ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರೇ ಟಾರ್ಗೆಟ್ ಆಗಿದ್ದಾರಾ ಎನ್ನುವ ಪ್ರಶ್ನೆಗೆ ಈಗ ಎದ್ದಿದೆ.
ಹೌದು. ಸರ್ಕಾರ ರಚನೆಯಾದ ಬಳಿಕ ಆರಂಭದಲ್ಲಿ ಸಿದ್ದರಾಮಯ್ಯ ಆಪ್ತರಿಗೆ ಮಂತ್ರಿ ಸ್ಥಾನ ಸಿಗಲಿಲ್ಲ ಎನ್ನುವ ಆರೋಪ ಕೇಳಿ ಬಂದಿತ್ತು. ಆದರೆ ಈಗ ಸಿಎಂ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆಗೊಳಿಸಿದ್ದರಿಂದ ಈ ಮೇಲಿನ ಪ್ರಶ್ನೆ ಈಗ ಹುಟ್ಟಿಕೊಂಡಿದೆ.
Advertisement
ಈಗಾಗಲೇ ಲೋಕೋಪಯೋಗಿ ಇಲಾಖೆಯ ಕೆಲವು ಎಂಜಿನಿಯರ್ ಗಳಿಗೆ ಎತ್ತಂಗಡಿ ಭಾಗ್ಯ ಸಿಕ್ಕಿದ್ದು, ಶೀಘ್ರವೇ ಮತ್ತಷ್ಟು ಅಧಿಕಾರಿಗಳು ವರ್ಗಾವಣೆಯಾಗುವ ಸಾಧ್ಯತೆಯಿದೆ. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ವರ್ಗಾವಣೆ ಆದೇಶ ಹೊರಡಿಸಿದ್ದನ್ನು ಕಂಡು ಕಾಂಗ್ರೆಸ್ಸಿನ ಮಾಜಿ ಸಚಿವರ ಆಪ್ತ ಅಧಿಕಾರಿಗಳು ಚಿಂತೆಯಲ್ಲಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.
Advertisement
Advertisement
ಸರ್ಕಾರದ ನಡೆಯ ಬಗ್ಗೆ ಅಸಮಾಧಾನಗೊಂಡಿರುವ ಅಧಿಕಾರಿಗಳು ಈಗ ಕೈ ನಾಯಕರ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ. ಗುರುವಾರ ಸಿದ್ದರಾಮಯ್ಯ ನೇತೃತ್ವದಲ್ಲಿ ಸಮನ್ವಯ ಸಮಿತಿಯ ಸಭೆ ನಡೆಯಲಿದ್ದು, ಈ ವೇಳೆ ವರ್ಗಾವಣೆ ವಿಚಾರ ಚರ್ಚೆಗೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ.
Advertisement
ಮೈತ್ರಿ ಸರ್ಕಾರ ರಚನೆಗೂ ಮುನ್ನ ನಡೆದ ಒಪ್ಪಂದದಲ್ಲಿ ಅಧಿಕಾರಿಗಳ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಮಾತುಕತೆ ನಡೆಸಿತ್ತು. ಈ ಪ್ರಕಾರ ಕಾಂಗ್ರೆಸ್ ಸಚಿವರು ಹೊಂದಿರುವ ಖಾತೆಗಳ ಅಡಿಯಲ್ಲಿ ಬರುವ ಅಧಿಕಾರಿಗಳ ವಿಚಾರದಲ್ಲಿ ಜೆಡಿಎಸ್ ತಲೆ ಹಾಕಬಾರದು ಎನ್ನುವ ಮಾತುಕತೆ ನಡೆದಿತ್ತು ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿತ್ತು. ಇದನ್ನೂ ಓದಿ: ನಾನು ಸೇರಿದಂತೆ ಯಾರೂ 24 ಕ್ಯಾರೆಟ್ ಬಂಗಾರ ಅಲ್ಲ : ಕೃಷ್ಣ ಬೈರೇಗೌಡ
ಶೀತಲ ಸಮರ?
ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಕಳೆದ ಎರಡು ದಿನಗಳಿಂದ ಭ್ರಷ್ಟಾಚಾರದ ವಿಚಾರದ ಬಗ್ಗೆ ಮಾತನಾಡಿದ್ದರು. ವಿಧಾನಸೌಧದಲ್ಲಿ ಭ್ರಷ್ಟಾಚಾರ ನಡೆಯುತ್ತದೆ. ಒಂದು ವರ್ಗಾವಣೆಗೆ 5 ರಿಂದ 10 ಲಕ್ಷ ರೂ. ಲಂಚ ಪಡೆಯಲಾಗುತ್ತದೆ. ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಸ್ವಚ್ಛ ಮಾಡಲು ಯತ್ನಿಸಿದರೆ ನನ್ನನ್ನು ಒಂದು ಅಧಿಕಾರದಲ್ಲಿ ಮುಂದುವರಿಯಲು ಬಿಡುವುದಿಲ್ಲ. ವಿಧಾನಸೌಧದ ಕಾರಿಡಾರ್ ನಲ್ಲಿ ಮಧ್ಯವರ್ತಿಗಳು ಓಡಾಡುತ್ತಾ ಜನರಿಂದ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಕಾರ್ಯದರ್ಶಿಯ ಮೂರು ಮಹಡಿಯಲ್ಲೂ ಭ್ರಷ್ಟಾಚಾರವಿದೆ ಎಂದು ನೇರವಾಗಿ ಆರೋಪಿಸಿದ್ದರು.
ಎಚ್‍ಡಿಕೆ ಮಂಗಳವಾರ ಬೆಂಗಳೂರಿನಲ್ಲಿ ಈ ಹೇಳಿಕೆ ನೀಡಿದ್ದರೆ, ಸಿದ್ದರಾಮಯ್ಯ ಮೈಸೂರಿನಲ್ಲಿ ಬುಧವಾರ ಈ ಹೇಳಿಕೆಗೆ, ನಾನು ವಿಧಾನಸೌಧದಲ್ಲಿ ಭ್ರಷ್ಟಾಚಾರ ಕಂಡಿಲ್ಲ. ಸಿಎಂ ಎಚ್‍ಡಿಕೆ ಕಣ್ಣಿಗೆ ಭ್ರಷ್ಟಾಚಾರ ಕಾಣಿಸಿದ್ದಲ್ಲಿ ನಿಯಂತ್ರಿಸಲಿ. ಈಗ ಕುಮಾರಸ್ವಾಮಿ ಬಳಿ ಅಧಿಕಾರವಿದೆ ಎಂದು ಪ್ರತಿಕ್ರಿಯಿಸಿದ್ದರು.