– ಪತ್ರದಲ್ಲಿ ರಾಷ್ಟ್ರಧ್ವಜ, ನಾಡಧ್ವಜ ಅಂತಾ ತಿದ್ದಿದ್ದಾರೆ ಎಂದು ಮಾಜಿ ಸಿಎಂ ಕಿಡಿ
ಬೆಂಗಳೂರು: ಕುಮಾರಸ್ವಾಮಿ (H.D.Kumaraswamy) ತಪ್ಪು ಮಾಡಿದ್ರೆ ನೇಣಿಗೆ ಹಾಕಿ. ನೀವು ತಪ್ಪು ಮಾಡಿದ್ರೆ ಏನು ಮಾಡಬೇಕು ಹೇಳಿ ಎಂದು ಕೆರಗೋಡು ಪ್ರಕರಣದ ತನಿಖೆಗೆ ಆಗ್ರಹಿಸಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಸವಾಲು ಹಾಕಿದರು.
Advertisement
ಜೆಡಿಎಸ್ ಕಚೇರಿಯಲ್ಲಿ ಸರ್ವೋದಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಹೆಚ್‌ಡಿಕೆ, ಕೆರಗೋಡು ಘಟನೆಯಲ್ಲಿ ಸರಿಯಾಗಿ ಕ್ರಮ ತೆಗೆದುಕೊಂಡಿದ್ರೆ ಒಂದು ತನಿಖೆ ಮಾಡಿಸಿ. ಅದರ ಸರ್ಟಿಫಿಕೇಟ್ ತೆಗೆದುಕೊಳ್ಳಿ. ಕೆರಗೋಡು ಘಟನೆ ತನಿಖೆ ಮಾಡಿ. ಕುಮಾರಸ್ವಾಮಿ ತಪ್ಪು ಮಾಡಿದ್ರೆ ನೇಣಿಗೆ ಹಾಕಿ. ನೀವು ತಪ್ಪು ಮಾಡಿದ್ರೆ ಏನ್ ಮಾಡಬೇಕು ಹೇಳಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕಾನೂನು ವಿರುದ್ಧ ಯಾರೇ ನಡೆದುಕೊಂಡರು ಅವರ ವಿರುದ್ಧ ಕ್ರಮ: ಪರಮೇಶ್ವರ್
Advertisement
Advertisement
ರಾಜ್ಯದಲ್ಲಿ ಹಲವಾರು ದಿನಗಳಿಂದ ಅನೇಕ ವಿಷಯ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳ ಮುಂದೆ ಕಡಿಮೆ ಬರ್ತಿದ್ದೇನೆ. ಅನಿವಾರ್ಯವಾಗಿ ಇವತ್ತು ಭಾವನೆ ಹಂಚಿಕೊಳ್ಳೋ ಪರಿಸ್ಥಿತಿ ಈ ಸರ್ಕಾರದ ನಡವಳಿಕೆಯಿಂದ ಬಂದಿದೆ. ಎರಡು ದಿನಗಳಿಂದ ಮಂಡ್ಯದಲ್ಲಿ ಒಂದು ಘಟನೆ ನಡೆಯುತ್ತಿದೆ. ಕೆರಗೋಡಿನಲ್ಲಿ ಧ್ವಜಸ್ತಂಭದ ರಾಜಕೀಯ ನಡೆಯುತ್ತಿದೆ. ದೇವರಾಜ್ ಅರಸ್ ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಶೋಷಿತ ವರ್ಗದ ಜನರ ಪರವಾಗಿ ವೀರಾವೇಶದ ಭಾಷಣವನ್ನು ಸಿಎಂ ಮಾಡಿದ್ದಾರೆ. ಚೆಲುವರಾಯಸ್ವಾಮಿ ನಮಗೆ ಕೆಲವು ಉಪದೇಶ ಹೇಳಿದ್ದಾರೆ. ಕೆಲವು ವಿಷಯಗಳನ್ನ ಮಂಡ್ಯದಲ್ಲಿ ಹೇಳಿದ್ದಾರೆ. ನನ್ನ ಮೇಲೆ ಆರೋಪ ಹೊರಸಿದ್ದಾರೆ. ಮಂಡ್ಯ ಹಾಳು ಮಾಡೋಕೆ ಬಂದಿದ್ದೇನೆ ಅಂತ ಹೇಳಿದ್ದಾರೆ. ಅವರ ಮುಖಭಾವ ನೋಡಿದೆ. ಅವರ ಮುಖಭಾವದಲ್ಲಿ ಅತಿ ವಿನಯಂ ದೂರ್ತ ಲಕ್ಷಣಂ. ಅವರ ಮುಖದಲ್ಲಿ ಹಾಗೇ ಕಾಣ್ತಿತ್ತು ಎಂದು ಟಾಂಗ್ ಕೊಟ್ಟರು.
Advertisement
ಮಂಡ್ಯ (Mandya) ಜಿಲ್ಲೆ ಸಿದ್ಧಾಂತ ನಾಶ ಮಾಡೋಕೆ ನಾನು ಹೋಗಿದ್ದೆ ಅಂತಾರೆ. ನನ್ನ ಜೊತೆ ಇದ್ದವರು ಅವರು. ಜೆಪಿ, ಧರ್ಮೇಗೌಡ ಸೇರಿದಂತೆ ಅನೇಕರ ಹೆಸರು ಹೇಳಿದ್ದಾರೆ. ಕೆರಗೋಡು ಘಟನೆಗೂ ನನಗೂ ಏನು ಸಂಬಂಧ ಇದೆ? ಸಿಎಂ, ಚೆಲುವರಾಯಸ್ವಾಮಿ ಅವರನ್ನ ಕೇಳ್ತೀನಿ. ಸರ್ಕಾರದ ನಡವಳಿಕೆ, ನಿಮ್ಮ ವೈಫಲ್ಯವನ್ನ ನನ್ನ ಮೇಲೆ ಹೇಳ್ತಿದ್ದೀರಾ? ನನ್ನಿಂದ ಆದ ಪ್ರಮಾದವೇನು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕೆರೆಗೋಡು ಹನುಮ ಧ್ವಜ ಪ್ರಕರಣ – ಪಿಡಿಓ ಅಮಾನತು
ನಿನ್ನೆ ಪ್ರತಿಭಟನೆ ಮಾಡಿದ್ದು ಬಿಜೆಪಿ ಅವರು. ನಾನು ಬರಬೇಕು ಅಂತ ನನ್ನ ಅಭಿಮಾನಿಗಳು ಹೇಳಿದ್ರು. ಅಶೋಕ್ ಅವರು ಲಾಠಿ ಚಾರ್ಜ್ ಆದಾಗ ಅವರೇ ಹೋಗಿದ್ರು. ಮಾಧ್ಯಮಗಳ ಮುಂದೆ ಬಿಜೆಪಿ-ಜೆಡಿಎಸ್ ಪ್ರತಿಭಟನೆ ಮಾಡ್ತೀವಿ ಅಂತ ಹೇಳಿದ್ರು. ನಿನ್ನೆ ನಾನು ಪ್ರತಿಭಟನೆಗೆ ಹೋಗಿದ್ದೆ. ನಾನು ಏನು ಮಾತಾಡಿದ್ದೆ ಮಾಧ್ಯಮಗಳಲ್ಲಿ ಇದೆ. ಹಳೆ ಸ್ನೇಹಿತರು ಹೇಳಿದ್ದಾರೆ. ಕೇಸರು ಶಾಲು ಹಾಕಿದ್ದಾರೆ. ಜೆಡಿಎಸ್ ದುಡಿಮೆಯನ್ನ ಅಂತಿಮ ಮಾಡೋಕೆ ಹೊರಟಿದ್ದಾರೆ ಅಂತ ಚೆಲುವರಾಯಸ್ವಾಮಿ ಹೇಳಿದ್ದಾರೆ. ನಾನು ಕೇಸರಿ ಶಾಲು ಹಾಕಿದ್ದು ತಪ್ಪಾ ಎಂದು ಪ್ರಶ್ನೆ ಹಾಕಿದರು.
ನಾನು ದಲಿತರ ಕಾರ್ಯಕ್ರಮಕ್ಕೆ ಹೋಗಿದ್ದೆ. ಅವರು ಉಪಯೋಗ ಮಾಡುವ ನೀಲಿ ಬಣ್ಣದ ಶಾಲು ಹಾಕಿದ್ದೇನೆ. ಪಾಪ ಅದು ಚೆಲುವರಾಯಸ್ವಾಮಿ ಕಣ್ಣಿಗೆ ಕಂಡಿಲ್ಲ. ಅವರಿಗೆ ಬೇಕಾದ್ರೆ ಒಂದು ಫೋಟೋ ಕಳಿಸೋಣ. ಕೇಸರಿ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಸಂಕುಚಿತ ಮನೋಭಾವ. ದೇಶದ ತಿರಂಗದಲ್ಲಿ ಇರೋ ಬಣ್ಣ ಯಾವುದು. ಜನರಿಗೆ ಬಿಡಿಸಿ ಹೇಳಿ. ಅಲ್ಲಿ ಇರೋ 3 ಬಣ್ಣ ಯಾವುದು? ಮಂಡ್ಯ ಮನೆ ಮೇಲೆ ತಿರಂಗ ಹಾಕ್ತೀವಿ ಅಂತ ಶಾಸಕರು ಹೇಳ್ತಾರೆ. ಅದನ್ನ ನಾವು ಸ್ವಾಗತ ಮಾಡ್ತೀವಿ. ತಿರಂಗಾದ ಕೇಸರಿ ಬಣ್ಣ ತೆಗೆದರೆ ಹೇಗೆ? ಕೇಸರಿ ಬಣ್ಣ ಯಾಕೆ ತಿರಂಗದಲ್ಲಿ ಹಾಕಿದ್ದಾರೆ ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದರು. ಇದನ್ನೂ ಓದಿ: ಕೆರಗೋಡು ಹನುಮ ಧ್ವಜ ತೆರವಿಗೆ ಆಕ್ರೋಶ- ಮಂಡ್ಯದಲ್ಲಿ ಕಲ್ಲು ತೂರಾಟ, ಲಾಠಿಚಾರ್ಜ್
ಮಂಡ್ಯದ ಬಗ್ಗೆ ನಿಮ್ಮಿಂದ ಸರ್ಟಿಫಿಕೇಟ್ ತೆಗೆದುಕೊಳ್ಳಬೇಕಿಲ್ಲ. ಜನರು ಸರ್ಟಿಫಿಕೇಟ್ ಕೊಡ್ತಾರೆ. ಮಂಡ್ಯದಲ್ಲಿ ಸೋತಿದ್ದೇವೆ.. ಗೆದ್ದಿದ್ದೇವೆ. ನಾನು ಯಾರ ಅಡಿಯಾಳು ಅಲ್ಲ. ನಾನು ರಾಜ್ಯದ ಜನರ ಅಡಿಯಾಳು. ನಾನು ಹಿಂದುತ್ವದ ಬಗ್ಗೆ ನಿನ್ನೆ ಭಾಷಣ ಮಾಡಿಲ್ಲ. ಹನುಮಾನ್ ಧ್ವಜದ (Hanuma Dhwaja) ಬಗ್ಗೆ ನಾನು ಮಾತಾಡಿಲ್ಲ. ಸರ್ಕಾರದ ವೈಫಲ್ಯದ ಬಗ್ಗೆ ಮಾತಾಡಿದ್ದೆ. ನಿಮ್ಮ ಎಂಎಲ್‌ಎಗೆ ಹೇಗೆ ಮಾತಾಡಬೇಕು, ನಡೆದುಕೊಳ್ಳಬೇಕು ಎಂದು ಮೊದಲು ಹೇಳಿ ಕೊಡಿ ಎಂದು ರವಿ ಗಣಿಗ ವಿರುದ್ಧ ಗುಡುಗಿದರು.
ಕೆರಗೋಡು ವಿಷಯ ಪ್ರಾರಂಭ ಆಗಿದ್ದು ಹೇಗೆ? ಮೊದಲು ಪಂಚಾಯಿತಿ ನಿರ್ಣಯ ಆಗಿದೆ. ಪಂಚಾಯಿತಿಯ ವಿಷಯಗಳಲ್ಲಿ ಯಾವ್ಯಾವ್ದು ಇದ್ದವು? 8, 10 ವಿಷಯ ಅವತ್ತು ಇತ್ತು. ಯೋಗೇಶ್ ಅನ್ನೋನು ಅರ್ಜುನ ಸ್ತಂಭ ಹಾಕೋಕೆ ಅವಕಾಶ ಕೊಡಿ ಅಂತ ಹಾಕಿದ್ರು. ರಾಮ ಭಜನ ಮಂಡಳಿ ಅವರು ಧ್ವಜ ಸ್ತಂಭ ನಿರ್ಮಾಣಕ್ಕೆ ಅವಕಾಶ ಕೇಳಿ ಮನವಿ ಮಾಡಿದ್ದಾರೆ. ರಾಷ್ಟ್ರಧ್ವಜ, ನಾಡಧ್ವಜ ಅಂತ ಕೇಳಿಲ್ಲ. ಧ್ವಜ ಸ್ತಂಭ ಸ್ಥಾಪನೆಗೆ ಮನವಿ ಮಾಡಿದ್ರು. ನವೆಂಬರ್‌ನಲ್ಲಿ ಗೌರಿ ಶಂಕರ್ ಟ್ರಸ್ಟ್ ಮನವಿ ಮಾಡಿತ್ತು. ಆಗ ಧ್ವಜ ಸ್ತಂಭಕ್ಕೆ ಅನುಮತಿ ಮಾತ್ರ ಕೊಡಲಾಗಿತ್ತು. ಡಿಸೆಂಬರ್‌ನಲ್ಲಿ ಮತ್ತೊಂದು ಪತ್ರ ಕೊಟ್ಟಿರೋದನ್ನ ತಿದ್ದಿದ್ದಾರೆ. ಇದನ್ನ ಸೃಷ್ಟಿಸಿ, ತಿದ್ದಿ ಪತ್ರ ರೆಡಿ ಮಾಡಿದ್ದಾರೆ. 6ನೇ ವಿಷಯ ಯೋಗೇಶ್ ಮನವಿ ಅರ್ಜುನ ಸ್ತಂಭ ವಿಷಯಕ್ಕೆ ಅನುಮತಿ ಕೊಡಲಾಗಿದೆ. ಗೌರಿ ಶಂಕರ ಸೇವಾ ಟ್ರಸ್ಟ್ ಯಾವ ಧ್ವಜ ಹಾರಿಸಬೇಕು ಅಂತ ಅನುಮತಿ ಕೇಳಿಲ್ಲ. ಗೌರಿ ಶಂಕರ್ ಸೇವಾ ಟ್ರಸ್ಟ್ ಕೇಳಿದ ಮನವಿಗೆ ರಾಷ್ಟ್ರಧ್ವಜ, ನಾಡಧ್ವಜ ಅಂತ ಹೊಸದಾಗಿ ಸೇರಿಸಿದ್ದಾರೆ. ಇದರಲ್ಲಿ ಸೀಲ್, ಸೈನ್ ಇಲ್ಲ. ತಿದ್ದಿರೋ ಪತ್ರದಲ್ಲಿ ರಾಷ್ಟ್ರಧ್ವಜ, ನಾಡಧ್ವಜ ಅಂತ ತಿದ್ದಿದ್ದಾರೆ. ಯಾರು ತಿದ್ದಿದ್ದು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕೆರಗೋಡಿನಲ್ಲಿ ತಾರಕಕ್ಕೇರಿದ ಹನುಮ ಧ್ವಜ ಸಂಘರ್ಷ- ಫೆ.9ಕ್ಕೆ ಮಂಡ್ಯ ಬಂದ್‍ಗೆ ಕರೆ
ಕಾಂಗ್ರೆಸ್ ಅವರು ರೆಕಾರ್ಡ್ ಸೃಷ್ಟಿ ಮಾಡಿದ್ದಾರೆ. ಡಿಸೆಂಬರ್ 29ಕ್ಕೆ ಪಿಡಿಒ ಅನುಮತಿ ಕೊಟ್ಟರು. ಆಮೇಲೆ ಜನವರಿ 5, 19 ಕ್ಕೆ ಮತ್ತೊಂದು ಪತ್ರದಲ್ಲಿ ಅನುಮತಿ ಕೊಟ್ಟಿದ್ದಾರೆ. ನಿನ್ನೆ ನಾನು ಭಾಷಣದಲ್ಲಿ ಬೆಂಕಿ ಹಚ್ಚೋ ಮಾತು ಆಡಿಲ್ಲ. ಜನವರಿ 20 ರಂದು ಹನುಮ ಧ್ವಜ ಸ್ಥಾಪನೆ ಮಾಡಿದ್ರು. 5 ದಿನ ಅಧಿಕಾರಿಗಳು ಏನ್ ಮಾಡಿದ್ರಿ? 26 ಕ್ಕೆ ತ್ರಿವರ್ಣ ಧ್ವಜ ಹಾರಿಸಿದ್ದು ಜನರೇ. ಅ ಬಳಿಕ ಅದನ್ನ ಇಳಿಸಿದ್ದಾರೆ. ಜನರೇ ಹಣ ಸಂಗ್ರಹ ಮಾಡಿ ಧ್ವಜಸ್ತಂಭ ನಿರ್ಮಾಣ ಮಾಡಿದ್ರು. 30 ವರ್ಷಗಳ ಹಿಂದೆ ಸಿದ್ದರಾಮಯ್ಯ ಇದನ್ನ ಉದ್ಘಾಟನೆ ಮಾಡಿದ್ರು. ಹಳೆದು ಆಯ್ತು ಅಂತ ಹೊಸದಾಗಿ ಜನರೇ ನಿರ್ಮಾಣ ಮಾಡಿದ್ರು. ಶಾಸಕರ ಹೆಸರು ಆಹ್ವಾನ ಪತ್ರಿಕೆಯಲ್ಲಿ ಇಲ್ಲ ಅಂತ ಈ ವಿವಾದ ಮಾಡ್ತಿದ್ದಾರೆ ಎಂದು ತಿಳಿಸಿದರು.
1989 ರಾಮನಗರದಲ್ಲಿ ಬೆಂಕಿ ಹಾಕಿಸಿದ್ದು ಕಾಂಗ್ರೆಸ್. ಸಮಾಜ ಹಾಳು ಮಾಡಿದ್ದು ಅಂದು ಕಾಂಗ್ರೆಸ್. ಅಂದು ಸಿದ್ದರಾಮಯ್ಯ ಜೆಡಿಎಸ್‌ನಲ್ಲಿ ಇದ್ದರು. ನಾನು 5 ಬಾರಿ ಕರೆ ಮಾಡಿ ಕ್ರಮ ತೆಗೆದುಕೊಳ್ಳಿ ಅಂತ ಹೇಳಿದ್ದೇನೆ. ಶಾಸಕರ ಮಾತು ಕೇಳಿಕೊಂಡು ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಮೊದಲು ಶಾಂತಿ ನೆಲೆಸಿ ಅಂತ ಡಿಸಿಗೆ ಹೇಳಿದ್ದೇನೆ. ಅಲ್ಲಿ ಎಲ್ಲೋ ಶೋಷಿತ ವರ್ಗ ಅಂತೀರಾ. ಬೆಂಕಿ ಬಿತ್ತು ನಿಮ್ಮ ಮಾತಿಗೆ. ಮಂಡ್ಯ ಹಾಳು ಮಾಡಿರೋರು ನೀವು. ಮಂಡ್ಯದಲ್ಲಿ ಕೇಸರಿ ಬೆಳೆಯೋಕೆ ನಾನಲ್ಲ ನೀವು ಕಾರಣ ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದರು. ಇದನ್ನೂ ಓದಿ: ಹನುಮಂತನ ಕೆಣಕಿದ್ದಕ್ಕೆ ಲಂಕ ದಹನವಾಯ್ತು, ಅದೇ ರೀತಿ ನಿಮ್ಮ ಅವನತಿಯಾಗುತ್ತೆ: ಹೆಚ್‍ಡಿಕೆ ವಾಗ್ದಾಳಿ