– ಬಿಜೆಪಿಗೆ ಅಬಾರ್ಷನ್ ಆಗಿಲ್ಲ
ಬೆಳಗಾವಿ: ನಮಗಿರುವ ನೂರೆಂಟು ಮನೆಗಳಲ್ಲಿ ಒಂದೆರೆಡನ್ನು ಕಾಂಗ್ರೆಸ್ ಗೆ ಬಿಟ್ಟುಕೊಟ್ಟಿದ್ದೇವೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಜಗದೀಶ್ ಶೆಟ್ಟರ್, ದೇಶದ 20ರಿಂದ 22 ಮನೆಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಒಂದೆರೆಡು ಮನೆಯನ್ನು ಕಾಂಗ್ರೆಸ್ ಬಡಿದಾಡಿಕೊಂಡು ತೆಗೆದುಕೊಂಡಿದೆ. ಈ ಚುನಾವಣಾ ಫಲಿತಾಂಶ ಲೋಕಸಭೆ ಚುನಾವಣೆಯ ದಿಕ್ಸೂಚಿ ಅಲ್ಲ. ಕೇವಲ ಒಂದೆರೆಡು ಚುನಾವಣೆ ಫಲಿತಾಂಶವನ್ನ ದಿಕ್ಸೂಚಿ ಎಂದು ನಾವು ಕರೆದಿಲ್ಲ ಎಂದು ಹೇಳಿದರು.
Advertisement
2019ರ ಚುನಾವಣೆಯಲ್ಲಿ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬ ವಾತಾವರಣವಿದೆ. ನಾವು ಎಲ್ಲೂ ಕಾಂಗ್ರೆಸ್ಸಿಗೆ ಪೂರ್ಣ ಮನೆಯನ್ನು ಬಿಟ್ಟುಕೊಟ್ಟಿಲ್ಲ. ಎಲ್ಲ ರಾಜ್ಯಗಳಲ್ಲಿ ಸರಿಸಮಾನ ಫೈಟ್ ನೀಡಿದ್ದೇವೆ. ಕಾಂಗ್ರೆಸ್ ಐದು ರಾಜ್ಯಗಳಲ್ಲಿ ಅಧಿಕಾರಕ್ಕೆ ಬರುತ್ತೇವೆ ಅಂತಾ ಹೇಳಿಕೊಳ್ಳುತ್ತಿದ್ದರು. ಫಲಿತಾಂಶದಲ್ಲಿ ಕಾಂಗ್ರೆಸ್ ಗೆ ಮುಖಭಂಗವಾಗಿದೆ. ಸ್ಥಳೀಯ ಫಲಿತಾಂಶ ಏನೇ ಇರಲಿ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿಯವರೇ ಪ್ರಧಾನಿ ಆಗುತ್ತಾರೆ ಅಂದ್ರು.
Advertisement
Advertisement
ಛತ್ತಿಸ್‍ಗಢ ಮತ್ತು ಮಧ್ಯ ಪ್ರದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಸಹಜವಾಗಿ ಆಡಳಿತ ವಿರೋಧಿ ಅಲೆ ಇತ್ತು. ಅಡಳಿತ ವಿರೋಧಿ ಅಲೆಯ ನಡುವೆಯೂ ನಾವು ಹೀನಾಯವಾಗಿ ಎಲ್ಲಿ ಸೋತಿಲ್ಲ. ರಾಜಸ್ಥಾನದಲ್ಲಿ ಜನರು ಪ್ರತಿ ಚುನಾವಣೆಗೆ ಹೊಸಬರನ್ನು ಆಯ್ಕೆ ಮಾಡಿ ತರುತ್ತಾರೆ ಎಂದು ಹೇಳುವ ಮೂಲಕ ಸೋಲಿನ ಕಾರಣವನ್ನು ಜಗದೀಶ್ ಶೆಟ್ಟರ್ ತಿಳಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv