Advertisements

ಸಮ್ಮಿಶ್ರ ಸರ್ಕಾರ ಪತನಗೊಂಡ ರಹಸ್ಯ ಬಿಚ್ಚಿಟ್ಟ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ

– ಸಿದ್ದರಾಮಯ್ಯ ‘ಆ’ ಕೆಲಸ ಮಾಡಲಿಲ್ಲ

ವಿಜಯಪುರ: ಸಿಂದಗಿ ಹಾಗೂ ಹಾನಗಲ್ ಕ್ಷೇತ್ರದಲ್ಲಿ ಉಪಚುನಾವಣಾ ಕಣ ರಂಗೇರುತ್ತಿದ್ದು, ಈ ಮಧ್ಯೆ ರಾಜಕೀಯ ನಾಯಕರ ವಾಕ್ಸಮರ ಮುಂದುವರಿದಿದೆ. ಹಳೆಯದನ್ನೆಲ್ಲ ಕೆದಕಿಕೊಂಡು ವಾಗ್ದಾಳಿಗಳನ್ನು ನಡೆಸುತ್ತಿದ್ದಾರೆ. ಇದೀಗ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರ ಹೇಗೆ ಪತನವಾಯಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ.

Advertisements

ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಮನಸ್ಸು ಮಾಡಿದ್ದರೆ ಸರ್ಕಾರ ಉಳಿಸಬಹುದಿತ್ತು. ಮೈತ್ರಿ ಸರ್ಕಾರ ಬೀಳುವಾಗ ನಾನು ಅಮೆರಿಕದಲ್ಲಿದ್ದೆ. ಜಾರ್ಜ್, ಬೈರತಿ ಬಸವರಾಜ್ ಮಧ್ಯೆ ಗಲಾಟೆ ಆಗಿತ್ತು. ರಮೇಶ್ ಜಾರಕಿಹೊಳಿ ಗಲಾಟೆ ಸರಿಪಡಿಸಲಿಲ್ಲ. ಆಗ ಸಿದ್ದರಾಮಯ್ಯ ಕರೆದು ಮಾತಾಡಿದ್ರೆ ಸರಿ ಹೋಗುತ್ತಿತ್ತು. ಸಿದ್ದರಾಮಯ್ಯ ಆ ಕೆಲಸ ಮಾಡಲಿಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ಕುಮಾರಸ್ವಾಮಿಯನ್ನು ಆನೆಯನ್ನಾಗಿ ಮಾಡಿದ್ದು ನಾವು: ಜಮೀರ್

Advertisements

ಬಿಜೆಪಿ ಜೊತೆ ಸರ್ಕಾರ ಮಾಡಲು ಸಿದ್ದರಾಮಯ್ಯ ಅವರೇ ಕಾರಣ. ಶಿವಸೇನೆಗೆ ಬೆಂಬಲ ಕೊಟ್ಟು ಸರ್ಕಾರ ನಡೆಸುತ್ತಿದ್ದಾರೆ. ಇವದ್ರ್ಯಾವ ಜಾತ್ಯಾತೀತತೆ. ಅಧಿಕಾರವನ್ನ ಯಡ್ಡಿಯೂರಪ್ಪಗೆ ಕೊಟ್ಟಿದ್ದೆ. ದೇವೆಗೌಡರ ತಲೆ ಕೆಡಸಿದ್ದವರೇ ಈ ಕಾಂಗ್ರೆಸ್ ನವರು. ಕುಮಾರಸ್ವಾಮಿ ಏನು ಕೆಲಸ ಮಾಡಬಹುದು ಎಂದು ತೋರಿಸಲು ಮುಂದಾಗಿದ್ದೆ ನಾನು. ಆದರೆ ಸಿದ್ದರಾಮಯ್ಯನಂತವರು ಚೂರಿ ಹಾಕಿ ಕಾಂಗ್ರೆಸ್ ಗೆ ಹೋದರು. ರಮೇಶ್ ಜಾರಕಿಹೊಳಿ ಜಗಳವನ್ನ ಬಗೆಹರಿಸಿಲ್ಲ. ಕಾಂಗ್ರೆಸ್ ನಾಯಕರು ಮೊದಲು ನಿಮ್ಮ ನಡವಳಿಕೆ ಸರಿ ಮಾಡಿಕೊಳ್ಳಲಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಟವೆಲ್‍ನಲ್ಲಿ ಯಾವುದೇ ಗ್ಲಿಸರಿನ್ ಇಲ್ಲ, ನಮ್ದು ಭಾವನಾತ್ಮಕ ಕುಟುಂಬ: ಹೆಚ್‍ಡಿಕೆ

Advertisements

ಕಾಂಗ್ರೆಸ್ ನಾಯಕರು ಜೆಡಿಎಸ್, ಬಿಜೆಪಿಯ ಬಿ ಟೀಂ ಅಂದ್ರು. ಮುಂದೆ ಅವರೇ ನಮ್ಮೊಂದಿಗೆ ಬಂದು ಸರ್ಕಾರ ಮಾಡಲು ಒತ್ತಡ ಮಾಡಿದ್ರು. ಬಿಜೆಪಿ 105 ಸ್ಥಾನ ಗೆಲ್ಲಲು ಕಾಂಗ್ರೆಸ್ ನಾಯಕರ ನಡವಳಿಕೆಗಳೇ ಕಾರಣ. ಅವರು ಜೆಡಿಎಸ್, ಬಿಜೆಪಿಯ ಬಿ ಟೀಂ ಎಂದಿರುವುದೇ ಬಿಜೆಪಿ 105 ಸ್ಥಾನ ಗೆಲ್ಲಲು ಸಾಧ್ಯವಾಗಿದ್ದು. ಬಿಜೆಪಿ ವಿರುದ್ಧ ಹೋರಾಟ ಕಾಂಗ್ರೆಸ್ ಮಾಡಿಲ್ಲ. ನಮ್ಮ ಹೋರಾಟದ ಪ್ರತಿಫಲದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ನಮ್ಮ ವಿರುದ್ಧ ಸಿದ್ದರಾಮಯ್ಯರ ನಿರಂತರ ನಡವಳಿಕೆಗಳೇ ಬಿಜೆಪಿಗೆ 105 ಸ್ಥಾನ ಬರಲು ಸಾಧ್ಯವಾಯಿತು ಎಂದು ವಾಗ್ದಾಳಿ ನಡೆಸಿದರು.  ಇದನ್ನೂ ಓದಿ:  ರೇವಣ್ಣ DCM ಆಗ್ತಾನೆಂದು ಬಿಎಸ್‍ವೈಗೆ ಅಧಿಕಾರ ಬಿಟ್ಟು ಕೊಡಲಿಲ್ಲ, ನನ್ನ ಬಳಿ ವೀಡಿಯೋ ದಾಖಲೆ ಇದೆ: ಜಮೀರ್

ದೇವೇಗೌಡ ಮಾರ್ಗದರ್ಶನ ಹಾಗೂ ಪರಿಶ್ರಮ, ಶಾಸಕರ ಕಾರ್ಯಕರ್ತರ ಶ್ರಮದಿಂದ ಕಳೆದ ಚುನಾವಣೆಗಿಂತ ಈ ಬಾರಿ ಹೆಚ್ಚು ಮತಗಳನ್ನು ಪಡೆಯುತ್ತೇವೆ. ಜೆಡಿಎಸ್ ಗೆ ಮತ ಹಾಕಿದರೆ ಬಿಜೆಪಿಗೆ ಮತ ಹಾಕಿದಂತೆ ಎಂದು 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಹೇಳಿತ್ತು. ಬಿಜೆಪಿ ಬಿ ಟಿಂ ಎಂದು ಹೇಳಿದ್ದರು ನಂತರ ಅವರೇ ನಮ್ಮ ಜೊತೆ ಸರ್ಕಾರ ಮಾಡಿದರು. ಕಾಂಗ್ರೆಸ್ ನಾಯಕರು 2018 ರಿಂದಲೇ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ. ಅವರೇ ಬಿಜೆಪಿ ಸಮೀಪ ಇದ್ದಾರೆ. ಜ್ಯಾತ್ಯಾತೀತ ನಿಲುವು ಇದ್ದು ಕೋಮುವಾದಿ ಪಕ್ಷದ ಜೊತೆಗಿದ್ದಾರೆ. ಬಿಜೆಪಿಯವರು 2013 ರಲ್ಲಿ 40 ರಿಂದ 2018 ರ ಚುನಾವಣೆಯಲ್ಲಿ 105 ಕ್ಕೆ ಹೋಗಲು ಜೆಡಿಎಸ್ ಕಾರಣವೇ, ಅದಕ್ಕೆ ಕಾಂಗ್ರೆಸ್ ಕಾರಣ. 2008 ರಲ್ಲಿ ವಿರೋಧ ಪಕ್ಷದವರ ವಿರುದ್ಧ ಹಗರಣ ಕಾಂಗ್ರೆಸ್ ತೆಗೆದಿಲ್ಲ. ನಮ್ಮ ಹೋರಾಟದ ಪ್ರತಿಫಲ ಎಂದರು. ಇದನ್ನೂ ಓದಿ: ಕೈಲಾಗದವನು ಮೈ ಪರಚಿಕೊಂಡ ಹಾಗೆ, ಜಮೀರ್ ಸ್ಥಿತಿ: ಹೆಚ್‍ಡಿಕೆ ಲೇವಡಿ 

2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಸಿದ್ದರಾಮಯ್ಯ ಅವರ ನಡುವಳಿಕೆಗಳು ಬಿಜೆಪಿಗೆ ವರವಾಗಿದೆ. ಇಲ್ಲವಾದರೆ ಬಿಜೆಪಿಗೆ ಇಂದು ರಾಜ್ಯದಲ್ಲಿ ನೆಲೆ ಇರುತ್ತಿರಲಿಲ್ಲ. ಸಿದ್ದರಾಮಯ್ಯ ಅವರ ಕೊಡುಗೆಗಿಂತ ನನ್ನ ಕೊಡುಗೆ ಹೆಚ್ಚಿದೆ. ಪಕ್ಷ ಸಂಘಟನೆ ಬಗ್ಗೆ ನಾವು ಸಿದ್ದರಾಮಯ್ಯ ಬಳಿ ಕಲಿಯಬೇಕಿಲ್ಲ ಎಂದು ಗರಂ ಆದರು.

Advertisements
Exit mobile version