ಬೆಂಗಳೂರು: ರಾಜ್ಯದ 38ನೇ ಡಿಜಿಪಿ & ಐಜಿ ಆಗಿದ್ದ ಓಂ ಪ್ರಕಾಶ್ ಅವರ ಹತ್ಯೆಯಾಗಿದೆ. ನಿವೃತ್ತ ಐಪಿಎಸ್ ಅಧಿಕಾರಿಯನ್ನು ಪತ್ನಿಯೇ ಕೊಲೆ ಮಾಡಿರುವ ಘಟನೆ ನಡೆದಿದೆ.
10 ದಿನಗಳ ಹಿಂದೆ ಹೆಂಡತಿ ಪಲ್ಲಿವಿ ಜೊತೆ ನಿವೃತ್ತ ಐಪಿಎಸ್ ಅಧಿಕಾರಿಗೆ ಜಗಳವಾಗಿತ್ತು. ಕೌಟುಂಬಿಕ ಕಲಹ ಹಿನ್ನೆಲೆ ಹತ್ಯೆಯಾಗಿರುವ ಶಂಕೆ ವ್ಯಕ್ತವಾಗಿದೆ. ಚಾಕುವಿನಿಂದ ಇರಿದು ಕೊಲೆ ಮಾಡಿರಬಹುದು ಎನ್ನಲಾಗಿದೆ.
ವಾರದ ಹಿಂದೆ ಐಪಿಎಸ್ ಅಧಿಕಾರಿಗಳಿಗೆ ಪಲ್ಲವಿ ಅವರು ಮೆಸೇಜ್ ಮಾಡಿದ್ದರು. ನನಗೆ ಮತ್ತು ಮಗಳಿಗೆ ಸಾಕಷ್ಟು ಹಿಂಸೆ ನೀಡುತ್ತಿದ್ದಾರೆ ಎಂದು ಪತಿ ವಿರುದ್ಧ ದೂರಿದ್ದರು. ಮಾನಸಿಕ, ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಓಂ ಪ್ರಕಾಶ್ ವಿರುದ್ಧ ಸುಮೋಟೋ ಕೇಸ್ ದಾಖಲಿಸುವಂತೆ ಮನವಿ ಮಾಡಿಕೊಂಡಿದ್ದರು.
ಗನ್ ಹಿಡಿದುಕೊಂಡು ಮನೆಯಲ್ಲಿ ಓಡಾಡುತ್ತಿದ್ದಾರೆ. ಯಾವ ಕ್ಷಣದಲ್ಲಿ ಬೇಕಾದ್ರು ಸಾಯಿಸಬಹುದು. ಹೀಗಾಗಿ, ಸುಮೋಟೊ ದಾಖಲಿಸಿ ಎಂದು ಪಲ್ಲವಿ ಅವರು ಮನವಿ ಮಾಡಿದ್ದರು.
ಓಂ ಪ್ರಕಾಶ್ ಅವರ ಹತ್ಯೆ ಬೆನ್ನಲ್ಲೇ ಪತ್ನಿ ಪಲ್ಲವಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.