ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಆಪರೇಷನ್ ಆಡಿಯೋ ಸಾಕಷ್ಟು ಗದ್ದಲವೆಬ್ಬಿಸಿದ್ದು, ಕಲಾಪ ಮುಕ್ತಾಯದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಕೆಂಡಾಮಂಡಲರಾಗಿದ್ದಾರೆ.
ಕಲಾಪ ಮುಗಿಸಿ ಹೊರಬಂದ ನಂತರ ವಿರೋಧ ಪಕ್ಷದ ಮೊಗಸಾಲೆಯಲ್ಲಿ ಕುಳಿತಿದ್ದ ಶಾಸಕರ ಬಳಿ ಬಂದ ಬಿಎಸ್‍ವೈ ಬಂದು ಕರೀರಿ ಆ ಮಾಧುಸ್ವಾಮಿನ ಎಂದು ಗರಂ ಆಗಿದ್ದಾರೆ. ಮಾತನಾಡಲು ಪ್ಲಾನ್ ಇರಲಿಲ್ಲ ಎಂಬುದು ಅವರ ಅಸಮಾಧಾನ ಹಾಗೂ ಸಿಟ್ಟಿಗೆ ಕಾರಣವಾಗಿದೆ. ಪ್ಲಾನ್ ಮಾಡಿಲ್ಲ, ಏನೂ ಇಲ್ಲ. ಒಬ್ಬೊಬ್ಬರೂ ಒಂದೊಂದು ರೀತಿ ಮಾತನಾಡಿದ್ರೆ ಹೇಗೆ. ಎಂದು ಬಿಎಸ್‍ವೈ ಸಿಡಿಮಿಡಿಗೊಂಡಿದ್ದಾರೆ.
Advertisement
Advertisement
ಕಲಾಪ ಮುಂದೂಡುತ್ತಿದ್ದಂತೆಯೇ ತನ್ನ ಶಾಸಕರನ್ನು ಎಲ್ಲರೂ ಬನ್ನಿ ಎಂದು ಹೇಳಿ ಅಲ್ಲೇ ಇದ್ದ ಕಚೇರಿಗೆ ಶಾಸಕರನ್ನು ಕರೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಆಪರೇಷನ್ ಆಡಿಯೋ ಸದನದಲ್ಲಿ ನಡೆದಿಲ್ಲ: ಬಿಜೆಪಿ ಶಾಸಕ ಮಾಧುಸ್ವಾಮಿ
Advertisement
ಮಾಧುಸ್ವಾಮಿ ಹೇಳಿದ್ದೇನು..?
ಆಡಿಯೋ ವಿಚಾರವನ್ನು ಅಷ್ಟೊಂದು ಗಂಭಿರವಾಗಿ ತೆಗೆದುಕೊಳ್ಳಬೇಡಿ. ಯಾಕಂದ್ರೆ ಇದು ಸದನದ ಹೊರಗಡೆ ನಡೆದ ಘಟನೆಯಾಗಿದೆ. ಹೊರಗಡೆ ಎಲ್ಲರ ಬಗ್ಗೆ ಮಾತನಾಡುತ್ತಾರೆ. ಅದರ ಆಡಿಯೋಗಳು ನನ್ನಲ್ಲಿದೆ. ನೀವು ಅವಕಾಶ ಕೊಟ್ಟರೇ ಈಗಲೇ ಬಹಿರಂಗಪಡಿಸುತ್ತೇನೆ. ಹೀಗಾಗಿ ಇಷ್ಟು ಸಣ್ಣ ವಿಚಾರವನ್ನು ದೊಡ್ಡದು ಮಾಡುವ ಅಗತ್ಯವಿಲ್ಲ ಎಂದು ಶಾಸಕ ಮಾಧುಸ್ವಾಮಿ ಹೇಳಿದ್ದರು.
Advertisement
ಒಟ್ಟಿನಲ್ಲಿ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪೀಕರ್ ರಮೇಶ್ ಕುಮಾರ್ ಅವರು ಎಸ್‍ಐಟಿ ತನಿಖೆಗೆ ಸೂಚನೆ ನೀಡಿದ್ದು, 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv