– ಮೂಲ ಕೈ ನಾಯಕರ ವಿರುದ್ಧ ಸಿದ್ದರಾಮಯ್ಯ ಗರಂ
ಬೆಂಗಳೂರು: “ತಮ್ಮ ಅಡಿಪಾಯವೇ ಗಟ್ಟಿ ಇಲ್ಲದ ನಾಯಕರುಗಳು ಬೇಸ್ ಸೃಷ್ಟಿಸಲು ಸಾಧ್ಯವೇ? ಬೇಸ್ ಇಲ್ಲದ ನಾಯಕರುಗಳು ಆಗದ ಹೋಗದ ಪ್ರಯತ್ನ ಮಾಡಿದರೆ ಅದೊಂದು ಬೇಸ್ ಲೆಸ್ ಪ್ರಯತ್ನ ಅಷ್ಟೇ. ಯಾರ ಸಾಮರ್ಥ್ಯ ಏನು ಎನ್ನುವುದು ಹೈಕಮಾಂಡಿಗೆ ಗೊತ್ತಿದೆ. ಜಸ್ಟ್ ವೇಟ್ ಅಂಡ್ ಸಿ. ಸ್ವಂತ ಬಲದಿಂದ ಗೆಲ್ಲಲಾಗದವರು ಒಂದು ಕಡೆ ಸೇರಿಕೊಂಡು ನನ್ನ ಅಸ್ತಿತ್ವ ಅಲ್ಲಾಡಿಸಲು ಸಾಧ್ಯವೇ? ತಮಗೆ ಅಸ್ತಿತ್ವ ಇಲ್ಲದವರು ಬೇರೆಯವರ ಅಸ್ತಿತ್ವದ ಬಗ್ಗೆ ಮಾತನಾಡಿದರೆ ಏನು ಆಗುವುದಿಲ್ಲ” – ತಮ್ಮ ಆಪ್ತರ ಮುಂದೆ ಸಿದ್ದರಾಮಯ್ಯ ಮೂಲ ಕಾಂಗ್ರೆಸ್ಸಿಗರ ವಿರುದ್ಧ ಅಬ್ಬರಿಸಿದ್ದು ಹೀಗೆ.
ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಸಿದ್ದರಾಮಯ್ಯ ಮತ್ತೆ ಅದೇ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಆದರೆ ಮೂಲ ಕಾಂಗ್ರೆಸ್ ನಾಯಕರುಗಳು ಸಿದ್ದರಾಮಯ್ಯಗೆ ಅಧಿಕಾರ ತಪ್ಪಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಈ ವಿಚಾರ ಕೇಳಿ ಕೆರಳಿರುವ ಸಿದ್ದರಾಮಯ್ಯ ತಮ್ಮ ಆಪ್ತರ ಮುಂದೆ ಅಬ್ಬರಿಸಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಮೂಲ ಕಾಂಗ್ರೆಸ್ ನಾಯಕರುಗಳು ಎಲ್ಲರು ಚುನಾವಣೆಯಲ್ಲಿ ಸೋತು ಅಸ್ತಿತ್ವ ಕಳೆದುಕೊಂಡಿದ್ದಾರೆ. ತಮಗೆ ಬೇಸ್ ಇಲ್ಲದವರು ಪಕ್ಷದ ಬೇಸ್ ಕ್ರಿಯೇಟ್ ಮಾಡ್ತಾರಾ ಎಂದು ಪ್ರಶ್ನಿಸಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಹೈಕಮಾಂಡಿಗೆ ನನ್ನ ಸಾಮಥ್ರ್ಯ ಏನು ಎನ್ನುವುದು ಗೊತ್ತಿದೆ. ಏನಾಗುತ್ತೆ ಬೆಳವಣಿಗೆ ಕಾದು ನೋಡಿ ಎಂದು ಬೆಂಬಲಿಗರಿಗೆ ಸಿದ್ದರಾಮಯ್ಯ ಧೈರ್ಯ ತುಂಬಿದ್ದಾರೆ.
ಒಟ್ಟಾರೆಯಾಗಿ ಮೂಲ ಕಾಂಗ್ರೆಸ್ಸಿಗರು ಬೇಸಿಲ್ಲದವರು ಎನ್ನುವ ಮೂಲಕ ತಾವೇ ರಾಜ್ಯ ಕಾಂಗ್ರೆಸ್ಸಿನ ಅನಭಿಷಿಕ್ತ ದೊರೆ ಎಂದು ಬೆಂಬಲಿಗರ ಮುಂದೆ ಹೇಳುವ ಮೂಲಕ ತನ್ನ ಬೆನ್ನು ತಟ್ಟಿಕೊಂಡಿದ್ದಾರೆ.