ಬಾಗಲಕೋಟೆ: ಮುಸ್ಲಿಂ ಸಮುದಾಯದ ಮತ ಸೆಳೆಯಲು ಮಾಜಿ ಸಿಎಂ ಸಿದ್ಧರಾಮಯ್ಯ ಬೀಫ್ ಅಸ್ತ್ರ ಬಿಟ್ಟಿದ್ದಾರೆ. ನಾನು ಈವರೆಗೂ ಬೀಫ್ ತಿಂದಿಲ್ಲ, ತಿನ್ನಬೇಕು ಅನ್ನಿಸಿದ್ರೆ ತಿಂತೇನೆ. ಕೇಳೋಕೆ ನೀವ್ಯಾರು ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಗೋಹತ್ಯೆ ವಿರೋಧಿಗಳನ್ನ ಪ್ರಶ್ನಿಸುವ ನೆಪದಲ್ಲಿ ಮುಸ್ಲಿಂ ಸಮುದಾಯದ ಮತ ಓಲೈಕೆಗೆ ಮುಂದಾಗಿದ್ದಾರೆ.
Advertisement
ಜಮಖಂಡಿಯಲ್ಲಿ ಪ್ರಚಾರದ ವೇಳೆ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಭಾಗವಹಿಸಿ, ಸಿದ್ದರಾಮಯ್ಯ ಮಾತನಾಡಿದ್ರು. ಇದಕ್ಕೆ ಜನ ಭರ್ಜರಿ ಚಪ್ಪಾಳೆ ಹೊಡೆದ್ರು. ಯಡಿಯೂರಪ್ಪ ಸಿಎಂ ಆಗಬಾರದೆಂದು ಅವ್ರ ಪಕ್ಷದಲ್ಲೇ ಶಡ್ಯಂತ್ರ ನಡೆದಿದೆ, ಅವರು ಚೀಫ್‍ಮಿನಿಸ್ಟರ್ ಆಗಬಾರದು ಅನ್ನೋದು ಅನ್ನೋ ಒಂದು ಗುಂಪು ಬಿಜೆಪಿಯಲ್ಲಿದೆ. ಅವರು ಸಿಎಂ ಆಗೋದು ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ.
Advertisement
Advertisement
ಯಡಿಯೂರಪ್ಪ ಸಿಎಂ ಆಗೋಕೆ ಅವ್ರ ಪಕ್ಷಕ್ಕೆ ಮೆಜಾರಿಟಿ ಇಲ್ಲ. ಯಡಿಯೂರಪ್ಪ ಸಿಎಂ ಆಗಲು ಏನೇ ಪ್ರಯತ್ನ ಮಾಡಿದ್ರು ಅದಕ್ಕೆ ಅಡ್ಡಗಾಲು ಹಾಕಲು, ಬಿಜೆಪಿಯಲ್ಲಿ ಬಹಳಷ್ಟು ಜನ ಇದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಸಿಎಂ ಕುಮಾರಸ್ವಾಮಿ ಆಗಮನದ ಬಗ್ಗೆ ಪ್ರತಿಕ್ರಿಯಿಸಿ, ಹಾಗೇನೂ ಇಲ್ಲ, ಕುಮಾರಸ್ವಾಮಿ ಬಳ್ಳಾರಿಗೆ ಬರ್ತಾರೆ. ಆದ್ರೆ ಜಮಖಂಡಿ ಕ್ಷೇತ್ರಕ್ಕೆ ಬರೋ ಬಗ್ಗೆ ಇನ್ನು ತೀರ್ಮಾನ ಆಗಿಲ್ಲ ಅಂದ್ರು.
Advertisement
ನರೇಂದ್ರ ಮೋದಿ, ಪ್ರಧಾನಿಯಾಗೋ ಮುಂಚೆ, ಗ್ಯಾಸ್ ಸಿಲಿಂಡರ್ ಬೆಲೆ 400 ಇತ್ತು. ಇಂದು 900 ಚಿಲ್ಲರೆ ಆಗಿದೆ. ಈ ನರೇಂದ್ರ ಮೋದಿ ತೊಲಗಬೇಕು, ತೊಲಗದಿದ್ರೆ ಅಲ್ಪಸಂಖ್ಯಾತರಿಗೆ, ದಲಿತರಿಗೆ, ಹಿಂದುಳಿದವ್ರಿಗೆ ನೆಮ್ಮದಿ ಇರಲ್ಲ ಎಂದ್ರಲ್ಲದೇ, ಬಿಜೆಪಿಯವ್ರ ಬಣ್ಣದ ಮಾತುಗಳಿಗೆ ಕಿವಿಗೊಡಬೇಡಿ. ಕುಂಬಾರಹಳ್ಳ ಗ್ರಾಮಸ್ಥರೆಲ್ಲರೂ ಹಸ್ತದ ಗುರಿತಿಗೆ ಓಟ್ ಹಾಕಬೇಕು. ಕಮಲ ಮುದುಡಬೇಕು. ನಾನು ನಮ್ಮಪ್ಪನ ಮನೆ ದುಡ್ಡು ಕೊಟ್ಟಿಲ್ಲ. ಜನರ ದುಡ್ಡು ಜನ್ರಿಗೆ ಕೊಟ್ಟಿದ್ದೇನೆ. ಯಡಿಯೂರಪ್ಪ ಅವ್ರಪ್ಪನ ಮನೆ ದುಡ್ಡು ಕೊಡ್ತಾರಾ? ಎಂದು ಬಿಜೆಪಿ ಹಾಗೂ ಮೋದಿ ಬಗ್ಗೆ ವಾಗ್ದಾಳಿ ನಡೆಸಿದ್ರು.
ನಮ್ಮಲ್ಲಿ ಒಳ್ಳೆಯ ಜನರಿದ್ದಾರೆ, ಅಲ್ಲಿ ದುಷ್ಟರಿದ್ದಾರೆನ್ನುವ ಮೂಲಕ, ಬಿಜೆಪಿಯ ನಾಯಕರು ದುಷ್ಟರೆಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv