ಬೆಂಗಳೂರು: ಹೈಕಮಾಂಡಿಗೆ ಸಡ್ಡು ಹೊಡೆದು ನಿಂತಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ. ಸ್ವತ: ಪಕ್ಷದ ಹೈಕಮಾಂಡ್ ನಿಮ್ಮ ಅಭಿಪ್ರಾಯ ಹೇಳಿ ಎಂದರು ಏನು ಹೇಳದೇ ಸೈಲೆಂಟಾಗಿಯೆ ಸವಾಲು ಹಾಕಿದ್ದಾರೆ.
ವಿಪಕ್ಷ ಹಾಗೂ ಸಿಎಲ್‍ಪಿ ಪ್ರತ್ಯೇಕಿಸುವುದಾದರೆ ನನ್ನ ರಾಜೀನಾಮೆಯನ್ನು ಅಂಗೀಕರಿಸಿ ಯಾರಿಗಾದರು ಆ ಎರಡು ಸ್ಥಾನಮಾನವನ್ನ ಕೊಡಿ ಎಂದು ಸಿದ್ದರಾಮಯ್ಯ ಹೈಕಮಾಂಡ್ ಮುಂದೆ ಈಗಲೇ ತಿಳಿಸಿದ್ದಾರೆ. ಆದರೂ ಕಾಂಗ್ರೆಸ್ ಹೈಕಮಾಂಡ್ ವಿರೋಧ ಪಕ್ಷಕ್ಕೆ ಸಿದ್ದರಾಮಯ್ಯ ಹೆಸರನ್ನು ಬಹುತೇಕ ಅಂತಿಮ ಮಾಡಿದೆ.
Advertisement
Advertisement
ಈಗ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ವಿಷಯದಲ್ಲಿ ಸ್ವಲ್ಪ ಗೊಂದಲ ಉಂಟಾಗಿದೆ. ಸಿಎಲ್‍ಪಿಗೆ ಪ್ರತ್ಯೇಕ ನೇಮಕ ಮಾಡುವುದಾದರೆ ನಿಮ್ಮ ಆಯ್ಕೆ ಯಾರು ಅಂತ ಹೈಕಮಾಂಡ್ ಸಿದ್ದರಾಮಯ್ಯರನ್ನು ಕೇಳಿದೆ. ಆದರೆ ಯಾರ ಹೆಸರನ್ನು ಸೂಚಿಸಿದರೆ ನೀಡಿದರೆ ವಿಪಕ್ಷ ನಾಯಕನ ಸ್ಥಾನ ಹಾಗೂ ಸಿಎಲ್‍ಪಿ ಎರಡು ನನಗೆ ಕೊಡಿ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಸ್ವತ: ಹೈಕಮಾಂಡ್ ಕೇಳಿದರೂ ಸಿದ್ದರಾಮಯ್ಯ ಮೌನಕ್ಕೆ ಶರಣಾಗಿದ್ದಾರೆ ಹೊರತು ಯಾರ ಹೆಸರನ್ನು ಸೂಚಿಸುತ್ತಿಲ್ಲ.
Advertisement
ಈ ಮೂಲಕ ಹೈಕಮಾಂಡ್ ಸೂಚನೆಗೆ ಸಿದ್ದರಾಮಯ್ಯ ಡೋಂಟ್ ಕೇರ್ ಎಂದಿದ್ದಾರೆ. ವಿಪಕ್ಷ ಹಾಗೂ ಸಿಎಲ್‍ಪಿಗೆ ಆಯ್ಕೆ ಮಾಡಿದರೆ ನನ್ನನ್ನೆ ಆಯ್ಕೆ ಮಾಡಿ ಎಂದು ಸಿದ್ದರಾಮಯ್ಯ ಸೆಡ್ಡು ಹೊಡೆದಿದ್ದು ಈಗ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಬೇರೆಯದೆ ರೀತಿಯ ಚರ್ಚೆಗೆ ಕಾರಣವಾಗಿದೆ.