ಹುಬ್ಬಳ್ಳಿ: ನಿಮ್ಮ ಶಾಸಕರು ನಿಮ್ಮ ಜೊತೆ ಇದ್ದರೆ ಇಂತಹ ಬ್ಲೇಮ್ ಗೇಮ್ ಮಾಡುವ ಅವಶ್ಯಕತೆ ಬರುತ್ತಿರಲಿಲ್ಲ. ಗಟ್ಸ್ ಇದ್ದರೆ ನಿಮ್ಮ ಎಲ್ಲ ಶಾಸಕರನ್ನು ಸೇರಿಸಿ ಒಂದು ಹೇಳಿಕೆ ಕೊಡಿಸಿ ಅಂತ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸವಾಲು ಹಾಕಿದ್ದಾರೆ.
ಹಾಸನದ ಜೆಡಿಎಸ್ ಶಾಸಕ ಎಚ್ ಎಂ ಕುಮಾರಸ್ವಾಮಿ ಅವರಿಗೆ ಉದಯ್ ಗೌಡ 30 ಕೋಟಿ ಹಣ ಹಾಗೂ ಸಚಿವ ಸ್ಥಾನ ನೀಡುವುದಾಗಿ ಹೇಳಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಇಂತಹ ದಿನ ನಿತ್ಯ ಆಪಾದನೆಗಳು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಆರಂಭವಾಗಿದೆ. ತಮ್ಮ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳುವುದಕ್ಕೆ ಮತ್ತು ಜೆಡಿಎಸ್ ಕಾಂಗ್ರೆಸ್ ನಲ್ಲಿರುವಂತಹ ಒಳ ಬೇಗುದಿಗಳನ್ನು ಮರೆಮಾಚುವ ಸಲುವಾಗಿ ಜನರನ್ನು ಮನಸ್ಸನ್ನು ಬೇರೆಡೆ ಸೆಳೆಯುವುದಕ್ಕಾಗಿ ಕುಮಾರಸ್ವಾಮಿಯವರು ಇಂತಹ ಹೈಡ್ರಾಮಾಗಳನ್ನು ಮಾಡುತ್ತಿದ್ದಾರೆ.
Advertisement
Advertisement
ಕುಮಾರಸ್ವಾಮಿ ಯಾವತ್ತೂ ಹಿಟ್ ಆ್ಯಂಡ್ ರನ್ ಕೇಸ್. ಸಿಐಡಿ, ಎಸಿಬಿ ಎಲ್ಲವೂ ಅವರ ಕಡೆಯಿದೆ. ಹೀಗಾಗಿ ಯಾರೋ ಆಮಿಷ ಒಡ್ಡುತ್ತಿದ್ದಾರೆ ಅಂತ ಸಾಕ್ಷಿ ಪುರಾವೆಗಳನ್ನು ತೆಗೆದುಕೊಂಡು ಒಂದು ದೂರು ದಾಖಲಿಸಬಹುದಿತ್ತಲ್ಲ. ಈ ಕೆಲಸಗಳನ್ನು ಮಾಡಲಾರದೇ ಈ ರೀತಿಯ ಸುದ್ದಿಗಳನ್ನು ಹಬ್ಬಿಸುವ ಮೂಲಕ ಬಿಜೆಪಿಯವರು ಸರ್ಕಾರವನ್ನು ಪತನ ಮಾಡಲು ಹೊರಟಿದ್ದಾರೆ ಎನ್ನುವಂತಹ ವಾತಾವರಣ ನಿರ್ಮಾಣ ಮಾಡಲು ಹೊರಡುವುದು ಕುಮಾರಸ್ವಾಮಿಯವರ ಹೈಡ್ರಾಮಾ ಅಂತ ಅವರು ಹೇಳಿದ್ರು. ಇದನ್ನೂ ಓದಿ: ಸಕಲೇಶಪುರ ಶಾಸಕ ಕುಮಾರಸ್ವಾಮಿ ಪತ್ನಿಯಿಂದ ಆಪರೇಷನ್ ಕಮಲದ ರಹಸ್ಯ ಬಯಲು
Advertisement
ಕುಮಾರಸ್ವಾಮಿ ಅವರ ಪತ್ನಿ ಆರೋಪಿಸುವುದಾದರೆ ಅದಕ್ಕೆ ಸಾಕ್ಷಿ ಕೊಡಲಿ, ಯಾಕಂದ್ರೆ ಜಗತ್ತು ಇಂದು ತಂತ್ರಜ್ಞಾನದಲ್ಲಿ ಮುಂದುವರಿದಿದೆ. ಈ ಮೂಲಕ ರೆಕಾರ್ಡ್ ಮಾಡಬಹುದಿತ್ತಲ್ಲ. ಒಟ್ಟಿನಲ್ಲಿ ಈ ಮೂಲಕ ಸುಳ್ಳು ಆಪಾದನೆ ಮಾಡುವ ಮೂಲಕ ಬಿಜೆಪಿ ಬ್ಲೇಮ್ ಗೇಮ್ ಆಡುವುದು ತಪ್ಪು ಅಂತ ಅವರು ಹೇಳಿದ್ರು.
Advertisement
ನಿಮ್ಮ ಸರ್ಕಾರ ಉಳಿಸಿಕೊಳ್ಳೋ ಬೇಕಾದ್ರೆ, ನಿಮಗೆ ಗಟ್ಸ್ ಇದ್ರೆ ನಿಮ್ಮ ಶಾಸಕರು ನಿಮ್ಮ ಕಡೆ ಧೈರ್ಯವಾಗಿ ಇರೋದಾದ್ರೆ ಈ ತರದ ಪರಿಸ್ಥಿತಿ ಬರುತ್ತಿರಲಿಲ್ಲ. ಆ ಎಲ್ಲಾ ಶಾಸಕರು ಒಟ್ಟು ಸೇರಿ ಒಂದು ಹೇಳಿಕೆಯನ್ನು ಕೊಡಲಿ. ನಾವೆಲ್ಲ ಈ ಸರ್ಕಾರದ ಜೊತೆ ಇದ್ದೇವೆ. ಈ ಸರ್ಕಾರದ ಮೇಲೆ ನಮಗೆ ವಿಶ್ವಾಸ ಇದೆ. ಈ ಸರ್ಕಾರಕ್ಕೆ ನಮ್ಮ ಸಂಪುರ್ಣ ಬೆಂಬಲ ಇದೆ ಅಂತ ಜಾರಕಿಹೊಳಿ ಕಡೆಯಿಂದ ಹೇಳಿಸಿ ಬಿಡಲಿ. ಇದನ್ನೆಲ್ಲಾ ನಿಮಗೆ ಮಾಡೋದಕ್ಕೆ ಯಾಕೆ ಆಗುತ್ತಿಲ್ಲ. ನಿಮ್ಮಲ್ಲೇ ಒಳಜಗಳ. ಅದು ಬಿಟ್ಟು ಬಿಜೆಪಿ ಮೇಲೆ ದೂಷಣೆ ಮಾಡ್ತಿರೋದು ಸರಿಯಲ್ಲ ಅಂತ ಸಮ್ಮಿಶ್ರ ಸರ್ಕಾರದ ಮೇಲೆ ಕಿಡಿಕಾರಿದ್ರು.
ಬಿಜೆಪಿ 104 ಶಾಸಕರೆಲ್ಲ ಒಟ್ಟಾಗಿದ್ದೇವೆ. ಲೋಕಸಭಾ ಚುನಾವಣೆ ತಯಾರಿ ನಡೆಸಿದ್ದು, ಶಾಸಕರು, ಸಂಸದರು, ಜಿಲ್ಲಾಧ್ಯಕ್ಷರ ಸಭೆ ಕರೆಯಲಾಗಿದೆ ಅಂದ್ರು. ಆಪರೇಷನ್ ಕಾಂಗ್ರೆಸ್ ನಡೆಯುತ್ತಿರುವ ಬಗ್ಗೆ ಮಾಹಿತಿಯಿಲ್ಲ. ರಾಜ್ಯ ಸರ್ಕಾರ ನೀರಿನ ಮೇಲಿನ ಗುಳ್ಳೆ ಇದ್ದಂತೆ. ಇಂದು, ನಾಳೆ, ನಾಡಿದ್ದು ಯವುದಾದರೂ ಸಮಯದಲ್ಲಿ ಬೀಳಬಹುದು. ಸರ್ಕಾರದ ಅಸ್ತಿತ್ವದ ಬಗ್ಗೆಯೇ ಜನ ಪ್ರಶ್ನಿಸುತ್ತಿದ್ದಾರೆ ಅಂತ ಹೇಳಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv