ಬೆಂಗಳೂರು: ದೋಸ್ತಿ ಸರ್ಕಾರ ಸಂಕಷ್ಟದಲ್ಲಿರುವಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದುಬಾರಿ ಬೆಂಜ್ ಕಾರನ್ನು ಖರೀದಿಸಿದ್ದಾರೆ.
ಸಿದ್ದರಾಮಯ್ಯ ಅವರು ಬರೋಬ್ಬರಿ 1.5 ಕೋಟಿ ಮೌಲ್ಯದ ಬೆಂಜ್ ಜಿಎಲ್ 350 ಕಾರನ್ನು ಖರೀದಿಸಿದ್ದಾರೆ. ಈ ಕಾರು ಶುಕ್ರವಾರವೇ ಅವರ ಮನೆಗೆ ಬಂದಿದ್ದು, ಈ ಕಾರನ್ನು ಸಿದ್ದರಾಮಯ್ಯ ಅವರೇ ತೆಗೆದುಕೊಂಡಿದ್ದಾರಾ ಅಥವಾ ಬೇರೆಯವರು ಗಿಫ್ಟ್ ಕೊಟ್ಟಿದ್ದಾರ ಎಂಬುದು ತಿಳಿದು ಬಂದಿಲ್ಲ. ಆದರೆ ಈ ಐಷಾರಾಮಿ ಕಾರನ್ನು ಸಿದ್ದರಾಮಯ್ಯ ಅವರು ಓಡಾಡಲು ಖರೀದಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಮತ್ತೆ ಸುತ್ತಿಕೊಂಡ `ವಾಚ್’ ಕಂಟಕ!
Advertisement
Advertisement
ಕಾರಿನ ವಿಶೇಷತೆ ಏನು?
ಈ ಕಾರ್ ಐಷಾರಾಮಿಯಾಗಿದ್ದು, ವಿಮಾನದಲ್ಲಿ ಪ್ರಯಾಣ ಮಾಡುವಂತೆ ಹಾಯಾಗಿ ಕುಳಿತು ಸಂಚರಿಸಬಹುದು. ರಾತ್ರಿ ವೇಳೆ ಹೆಡ್‍ಲೈಟ್ ಆನ್ ಮಾಡಬೇಕಾಗಿಲ್ಲ. ಕತ್ತಲಾದ ತಕ್ಷಣವೇ ಸೆನ್ಸರ್ ತಂತ್ರಜ್ಞಾನದಿಂದಾಗಿ ಆಟೋಮ್ಯಾಟಿಕ್ ಆಗಿ ಹೆಡ್‍ಲೈಟ್ ಆನ್ ಆಗುತ್ತದೆ.
Advertisement
ವಾಚ್, ಕನ್ನಡಕ ವಿವಾದ:
ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿ ಅವರು, ನಿಮ್ಮ ಸಿಎಂ ಸಮಾಜವಾದಿಯಲ್ಲ ಅವರು ಮಜಾವಾದಿ. ದುಬಾರಿ ಬೆಲೆಯ ವಾಚು, ಗ್ಲಾಸ್ ಗಳನ್ನು ಧರಿಸುತ್ತಾರೆ. 70 ಲಕ್ಷ ರೂ. ಮೌಲ್ಯದ ವಾಚ್, 10 ಲಕ್ಷ ರೂ. ಮೌಲ್ಯದ ಗ್ಲಾಸ್ ಧರಿಸುತ್ತಾರೆ ಎಂದು ಆರೋಪಿಸಿದ್ದರು. ವಾಚ್ ಪ್ರಕರಣ ರಾಜಕೀಯ ವಲಯದಲ್ಲಿ ತೀವ್ರ ವಿವಾದಕ್ಕೆ ಒಳಗಾಗುತ್ತಿದ್ದಂತೆ ಸಿದ್ದರಾಮಯ್ಯ ವಾಚ್ ಅನ್ನು ಸರ್ಕಾರದ ವಶಕ್ಕೆ ನೀಡುವ ಮೂಲಕ ಎಲ್ಲಾ ಗೊಂದಲಗಳಿಗೆ ಅಂತ್ಯ ಹಾಡಿದ್ದರು. ವಿವಾದ ಅಂತ್ಯವಾಗಿದ್ದರೂ ಈ ವಾಚ್ ಪ್ರಕರಣ ಸಿದ್ದರಾಮಯ್ಯ ಅವರ ಇಮೇಜ್‍ಗೆ ಸ್ವಲ್ಪ ಹೊಡೆತ ನೀಡಿತ್ತು. ವಿಧಾನಸಭಾ ಚುನಾವಣೆಯಲ್ಲಿ ಎಚ್‍ಡಿಕೆ, ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರು ಈ ವಿಚಾರವನ್ನು ಪ್ರಸ್ತಾಪ ಮಾಡುತ್ತಲೇ ಟೀಕೆ ಮಾಡುತ್ತಿದ್ದರು.
Advertisement
ಜಾರ್ಜ್ ಕಾರಲ್ಲಿ ಸಂಚಾರ:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯುತ್ತಿದ್ದಂತೆ ಇನ್ನೋವಾ ಕಾರಿನಲ್ಲಿ ಓಡಾಟ ಮಾಡುತ್ತಿದ್ದರು. ಇವರ ಸ್ಥಿತಿಯನ್ನು ನೋಡಿ ಕುಚುಕು ಗೆಳೆಯ ಮಾಜಿ ಬೆಂಗಳೂರು ನಗರಾಭಿವೃದ್ಧಿ ಸಚಿವ, ಹಾಲಿ ಐಟಿ ಬಿಟಿ ಸಚಿವ ಕೆಜೆ ಜಾರ್ಜ್ ದುಬಾರಿ ಲ್ಯಾಂಡ್ ಕ್ರೂಸರ್ ಪ್ರಾಡೋ ಕಾರನ್ನು ಗಿಫ್ಟ್ ನೀಡಿದ್ದರು. ಲ್ಯಾಂಡ್ ಕ್ರೂಸರ್ ಪ್ರಾಡೋ ಕಾರಿಗೆ ಒಂದು ಕೋಟಿ ರೂ. ಬೆಲೆಯಿದೆ. ಕಾರು ಅಲ್ಲದೇ ಒಂದು ವರ್ಷಕ್ಕೆ ಸಾಕಾಗುವಷ್ಟು ಡೀಸೆಲ್ ಕೂಪನ್ ಕೂಡ ಜಾರ್ಜ್ ನೀಡಿದ್ದಾರೆ.
ಸಿದ್ದರಾಮಯ್ಯನವರನ್ನು ಮನೆಗೆ ಕರೆದು ಉಪಚಾರ ಮಾಡಿದ ಜಾರ್ಜ್, ಇನ್ನು ಮುಂದೆ ನೀವು ಈ ಇನ್ನೋವಾ ಕಾರಲ್ಲಿ ಓಡಾಡಬೇಡಿ. ನಿಮಗಾಗಿ ಒಂದು ಹೊಸ ಕಾರು ಖರೀದಿಸಿದ್ದೇನೆ. ಇದನ್ನು ತೆಗೆದುಕೊಳ್ಳಿ. ಈ ಹೊಸ ಕಾರಲ್ಲಿ ನೀವು ಓಡಾಡಿ ಎಂದು ಹೇಳಿ ಪ್ರಾಡೋ ಕಾರಿನ ಕೀ ಕೊಟ್ಟಿದ್ದರು. ಈ ವೇಳೆ ಸಿದ್ದರಾಮಯ್ಯ ಒಲ್ಲದ ಮನಸ್ಸಿನಿಂದಲೇ ಕೋಟಿ ರೂ. ಮೌಲ್ಯದ ಹೊಸ ಕಾರನ್ನು ಪಡೆದಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv