ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಒಂಟಿಯಲ್ಲ ಎಂದು ಮಾಜಿ ಶಾಸಕ ಚೆಲುವರಾಯಸ್ವಾಮಿ ಹೇಳಿದ್ದಾರೆ.
ಸಿದ್ದರಾಮಯ್ಯ ಅವರನ್ನು ಇಂದು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಒಂಟಿಯಲ್ಲ. ಒಂಟಿ ಅಂತಾ ಯಾರಾದ್ರೂ ಅನ್ಕೊಂಡ್ರೆ ಅವರಷ್ಟು ದಡ್ಡರು ಮತ್ಯಾರು ಇಲ್ಲ. ಎಲ್ಲ ಶಾಸಕರು, ಮಾಜಿ ಶಾಸಕರು, ಸಚಿವರು, ಸಂಸದರು ಸಿದ್ದರಾಮಯ್ಯ ಜೊತೆಗಿದ್ದಾರೆ ಅಂದ್ರು.
Advertisement
ನಾನು ಯಾವುದೇ ಕಾರಣಕ್ಕೂ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಲ್ಲ. ಎಂಪಿಗೆ ನಾನು ಸ್ಪರ್ಧಿಸಲ್ಲ. ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನ ಜೆಡಿಎಸ್ ನವರು ಟಾರ್ಗೆಟ್ ಮಾಡಿದ್ದಾರೆ ಇದು ಸತ್ಯ. ಇದು ಎಲ್ಲ ನಾಯಕರಿಗೂ ಗೊತ್ತಿರೋ ವಿಚಾರವಾಗಿದೆ. ಆದರೂ ನಾವು ಸಹಿಸ್ಕೊಂಡು ಇರಬೇಕಾಗಿದೆ ಅಂದ್ರು. ಇದನ್ನೂ ಓದಿ: ಸಿದ್ದರಾಮಯ್ಯ ಏಕಾಂಗಿ ಅಲ್ಲ, ಅವರು ಮಾಸ್ ಲೀಡರ್: ಹೆಚ್.ಎಂ.ರೇವಣ್ಣ
Advertisement
Advertisement
ಸಿದ್ದರಾಮಯ್ಯ ಮತ್ತೆ ಸಿಎಂ ಅನ್ನೋ ಹೇಳಿಕೆ ವಿಚಾರದ ಕುರಿತು ಮಾತನಾಡಿದ ಅವರು, ಅವರು ಬೇರೆ ಅರ್ಥದಲ್ಲಿ ಹೇಳಿದ್ದಾರೆ ನೀವು ಬೇರೆಯದಾಗೇ ತಿಳಿದುಕೊಂಡಿದ್ದೀರಿ. ಸರ್ಕಾರದಲ್ಲಿ ಪಕ್ಷದ ಪರವಾಗಿ ಡಿಸಿಎಂ ಪರಮೇಶ್ವರ್, ಸಚಿವ ಡಿಕೆ ಶಿವಕುಮಾರ್ ಇದ್ದಾರೆ. ಎಲ್ಲದರ ಬಗ್ಗೆ ಅವರೇ ಮಾತಾಡ್ತಾರೆ. ಲೋಕಸಭೆಯಲ್ಲಿ ಮೈತ್ರಿ ವಿಚಾರ ಹೈಕಮಾಂಡ್ ಗೆ ಬಿಟ್ಟದ್ದು ಅಂತ ತಿಳಿಸಿದ್ರು. ಇದನ್ನೂ ಓದಿ: ನಾನು ಮತ್ತೆ ಮುಖ್ಯಮಂತ್ರಿ ಆಗ್ತೀನಿ-ಸಿದ್ದರಾಮಯ್ಯ
Advertisement
ಕಾಂಗ್ರೆಸ್‍ನಲ್ಲಿದ್ದೀವಿ. ಸೋತಿದ್ದೀವಿ, ಅವರು ಗೆದ್ದಿದ್ದಾರೆ. ಮುಂದೆ ನಾವು ಗೆಲ್ತೀವಿ, ಅವರು ಸೋಲ್ತಾರೆ ನೋಡೋಣ ಅಂದ ಮಾಗಡಿ ಕ್ಷೇತ್ರದಲ್ಲಿ ಜೆಡಿಎಸ್ ದಬ್ಬಾಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಮಾಜಿ ಶಾಸಕ ಬಾಲಕೃಷ್ಣ, ಕಾಲಚಕ್ರ ಉರುಳುತ್ತದೆ. ನಾನು ನಾಲ್ಕು ಬಾರಿ ಗೆದ್ದಿದ್ದೇನೆ. ಈ ಬಾರಿ ಸೋತಿದ್ದೇನೆ, ಗೆದ್ದವರು ಸೋಲ್ತಾರೆ, ಸೋತೋರು ಗೆಲ್ತಾರೆ ಅಂದ್ರು. ಇದನ್ನೂ ಓದಿ: ನಾನು ಸಿಎಂ ಆಗ್ಬೇಕು ಅನ್ನೋದು ಜನರ ಇಚ್ಛೆ, ನನ್ನ ಆಸೆ ಅಲ್ಲ: ಸಿದ್ದರಾಮಯ್ಯ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv