-ಬ್ರಹ್ಮಾಸ್ತ್ರ ಪ್ರಯೋಗದ ಬೆನ್ನಲ್ಲೆ ಚಿಗುರೊಡೆದ ಬಿಜೆಪಿಯ ಆಸೆ?
ಬೆಂಗಳೂರು: ಆಪರೇಷನ್ ಕಮಲದಿಂದ ಬೇಸತ್ತಿರುವ ಕಾಂಗ್ರೆಸ್ ಶಾಸಕಾಂಗ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಿದ್ದಾರೆ. ಇತ್ತ ಸಿದ್ದರಾಮಯ್ಯ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿದ್ದಂತೆ ಬಿಜೆಪಿಯ ಸರ್ಕಾರ ರಚಿಸುವ ಆಸೆಗೆ ಮತ್ತೆ ಜೀವ ಬಂದಂತಾಗಿದೆ.
ಇದೇ ಜನವರಿ 18 ಅಂದ್ರೆ ಶುಕ್ರವಾರ ಸಿದ್ದರಾಮಯ್ಯನವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ವಿಶೇಷ ಸಭೆಯನ್ನು ಕರೆದಿದ್ದಾರೆ. ಈ ಸಭೆಗೆ ಕೈ ಪಾಳಯದ ಎಲ್ಲ ಶಾಸಕರು ಕಡ್ಡಾಯವಾಗಿ ಹಾಜರು ಆಗಲೇಬೇಕು. ಒಂದು ವೇಳೆ ಶಾಸಕರು ಸಭೆಗೆ ಗೈರಾದ್ರೆ ಅನರ್ಹಗೊಳ್ಳುವ ಸಾಧ್ಯತೆಗಳಿವೆ. ಮುಂಬೈನಿಂದ ಬಂದಿರುವ ಅತೃಪ್ತ ಶಾಸಕರು ಸಭೆಗೆ ಕಡ್ಡಾಯವಾಗಿ ಹಾಜರು ಆಗಬೇಕಿದೆ.
ಆಪರೇಷನ್ ಕಮಲ ಮೂಲಕ ಕುಮಾರಸ್ವಾಮಿ ಸರ್ಕಾರ ಬೀಳಿಸುವ ಯತ್ನ ವಿಫಲವಾದ್ರೂ ಆಸೆ ಇನ್ನೂ ಹೋಗಿಲ್ಲ. ಜನವರಿ 18ರಂದು ನಿಗದಿ ಆಗಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ವಿಶೇಷ ಸಭೆಯನ್ನೇ ನಂಬ್ಕೊಂಡು ಕೂತಿದೆ ಕೇಸರಿ ಪಾಳಯ. ಅವತ್ತಿನ ಸಭೆಗೆ ಬಾರದೇ ಹೋದ್ರೆ ಅನರ್ಹಗೊಳಿಸುವ ಎಚ್ಚರಿಕೆ ನೋಟಿಸ್ ಕೊಟ್ಟಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ. ಈ ಹಿನ್ನೆಲೆಯಲ್ಲಿ ಅವತ್ತಿನ ಸಭೆಗೆ ಯಾರೆಲ್ಲಾ ಗೈರಾಗ್ತಾರೆ ಅವ್ರನ್ನ ಅನರ್ಹಗೊಳಿಸೋ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಇದೇ ಅನರ್ಹತೆಯನ್ನ ಲಾಭ ಮಾಡಿಕೊಳ್ಳಲು ಯಡಿಯೂರಪ್ಪನವರು ಪ್ಲಾನ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv