ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿಗೆ (Satish Jarkiholi) ಬಾಯಿ ಚಪಲ ಹೀಗಾಗಿ ಏನೇನೋ ಮಾತಾಡ್ತಾರೆ ಅಂತ ಮಾಜಿ ಸಿಎಂ ಕುಮಾರಸ್ವಾಮಿ (H DKumaraswamy) ವಾಗ್ದಾಳಿ ನಡೆಸಿದ್ದಾರೆ.
ಗೃಹಲಕ್ಷ್ಮಿ (Gurhalkashmi) ಯೋಜನೆ ಆಪ್ ಅನ್ನ ಕೇಂದ್ರ ಸರ್ಕಾರ ಹ್ಯಾಕ್ (Hack) ಮಾಡಿದೆ ಎಂದ ಸತೀಶ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸತೀಶ್ ಜಾರಕಿಹೊಳಿ ಬಗ್ಗೆ ಯಾಕೆ ಚರ್ಚೆ ಮಾಡ್ತೀರಾ? ಅವರಿಗೆ ಏನು ಗೊತ್ತಿಲ್ಲ. ಬಾಯಿ ಚಪಲಕ್ಕೆ ಅವರು ಮಾತಾಡ್ತಾರೆ ಅಷ್ಟೇ ಅಂತ ಲೇವಡಿ ಮಾಡಿದ್ರು.
Advertisement
Advertisement
ಅವರೆಲ್ಲ ಮಂತ್ರಿಗಳಾ? ಏನ್ ಹ್ಯಾಕ್ ಮಾಡ್ತಾರೆ? ನಿಮ್ಮ ಯೋಗ್ಯತೆಗೆ ಸರ್ವರ್ ಅನ್ನು ಶಕ್ತಿಯುತವಾಗಿ ಮಾಡಿಕೊಳ್ಳಬೇಕು ಅಲ್ಲವಾ? ಸರ್ವರ್ ಸರಿ ಮಾಡಬೇಕಾಗಿರೋದು ನಿಮ್ಮ ಜವಾಬ್ದಾರಿ. ಅವರು ಹ್ಯಾಕ್ ಮಾಡಿದ್ರು, ಇವರು ಹ್ಯಾಕ್ ಮಾಡಿದ್ರು ಅಂತ ಸಬೂಬು ಕೊಡಬೇಡಿ ಅಂತ ಕಿಡಿಕಾರಿದರು. ಇದನ್ನೂ ಓದಿ: ಕೇಂದ್ರ ಅಕ್ಕಿ ಯಾಕೆ ಕೊಡ್ಬೇಕು – ಅವ್ರನ್ನ ಕೇಳಿ ಗ್ಯಾರಂಟಿ ಘೋಷಣೆ ಮಾಡಿದ್ರಾ?: ಕುಮಾರಸ್ವಾಮಿ
Advertisement
ಇದು ರಾಜ್ಯ ಸರ್ಕಾರ ಮಾಡಿರೋ ತಪ್ಪುಗಳು. ಜನತೆ ಮುಂದೆ ಸುಳ್ಳು ಘೋಷಣೆ, ಸುಳ್ಳು ಭರವಸೆ ನೀಡಿದ್ದಾರೆ. ಈ ಭರವಸೆ ಈಡೇರಿಸುವುದರಲ್ಲಿ ಮುಂದಿನ ದಿನಗಳಲ್ಲಿ ಯಾವ ಪರಿಸ್ಥಿತಿ ಆಗುತ್ತೆ ಅಂತ ಈಗ ಅವರಿಗೆ ಅರಿವಾಗುತ್ತದೆ. ಚುನಾವಣೆಯಲ್ಲಿ ಮತ ಪಡೆಯೋಕೆ ಹೇಳಿದರು. ಈಗ ಅದರ ಅರಿವು ಕಾಂಗ್ರೆಸ್ ಅವರಿಗೆ ಆಗುತ್ತಿದೆ ಎಂದು ವಾಗ್ದಾಳಿ ತಿಳಿಸಿದರು.
Advertisement
ವಿದ್ಯುತ್ ಬಿಲ್ (Electricity Bill) ಏರಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಿಮ್ಮ ಉಪ ಕುಲಪತಿ ಬಾಯಿ ಬಡಿದುಕೊಳ್ತಿದ್ದಾರೆ. ವಿಟಿಯು ಕುಲಪತಿ 35 ಲಕ್ಷ ರೂ. ಬಿಲ್ ಕಟ್ಟಬೇಕು ಅಂತ ಬಾಯಿ ಬಡಿದುಕೊಳ್ಳುತ್ತಾರೆ ಯಾರು ಇದಕ್ಕೆ ಹೊಣೆ ಹೊರುವವರು. ಅನೇಕ ಕುಟುಂಬಗಳಿಗೆ ಇನ್ನು ಬಿಲ್ ಬಂದಿಲ್ಲ. ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಬಿಲ್ ಬರುತ್ತಿತ್ತು. ಈ ತಿಂಗಳು ಬಿಲ್ ಬಂದಿಲ್ಲ ಅಂತಿದ್ದಾರೆ. ಜನರು ಆತಂಕದಿಂದ ವಿದ್ಯುತ್ ಬಗ್ಗೆ ಮಾತಾಡ್ತಿದ್ದಾರೆ. ಇದನ್ನು ರಾಜ್ಯದಲ್ಲಿ ಆಡಳಿತ ಇದೆ ಅಂತ ಕರಿಯಬೇಕಾ? ಒಂದು ತಿಂಗಳಿಂದ ಕಾಂಗ್ರೆಸ್‌ನವರು ಡ್ರಾಮಾ ಮಾಡುತ್ತಿದ್ದಾರೆ. ನೋಡೋಣ ಇನ್ನು ಏನೇನು ನಾಟಕ ಆಡ್ತಾರೆ ಅಂತ ಕಿಡಿಕಾರಿದರು.