ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಅಧಿಕಾರ ಕಳೆದುಕೊಂಡ ಹತಾಶೆಯಿಂದ ಹೊರಬಂದಂತೆ ಕಾಣುತ್ತಿಲ್ಲ, ಮಾನ್ಯ ಬಿಎಸ್‍ವೈ ಅವರೇ ಇನ್ನಾದರೂ ಭ್ರಮೆಯಿಂದ ಹೊರಬನ್ನಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟಾಂಗ್ ನೀಡಿದ್ದಾರೆ.
ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಬಿ.ಎಸ್ ಯಡಿಯೂರಪ್ಪ ಅವರು ಇನ್ನೂ ಅಧಿಕಾರ ಕಳೆದುಕೊಂಡ ಹತಾಶೆಯಿಂದ ಹೊರಬಂದಂತೆ ಕಾಣುತ್ತಿಲ್ಲ. ಮೂರು ಹೊತ್ತು ಸರ್ಕಾರ ಬೀಳುತ್ತೆ ಎಂದು ಸುಳ್ಳು ಹೇಳುತ್ತಾ ತಮಗೆ ತಾವೇ ಸಂತೈಸಿಕೊಳ್ಳುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದ್ದು, ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಮಾನ್ಯ ಬಿಎಸ್‍ವೈ ಅವರೇ ಅವರೇ ಇನ್ನಾದರೂ ಭ್ರಮೆಯಿಂದ ಹೊರಬನ್ನಿ ಎಂದು ಬರೆದುಕೊಂಡಿದ್ದಾರೆ.
Advertisement
ಬಿ.ಎಸ್.ಯಡಿಯೂರಪ್ಪನವರಿನ್ನೂ ಅಧಿಕಾರ ಕಳೆದುಕೊಂಡ ಹತಾಶೆಯಿಂದ ಹೊರಬಂದಂತೆ ಕಾಣುತ್ತಿಲ್ಲ, ಮೂರು ಹೊತ್ತು ಸರ್ಕಾರ ಬೀಳುತ್ತೆ ಎಂದು ಸುಳ್ಳು ಹೇಳುತ್ತಾ ತಮಗೆ ತಾವೇ ಸಂತೈಸಿಕೊಳ್ಳುತ್ತಿದ್ದಾರೆ. ಸರ್ಕಾರ ಸುಭದ್ರವಾಗಿದ್ದು, ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಮಾನ್ಯ @BSYBJP ಅವರೇ ಇನ್ನಾದರೂ ಭ್ರಮೆಯಿಂದ ಹೊರಬನ್ನಿ.
— Siddaramaiah (@siddaramaiah) October 16, 2018
Advertisement
ಮಂಗಳವಾರ ದೋಸ್ತಿ ಸರ್ಕಾರದಲ್ಲಿ ಏರುಪೇರಾಗುತ್ತದೆ ಹೇಳಿಕೆ ನೀಡಿದ್ದ ಯಡಿಯೂರಪ್ಪ ಅವರು ಇಂದು ನಾನು ಅಂತಹ ಹೇಳಿಕೆ ನೀಡಿಲ್ಲ ಎಂದು ಹೇಳುವ ಮೂಲಕ ಯೂ ಟರ್ನ್ ಮಾಡಿದ್ದರು. ಇದರ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ವ್ಯಂಗ್ಯ ಮಾಡಿ ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ: ಬಳ್ಳಾರಿ, ಶಿವಮೊಗ್ಗ ಈಗಲೇ ಗೆದ್ದಿದ್ದೇವೆ, ಮಂಡ್ಯ ಫಲಿತಾಂಶಕ್ಕಾಗಿ ಮೋದಿ ಕಾಯ್ತಿದ್ದಾರೆ : ಬಿಎಸ್‍ವೈ
Advertisement
ಇದಕ್ಕೂ ಮುನ್ನ ಬಾಗಲಕೋಟೆಯ ಜಮಕಂಡಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಸಿದ್ದುನ್ಯಾಮಗೌಡ ಅವರು ಇಂದು ಸಚಿವ ಇದ್ದಿದ್ದರೆ ಮಂತ್ರಿ ಆಗುತ್ತಿದ್ದರು, ಆದರೆ ಅದು ಸಾಧ್ಯವಾಗಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಈ ಚುನಾವಣೆಯಲ್ಲಿ ಆನಂದ್ ನ್ಯಾಮಗೌಡ ಅವರಿಗೆ ಮತ ನೀಡಿ. ಈ ಮೂಲಕ ನ್ಯಾಮಗೌಡ ಅವರ ಪತ್ನಿಯ ದು:ಖ ಕಡಿಮೆ ಮಾಡಿ. ನಾನು 4 ದಿನಗಳ ಕಾಲ ಇಲ್ಲಿ ಪ್ರಚಾರ ನಡೆಸುತ್ತೇನೆ ಎಂದು ತಿಳಿಸಿದರು. ಇದನ್ನು ಓದಿ: ಅಲ್ಲೋಲ ಕಲ್ಲೋಲ ಠುಸ್ ಪಟಾಕಿ: ಯೂ ಟರ್ನ್ ಹೊಡೆದ ಬಿಎಸ್‍ವೈ