೆ ಅಲ್ಲವೇ? ಅದಕ್ಕೆಲ್ಲ ಎಲ್ಲಿಂದ ಹಣ ಬಂತು ಅಂತ ಪ್ರಶ್ನಿಸಿದ್ರು. ನಾನು 60 ವರ್ಷದಿಂದ ಇದ್ದೇನೆ. ಮೈಸೂರಿನಲ್ಲಿ ನನ್ನಿಂದ ಒಂದು ಮನೆ ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ ನೋಡಿ. ಸುಳ್ಳು ಹೇಳೋದಕ್ಕೂ ಇತಿಮಿತಿ ಬೇಕು. ಲೂಟಿ ಹೊಡೆಯದೇ ಸುಮ್ ಸುಮ್ನೆ ಕೋರ್ಟ್ ಜೈಲಿಗೆ ಕಳುಹಿಸುತ್ತಾ? ಅವರನ್ನು ನಾನಲ್ಲ, ಜಡ್ಜ್ ಜೈಲಿಗೆ ಕಳುಹಿಸಿದ್ದು. ಜಾಮೀನು ನಿರಾಕರಿಸಿ ನಾಲ್ಕೂವರೆ ವರ್ಷ ಜೈಲಿಗೆ ಹೋಗಲು ಕಾರಣ ಜಡ್ಜ್ ಅಂತ ನಕ್ಕುಬಿಟ್ಟರು.

ಸಾಕ್ಷಿಗಳಿಲ್ಲದೇ ಜೈಲಿಗೆ ಕಳುಹಿಸಕ್ಕಾಗುತ್ತೇನ್ರಿ? ನಾನು ಹೇಳಿದ ತಕ್ಷಣ ಜಡ್ಜ್ ಜೈಲಿಗೆ ಕಳುಹಿಸೋದಾ? ಎಫ್‍ಐಆರ್ ಸಾಕ್ಷಿ ಎಲ್ಲ ಪರಿಗಣಿಸಿ ಜೈಲಿಗೆ ಕಳುಹಿಸಿದ್ದಾರೆ. ಸಾಕ್ಷಿ ಇಲ್ಲದೇ ಯಾರೂ ಯಾರನ್ನೂ ಜೈಲಿಗೆ ಕಳುಹಿಸಲ್ಲ ಅಂತ ಸ್ಪಷ್ಟಪಡಿಸಿದ್ರು.

siddaramaiah 2 1

ಕ್ಷಮಿಸುವುದೇ ಮನುಷ್ಯನಿಗೆ ದೊಡ್ಡ ಗುಣ. ಆದ್ರೆ ಜನಾರ್ದನ ರೆಡ್ಡಿ ಮನುಷ್ಯತ್ವ ಇಲ್ಲದ ಮನುಷ್ಯ. ಕ್ರಿಮಿನಲ್ ಬ್ರೈನ್ ಇರುವ ಮನುಷ್ಯ. ರೆಡ್ಡಿಗೆ ಕಲ್ಚರ್ ಇಲ್ಲ. ಅದಕ್ಕೆ ಅವರನ್ನ, ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು. ರಾಜಕಾರಣದಲ್ಲಿ ಟೀಕೆ ಬೇರೆ, ಕುಟುಂಬದ ಬಗ್ಗೆ ಮಾತಾಡುವುದನ್ನ ಸಾರ್ವಜನಿಕವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *