ಶಿವಮೊಗ್ಗ: ಸ್ವಕ್ಷೇತ್ರ ಮತ್ತು ಚುನಾವಣಾ ಕಣದಲ್ಲಿರುವ ಪುತ್ರ ಬಿ.ವೈ.ರಾಘವೇಂದ್ರರನ್ನು ಗೆಲ್ಲಿಸಲು ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೊಸ ಪ್ಲಾನ್ ಮಾಡಿದ್ದಾರೆ. ಬಿಜೆಪಿಯ ಭದ್ರಕೋಟೆಯಲ್ಲಿ ಜೆಡಿಎಸ್ ತನ್ನ ಪತಾಕೆಯನ್ನು ಹಾರಿಸಲು ಒಂದರ ನಂತರ ಒಂದು ರಣತಂತ್ರಗಳನ್ನು ಪ್ರಯೋಗಿಸುತ್ತಿದೆ. ಸರ್ಕಾರದ ಬಹುತೇಕ ಸಚಿವರು ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರ ಮತಯಾಚನೆಯಲ್ಲಿ ತೊಡಗಿದ್ದಾರೆ.
ಶಿವಮೊಗ್ಗದಲ್ಲಿ ಈಗಾಗಲೇ ನಾವು ಗೆಲುವು ಸಾಧಿಸಿದ್ದೇವೆ. ನಾನು 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಕಂಡಿದ್ದೇನೆ. ಬಿ.ವೈ.ರಾಘವೇಂದ್ರ ಸಹ 3 ಲಕ್ಷಕ್ಕೂ ಮತಗಳ ಅಂತರದಿಂದ ಗೆಲುವು ಕಾಣುತ್ತಾರೆ ಎಂದು ಯಡಿಯೂರಪ್ಪ ಬಳ್ಳಾರಿಯಲ್ಲಿ ಹೇಳಿದ್ದರು. ಮಗನ ಪರವಾಗಿ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗುವ ಯಡಿಯೂರಪ್ಪನವರು ಭದ್ರಾವತಿಯಲ್ಲಿ ಒಟ್ಟು 6 ಸಮುದಾಯಗಳ ಜೊತೆ ಸಭೆ ನಡೆಸಲಿದ್ದಾರೆ. ಇದೇ ಭದ್ರಾವತಿಯಲ್ಲಿ ಸಿಎಂ ಕುಮಾರಸ್ವಾಮಿ ಕೂಡ ಬಹಿರಂಗ ಸಭೆಯನ್ನು ಆಯೋಜಿಸಿದ್ದಾರೆ.
ಶಿವಮೊಗ್ಗದಲ್ಲಿ ಸಿಎಂ ನಡೆಸುತ್ತಿರುವ ಸತತ ಬಹಿರಂಗ ಸಭೆಗಳಿಗೆ ಯಡಿಯೂರಪ್ಪ ಏಕಕಾಲದಲ್ಲಿ ವಿವಿಧ ಸಮುದಾಯಗಳ ಸಭೆಯನ್ನು ಆಯೋಜನೆ ಮಾಡಿದ್ದಾರೆ. ಇಂದಿನ ಸಭೆಯ ಮೂಲಕ ಇಬ್ಬರು ನಾಯಕರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv