ಬೆಂಗಳೂರು: ಬರೋಬ್ಬರಿ 48 ವರ್ಷ ಕಳೆದರೂ ಜನಪ್ರಿಯ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಬಳಸುತ್ತಿದ್ದ ಮರ್ಸಿಡಿಸ್ ಬೆಂಜ್ ಕಾರು ಲಕ ಲಕ ಹೊಳೆಯುತ್ತಿದೆ. ಕಾರನ್ನು ಕಂಡ ಹಲವರು ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ.
Advertisement
ಇಂದು ದೇವರಾಜ ಅರಸು ಅವರ 106ನೇ ಜನ್ಮ ದಿನಾಚರಣೆ ಹಿನ್ನೆಲೆ ಅರಸು ಬಳಸುತ್ತಿದ್ದ ಎಂಇಒ 777 ನೋಂದಣಿ ಸಂಖ್ಯೆಯ ಮರ್ಸಿಡಿಸ್ ಬೆಂಜ್ ಕಾರು ವಿಧಾನಸೌಧಕ್ಕೆ ಎಂಟ್ರಿ ಕೊಟ್ಟಿದೆ. 1972ರ ಚುನಾವಣೆಯಲ್ಲಿ ದೇವರಾಜ ಅರಸು ಅವರು ಅಭೂತಪೂರ್ವ ಗೆಲುವು ಸಾಧಿಸಿದ್ದರು. ಇದರಿಂದಾಗಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸಂತೋಷಗೊಂಡಿದ್ದರು. ಬಳಿಕ ವಿದೇಶದಿಂದ ಮರ್ಸಿಡಿಸ್ ಬೆಂಜ್ ಕಾರ್ ತರಿಸಿ ಸರ್ಕಾರಕ್ಕೆ ಕೊಡುಗೆಯಾಗಿ ನೀಡಿದ್ದರು. ಇದನ್ನೂ ಓದಿ: ಭಾರೀ ಮೊತ್ತಕ್ಕೆ ಕೆಜಿಎಫ್ ಸ್ಯಾಟಲೈಟ್ ಹಕ್ಕು ಖರೀದಿಸಿದ ಜೀ ಸ್ಟುಡಿಯೋಸ್
Advertisement
Advertisement
ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪ್ರತಿ ನಿತ್ಯ ಈ ಬ್ಲ್ಯಾಕ್ ಬ್ಯೂಟಿಯನ್ನು ಬಳಸುತ್ತಿದ್ದರು. 10 ವರ್ಷಗಳ ಕಾಲ ಬ್ಲ್ಯಾಕ್ ಬ್ಯೂಟಿಯ ಜೊತೆಗೆ ಅರಸು ಓಡಾಟ ನಡೆಸಿದ್ದರು. ಬಳಿಕ ಹರಾಜು ಪ್ರಕ್ರಿಯೆಯಲ್ಲಿ ಅರಸು ಅವರ ಆಪ್ತ ಜಿ.ಎಂ.ಬಾಬು ಕಾರನ್ನು ಖರೀದಿಸಿ ಕಾಪಾಡುತ್ತಿದ್ದಾರೆ. ಈ ಕಾರ್ ಇಂದಿಗೂ ಫುಲ್ ಕಂಡೀಷನ್ ನಲ್ಲಿದೆ. ಅವರ ಜನ್ಮದಿನಾಚರಣೆ ಹಿನ್ನೆಲೆ ವಿಧಾನಸೌಧದ ದೇವರಾಜ ಅರಸು ಪ್ರತಿಮೆ ಮುಂದೆ ಕಾರಿನ್ನು ಪ್ರದರ್ಶಿಸಲಾಗುತ್ತಿದೆ. ಪ್ರತಿ ವರ್ಷ ಅರಸು ಜನ್ಮದಿನದಂದು ಈ ಕಾರು ವಿಧಾನಸೌಧಕ್ಕೆ ಎಂಟ್ರಿ ಕೊಡತ್ತದೆ.
Advertisement
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಇದೇ ಕಾರಿನಲ್ಲಿ ವಿಧಾನಸೌಧವನ್ನು ಸುತ್ತು ಹಾಕಿ, ಸಂತಸ ವ್ಯಕ್ತಪಡಿಸಿದ್ದರು. ಈ ಕಾರ್ ಬಗ್ಗೆ ಹಲವರಿಗೆ ಕ್ರೇಜ್ ಇದೆ. ಅದರಲ್ಲೂ ದೇವರಾಜ್ ಅರಸು ಬಳಸಿದ್ದು ಎನ್ನುವ ಕಾರಣಕ್ಕೆ ಇನ್ನೂ ಹೆಚ್ಚು ಪ್ರಸಿದ್ಧಿ ಪಡೆದಿದೆ.