ಬೆಂಗಳೂರು: ಲೋಕಸಭಾ ಚುನಾವಣೆಯ ಹೊತ್ತಲ್ಲಿಯೇ ದೋಸ್ತಿಗಳಲ್ಲಿ ದೊಡ್ಡ ಬಿರುಕು ಬಿಡುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ. ಪ್ರತೀ ದಿನ ದೋಸ್ತಿ ಸರ್ಕಾರದ ಬೆಳವಣಿಗೆಗಳನ್ನು ಗಮನಿಸಿದ್ರೆ ಕಾಂಗ್ರೆಸ್-ಜೆಡಿಎಸ್ ನಡುವಿನ ಮೈತ್ರಿ ಮುರಿದುಬೀಳುತ್ತಾ ಅನ್ನೋ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಿದೆ.
ಇತ್ತ ಪದೇ ಪದೇ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ರಾಜೀನಾಮೆ ಮಾತು ಆಡುತ್ತಿದ್ದಾರೆ. ಈ ಕುರಿತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೂರು ನೀಡಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
ದೆಹಲಿಯಲ್ಲಿ ರಾಹುಲ್ ಗಾಂಧಿ ಭೇಟಿ ಮಾಡಿದ ಸಿದ್ದರಾಮಯ್ಯ ಏನೆಲ್ಲಾ ಮಾತನಾಡಿದ್ದಾರೆ ಅನ್ನೋದನ್ನು ನೋಡೋದಾದ್ರೆ..
ರಾಹುಲ್ ಗಾಂಧಿ – ಸಿದ್ದುಜೀ, ನಮ್ಮವರ್ಯಾಕೆ ಪದೇ ಪದೇ ಮಾತನಾಡ್ತಾರೆ..? ಜೆಡಿಎಸ್‍ನವರ ಕಥೆ ಏನು..?
ಸಿದ್ದರಾಮಯ್ಯ – ನಮ್ ಶಾಸಕರು ಒಂದೆರಡು ಕಡೆ ಬಹಿರಂಗವಾಗಿ ಮಾತನಾಡಿರಬಹುದು ಸರ್.. ಅದರಿಂದ ಸರ್ಕಾರಕ್ಕೆ ಯಾವುದೆ ರೀತಿಯ ತೊಂದರೆ ಇಲ್ಲ.
ಸಿದ್ದರಾಮಯ್ಯ – ಆದರೆ ಜೆಡಿಎಸ್ ನಾಯಕರು ಅದನ್ನೆ ದೊಡ್ಡ ವಿವಾದ ಮಾಡೋ ಹಿಂದೆ ಬೇರೆಯದೆ ಲೆಕ್ಕಾಚಾರವಿದೆ…..
ರಾಹುಲ್ ಗಾಂಧಿ – ಏನದು..?
ಸಿದ್ದರಾಮಯ್ಯ – ಮೈತ್ರಿ ಹೆಸರಿನಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಹವಣಿಸುತ್ತಿದ್ದಾರೆ…
ಸಿದ್ದರಾಮಯ್ಯ – ಒಮ್ಮೆ 5-6 ಲೋಕಸಭಾ ಕ್ಷೇತ್ರ ಅವರ ಪಾಲಾದ್ರೆ, ಅವರು ನಮ್ ಯುಪಿಎ ಜೊತೆಗೆ ನಿಲ್ತಾರೆ ಅಂತಾ ಹೇಳೋಕೆ ಸಾಧ್ಯ ಇಲ್ಲ
Advertisement
Advertisement
ಸಿದ್ದರಾಮಯ್ಯ – ತಮಗೆ ಅನುಕೂಲ ಆಗೋದಾದ್ರೆ ಎನ್‍ಡಿಎ ಜೊತೆ ಹೋಗೋಕೂ ಹಿಂದೇಟು ಹಾಕಲ್ಲ…
ರಾಹುಲ್ ಗಾಂಧಿ – ಏನ್ ಸಿದ್ದುಜೀ ಹಿಂಗೆ ಅಂತೀರಾ..?
ಸಿದ್ದರಾಮಯ್ಯ – ಹೌದು ಸಾರ್.. ಹಾಗೇನಾದ್ರೂ ಎನ್‍ಡಿಎ ಜೊತೆ ಹೋದ್ರೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವೂ ಉಳಿಯಲ್ಲ….
ಸಿದ್ದರಾಮಯ್ಯ – ಜೆಡಿಎಸ್ ನಾಯಕರ ವರ್ತನೆ ನೋಡಿದ್ರೆ ಅವರು ಬಿಜೆಪಿ ನಾಯಕರ ವಿಶ್ವಾಸ ಗಳಿಸುವ ಯತ್ನ ಮಾಡುವಂತಿದೆ.
ಸಿದ್ದರಾಮಯ್ಯ – ನಾವು ಈಗಲೆ ಎಚ್ಚೆತ್ತುಕೊಂಡು ಲೋಕಸಭಾ ಮೈತ್ರಿ ಬೇಕಾ ಬೇಡ್ವಾ ಎಂಬ ಬಗ್ಗೆ ಸ್ಪಷ್ಟ ತೀರ್ಮಾನ ತಗೋಬೇಕು..
ರಾಹುಲ್ ಗಾಂಧಿ – ಆಯ್ತು ಸಿದ್ದುಜೀ, ಮೈತ್ರಿ ಬಗ್ಗೆ ಯೋಚಿಸಿ ತೀರ್ಮಾನ ಮಾಡೋಣ.. ಅವರ ಜೊತೆ ಮಾತಾಡ್ತೀನಿ.. ಡೋಂಟ್ ವರಿ..
ರಾಹುಲ್ ಗಾಂಧಿ – ಹಂಗೇ, ನಮ್ಮವರಿಗೆ ಕಾಮ್ ಆಗಿ ಇರ್ಲಿಕ್ಕೆ ಹೇಳಿ.. ಎಲೆಕ್ಷನ್ ಟೈಮಲ್ಲಿ ಅನಗತ್ಯ ವಿವಾದ ಸೃಷ್ಟಿಸಿಕೊಳ್ಳಬೇಡಿ..
ರಾಹುಲ್ ಗಾಂಧಿ – ಮುಂದಿನ ವಾರ ಫೈನಲ್ ಡಿಸಿಷನ್ ತಗೊಳ್ಳೋಣ.. ನೀವು ಚುನಾವಣೆಗೆ ತಯಾರಿ ನಡೆಸಿ
ಸಿದ್ದರಾಮಯ್ಯ – ಆಯ್ತು ಸರ್…
ಒಟ್ಟಿನಲ್ಲಿ ಸಿದ್ದರಾಮಯ್ಯ ಅವರು ಸ್ಫೋಟಕ ದೂರು ಕೇಳಿ ರಾಹುಲ್ ಗಾಂಧಿ ಶಾಕ್ ಆಗಿದ್ದಾರಂತೆ. ಜೆಡಿಎಸ್‍ನವರು ನಮ್ಮ ಬೆಂಬಲಿದಿಂದ ಗೆದ್ದ ಮೇಲೆ ಕೈಕೊಟ್ರೆ, ಮೈತ್ರಿಧರ್ಮ ಪಾಲನೆಯೋ ಅಥವಾ ಫ್ರೆಂಡ್ಲಿ ಫೈಟ್ ಮಾಡುವುದೋ ಅನ್ನೋ ಗೊಂದಲದಲ್ಲಿ ರಾಹುಲ್ ಸಿಲುಕಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv