ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಸ್ವಗ್ರಾಮ ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವದಲ್ಲಿ ನೃತ್ಯ ಮಾಡಿದ್ದಾರೆ.
ಸ್ನೇಹಿತರು ಮತ್ತು ಬೆಂಬಲಿಗರ ಜೊತೆ 40 ನಿಮಿಷಗಳ ಕಾಲ ಜಾನಪದ ವಾದ್ಯಗಳ ಹಿಮ್ಮೆಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದ್ದಾರೆ. ಉಪಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ನೃತ್ಯ ಮಾಡಿದ್ದ ಸಿದ್ದರಾಮಯ್ಯ ಈಗ 15 ವರ್ಷದ ಬಳಿಕ ಗ್ರಾಮದ ಜಾತ್ರೆಯಲ್ಲಿ ಸ್ಟೆಪ್ ಹಾಕಿದ್ದಾರೆ. ಇದನ್ನೂ ಓದಿ: ಪತ್ರಕರ್ತರಿಗೆ ಮಧ್ಯರಾತ್ರಿಯ ಸರ್ಪ್ರೈಸ್ ಕೊಟ್ಟ RRR ಟೀಮ್..!
Advertisement
Advertisement
70ರ ಹರೆಯದ ಸಿದ್ದರಾಮಯ್ಯ ಅವರ ನೃತ್ಯ ನೋಡಲು ಗ್ರಾಮಸ್ಥರು ಮುಗಿ ಬಿದ್ದಿದ್ದರು. ನೂಕು ನುಗ್ಗಲು ಮಧ್ಯೆ ಸಿದ್ದರಾಮಯ್ಯ ನೃತ್ಯ ಮಾಡಿ ಜನರನ್ನು ರಂಜಿಸಿದ್ದಾರೆ.
Advertisement
ತಂದೆಯ ನೃತ್ಯದ ಬಗ್ಗೆ ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ, ಅಪ್ಪ ಪ್ರತಿ ವರ್ಷ ಜಾತ್ರೆಯ ವೇಳೆ ವೀರನ ಕುಣಿತ ಮಾಡುತ್ತಿದ್ದರು. ಆದರೆ ಈ ವಯಸ್ಸಿನಲ್ಲಿ ಅಪ್ಪ ವೀರನ ಕುಣಿತ ಮಾಡುತ್ತಾರೆ ಅಂತ ಅಂದುಕೊಂಡಿರಲಿಲ್ಲ. ನಾನು ನೃತ್ಯ ಮಾಡುವುದಿಲ್ಲ ಎಂದು ತಂದೆ ಮೊದಲೇ ಹೇಳಿದ್ದರು. ಆದರೆ ಜನರ ಉತ್ಸಾಹ ನೋಡಿ ಅವರು ನೃತ್ಯ ಮಾಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಮೇಕೆದಾಟು: ತಮಿಳುನಾಡು ವಿರುದ್ಧದ ಖಂಡನಾ ನಿರ್ಣಯಕ್ಕೆ ಜೆಡಿಎಸ್ ಬೆಂಬಲ
Advertisement
ತಂದೆ ಶಾಲೆಯಲ್ಲಿ ವೀರನ ಕುಣಿತ ಕಲಿತಿದ್ದರು. ಹೀಗಾಗಿ ಅವರಿಗೆ ಪ್ರತಿಯೊಂದು ಸ್ಟೆಪ್ ನೆನಪಿದೆ ಎಂದು ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.