ಬೆಂಗಳೂರು: ಮಾಜಿ ಶಾಸಕ ಮಧು ಬಂಗಾರಪ್ಪ ಅಖಾಡಕ್ಕಿಳಿಯಲು ಸಿದ್ದರಾಮಯ್ಯ ಅವರು ಕಾರಣರಾಗಿದ್ದು, ಮಾಜಿ ಮುಖ್ಯಮಂತ್ರಿಯ ಈ ನಡೆಯ ಹಿಂದಿದೆ ಸಾಕಷ್ಟು ರಾಜಕೀಯ ಲೆಕ್ಕಾಚಾರಗಳಿವೆ.
ಕೈ ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕ್ತಿದ್ದಂತೆ ಸಿದ್ದರಾಮಯ್ಯ ಆಕ್ಟೀವ್ ಆಗಿದ್ದಾರೆ. ತಮ್ಮ ಹಳೆಯ ಸಿಟ್ಟು ಮರೆತು ಎಚ್‍ಡಿಡಿ, ಎಚ್‍ಡಿಕೆಗೆ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಶಿವಮೊಗ್ಗ ಗೆಲ್ಲಬೇಕಾದರೆ ಮಧು ಬಂಗಾರಪ್ಪ ಅಭ್ಯರ್ಥಿಯಾದರೆ ಮಾತ್ರ ಸಾಧ್ಯ ಅಂತ ಮಧು ಸ್ಪರ್ಧೆಯ ಲಾಭ ನಷ್ಟದ ಲೆಕ್ಕಾಚಾರವನ್ನ ಎಳೆ ಎಳೆಯಾಗಿ ಸಿದ್ದರಾಮಯ್ಯ ಅವರು ಬಿಡಿಸಿಟ್ಟಿದ್ದ ಎಚ್‍ಡಿ ದೇವೇ ಗೌಡ ಹಾಗೂ ಎಚ್‍ಡಿ ಕುಮಾರಸ್ವಾಮಿ ಮುಂದೆ ಬಿಚ್ಚಿಟ್ಟಿದ್ದಾರೆ. ಇಷ್ಟು ಮಾತ್ರವಲ್ಲದೇ ಈ ಬಗ್ಗೆ ಸಚಿವ ಡಿಕೆ ಶಿವಕುಮಾರ್ ಅವರಿಗೂ ಕರೆ ಮಾಡಿ ಮನವೊಲಿಸಿದ್ದಾರೆ ಎನ್ನಲಾಗಿದೆ.
ಈ ಎಲ್ಲ ಮಾತುಕತೆಗಳ ಬಳಿಕ ಸಿಎಂ ಅವರು ವಿದೇಶ ಪ್ರವಾಸದಲ್ಲಿದ್ದ ಮಧುಬಂಗಾರಪ್ಪಗೆ ವಾಪಸ್ ಬರುವಂತೆ ಸೂಚನೆ ನೀಡಿದ್ದು, ನೇರವಾಗಿ ಶಿವರಾಜ್ ಕುಮಾರ್ ಅವರ ನಿವಾಸಕ್ಕೆ ಬರುವಂತೆ ಹೇಳಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಗೀತಾ ಶಿವರಾಜ್‍ಕುಮಾರ್ ಸಮ್ಮುಖದಲ್ಲೇ ನಡೆಯಿತು. ಒಟ್ಟಿನಲ್ಲಿ ಬಿಜೆಪಿಗೆ ಟಕ್ಕರ್ ಕೊಡಲು ಸಿದ್ದರಾಮಯ್ಯ ಅವರು ಒಂದೂವರೆ ದಶಕದ ಮುನಿಸು ಬಿಟ್ರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv