ಬೆಂಗಳೂರು: ಭೂಗಳ್ಳರಿಗೆ ಕೆರೆ ಗಿಫ್ಟ್, ಇದು ಕರ್ನಾಟಕದಲ್ಲಿ ಮಾತ್ರ. ಅಚ್ಚರಿಯಾದ್ರೂ ಸತ್ಯ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಇಂಥದೊಂದು ಎಡವಟ್ಟು ಕಾಯ್ದೆ ಬಂದಿದ್ದು, ಭೂಗಳ್ಳರಿಗೆ ವರದಾನವಾಗಿದೆ.
ಕಾಂಗ್ರೆಸ್ ಸರ್ಕಾರದ ಕೊನೆಯ ಅಧಿವೇಶನದಲ್ಲಿ ಈ ತಿದ್ದುಪಡಿ ಬಿಲ್ ಪಾಸಾಗಿದೆ. ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಅನುಮತಿ ಕೊಟ್ರೆ ಕೆರೆಯಂಗಳದಲ್ಲಿ ರಸ್ತೆ, ಸೇತುವೆ ಸೇರಿದಂತೆ ಇನ್ನಿತರ ಕಾಮಗಾರಿ ನಡೆಸಬಹುದಂತೆ. ಆದ್ರೆ ಈ ಕಾಮಗಾರಿಯಿಂದ ಕೆರೆಗಳ ಮೂಲ ಸಾಮಥ್ರ್ಯಕ್ಕೆ ಧಕ್ಕೆಯಾಗಬಾರದು ಅಂತಾ ಬೇರೆ ಸೇರಿಸಲಾಗಿದೆ.
Advertisement
Advertisement
ಕೆರೆಯಂಗಳದಲ್ಲಿ ಯಾವುದೇ ಕಾಮಗಾರಿ ನಡೆಸುವಂತಿಲ್ಲ ಅನ್ನುವ ಸ್ಪಷ್ಟ ಆದೇಶವಿದ್ರೂ, ಪದೇ ಪದೇ ಕೆರೆ ನಿರ್ಲಕ್ಷ್ಯ ವಿಚಾರದಲ್ಲಿ ಎನ್‍ಜಿಟಿಯಿಂದ ಛೀಮಾರಿ ಹಾಕಿಸಿಕೊಂಡ್ರೂ ಬುದ್ಧಿ ಕಲಿಯದ ಕಾಂಗ್ರೆಸ್ ಸರ್ಕಾರ, ಕೊನೆಯ ಅಧಿವೇಶನದಲ್ಲಿ ತರಾತುರಿಯಲ್ಲಿ ಈ ತಿದ್ದುಪಡಿ ಬಿಲ್ ಪಾಸ್ ಮಾಡಿದೆ. ಇದ್ರ ಹಿಂದೆ ಅಂದಿನ ನಗರಾಭಿವೃದ್ದಿ ಸಚಿವ ಕೆ.ಜೆ. ಜಾರ್ಜ್ ಹಾಗೂ ಕೆರೆ ಸಮಿತಿ ಅಧ್ಯಕ್ಷ ಕೋಳಿವಾಡರವರ ಕರಾಮತ್ತು ಇತ್ತಾ ಅನ್ನುವ ಅನುಮಾನವೂ ಮೂಡಿದೆ.