ಬೆಂಗಳೂರು: ಶಾಸಕರ ಲೆಟರ್ ತೆಗೆದುಕೊಂಡು ಮುಖ್ಯಮಂತ್ರಿಗಳ ಕಚೇರಿಗೆ ಹೋದ್ರೆ 30 ಲಕ್ಷ ಕೇಳ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂದು ಸಿಎಂ ಕಚೇರಿ (Chief Minister Office) ಎಲ್ಲಿಗೆ ಬಂದಿದೆ ಅಂತ ಜನ ಮಾತಾಡ್ತಿದ್ದಾರೆ. ಶಾಸಕರ ಲೆಟರ್ ತೆಗೆದುಕೊಂಡು ಸಿಎಂ ಕಚೇರಿಗೆ ಹೋದ್ರೆ 30 ಲಕ್ಷ ಕೊಡಬೇಕು ಅಂತಾರೆ. 30 ಲಕ್ಷ ಕೊಡದೇ ಹೋದರೆ ಕೆಲಸ ಆಗಲ್ಲ ಅಂತ ಸಿಎಂ ಕಚೇರಿಯಲ್ಲಿ ಹೇಳ್ತಾರೆ ಎಂದು ಆರೋಪಿಸಿದರು.
Advertisement
Advertisement
ನಾನು ಯಾಕೆ ತಾಳ್ಮೆ ಕಳೆದುಕೊಳ್ಳಲಿ. ನಾನು ಎರಡು ಬಾರಿ ಆಕ್ಸಿಡೆಂಟ್ ಆಗಿ ಸಿಎಂ ಆದೆ. ಜನರಿಂದ ನಾನು ಸಿಎಂ ಆಗಿಲ್ಲ. ಕಾಂಗ್ರೆಸ್ (Congress) ಅವರು ಎರಡು ವರ್ಷ ಬೀದಿ ಬೀದಿಯಲ್ಲಿ ಜಾಗಟೆ ಬಾರಿಸಿದ್ರಿ. 40% ಅಂದ್ರಿ ಅದಕ್ಕೆ ಡಾಕ್ಯುಮೆಂಟ್ ಇಟ್ಡಿದ್ದೀರಾ. ಪೇ ಸಿಎಂ (Pay CM) ಅಂತ ಮಾಡಿದ್ರಿ ಅದಕ್ಕೆ ದಾಖಲೆ ಇಟ್ರಾ?, ಆಗ ನಿಮಗೆ ತಾಳ್ಮೆ ಇರಲಿಲ್ಲವಾ ಎಂದು ಪ್ರಶ್ನಿಸಿದರು.
Advertisement
ಒಂದು ತಿಂಗಳಲ್ಲಿ ಈ ಸರ್ಕಾರ ಏನೂ ಮಾಡಿಲ್ಲ. ಸರ್ಕಾರದ ಕೆಲಸವನ್ನ ರಾಜ್ಯಪಾಲರ ಭಾಷಣದಲ್ಲಿ ಹೇಳಿಸಿದ್ದಾರೆ. ರಾಜ್ಯಪಾಲರ ಭಾಷಣಕ್ಕೆ 135 ಶಾಸಕರು ಬೆಂಚ್ ಕುಟ್ಟಿದ್ದೇ ನಾನು ನೋಡಿಲ್ಲ. ಆ ಪಕ್ಷದ ಶಾಸಕರಿಗೂ ಈ ಸರ್ಕಾರದ ದಿಕ್ಕು ಏನು ಅಂತ ಗೊತ್ತಾಗಿದೆ. ಹೀಗಾಗಿ ಅವರು ಮೇಜು ಕುಟ್ಟಿಲ್ಲ ಎಂದರು.
Advertisement
ನಾನು ವಿರೋಧ ಪಕ್ಷದ ನಾಯಕನಾಗಿ ಟೀಕೆ ಮಾಡ್ತಿಲ್ಲ. ನಾನು 5 ಬಾರಿ ಶಾಸಕ ಆಗಿದ್ದೇನೆ. ಚುನಾವಣೆ ವೇಳೆ ವೀರಾವೇಶದಲ್ಲಿ ಜನರಿಗೆ ಕೊಟ್ಟ ಮಾತೇನು?. ಈಗ ನೀವು ಕೊಟ್ಟಿರೋ ಗ್ಯಾರಂಟಿ ಏನು. ಎಲ್ಲವೂ ಕಣ್ಣ ಮುಂದೆ ಇದೆ. ಈ ಸರ್ಕಾರ ಮುಂದೆ ಐಸಿಯುಗೆ ಹೋಗುತ್ತದೆ. ಐಸಿಯು ವೆಂಟಿಲೇಟರ್ ನಿಂದ ಈ ಸರ್ಕಾರ ಮುಂದೆ ನಡೆಯುತ್ತೆ. ತೋರಿಸಿಕೊಳ್ಳಲು ರಾಜ್ಯಪಾಲರ ಕೈಯಲ್ಲಿ ಹೇಳಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಾಗದೇ ಐಸಿಯುಗೆ ಹೋಗುತ್ತೆ ಎಂದಿದ್ದಾರೆ.
ಭ್ರಷ್ಟಾಚಾರದ (Corruption) ಬಗ್ಗೆ ಇವರಿಗೆ ಮಾತಾಡಲು ಯಾವ ನೈತಿಕತೆ ಇದೆ. ಒಂದು ತಿಂಗಳಲ್ಲಿ ಭ್ರಷ್ಟಾಚಾರ ದ ಬಗ್ಗೆ ಏನ್ ಕ್ರಮ ಆಗಿದೆ ಎಂದು ಪ್ರಶ್ನಿಸಿದ ಹೆಚ್‍ಡಿಕೆ, ಯಾವ ಭ್ರಷ್ಟಾಚಾರ ನಿಯಂತ್ರಣ ಮಾಡ್ತೀರಾ ನೀವು, ಜನ ಬೀದಿ ಬೀದಿಯಲ್ಲಿ ಈ ಸರ್ಕಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು. 2013 ರಿಂದ 18 ವರೆಗೆ 29 ಸಾವಿರ ಕೋಟಿ ಹಣ ಹೋಗೋ ಟೈಂನಲ್ಲಿ ಕೊಟ್ಟು ಹೋದ್ರು. ಈಗ ಹೇಗೆ ಮನೆ ಕಟ್ತಾರೆ ನೊಡೋಣ. ಈ ಭಾಷಣದ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
5 ಗ್ಯಾರಂಟಿಗಳ (Congress Guarantee) ಬಗ್ಗೆ ಕೊಟ್ಟ ಮಾತು ಜಾರಿಗೆ ತರೋ ಪಕ್ಷ ಅಂತ ಹೇಳಿದ್ದಾರೆ. ರಾಜ್ಯದ ಅನೇಕ ಸಾಮಾಜಿಕ, ನೀರಾವರಿ ಸಮಸ್ಯೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಪಶು ಸಂಗೋಪನೆಗೆ ಉತ್ತೇಜನ ಕೊಡಬೇಕು ಅನ್ನೋ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಇದರ ಅರಿವು ಈ ಸರ್ಕಾರ ಇಟ್ಟುಕೊಂಡಿದೆ. ಎಲ್ಲಾ ವಿಷಯಗಳನ್ನ ಪ್ರಸ್ತಾಪ ಮಾಡಿದ್ದಾರೆ ಎಂದರು.
ಈಗಾಗಲೇ ಹಾಲು ಉತ್ಪಾದಕರ ಹಣ ಕಡಿತ ಮಾಡಿದ್ದಾರೆ. ಸಿಎಂ ಹಣ ಕಡಿತ ಮಾಡಬೇಡಿ ಅಂದರೂ ಹಣ ಕಡಿತ ಮಾಡಿದೆ. 2.5 ರೂ. ಬೆಂಗಳೂರು ಡೈರಿಯವರು ಕಡಿತ ಮಾಡಿದ್ದಾರೆ. ಕುರಿ ಸತ್ತ ಕುಟುಂಬಗಳಿಗೆ ಸರಿಯಾಗಿ ನೆರವು ಸಿದ್ದರಾಮಯ್ಯ (Siddaramaiah) ಸಿಎಂ ಆಗಿದ್ದಾಗ ನೀಡಿರಲಿಲ್ಲ ಎಂದು ಹೆಚ್‍ಡಿಕೆ ಗರಂ ಆದರು.
Web Stories