-ಪ್ರಕರಣದ ಹೊಣೆಯನ್ನು ಸಿಎಂ ಸಿದ್ದರಾಮಯ್ಯ ಹೊರಬೇಕು
ಬೆಂಗಳೂರು: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದಲ್ಲಿ (Valmiki Corporation Scam) ದೆಹಲಿಯ ಕಾಂಗ್ರೆಸ್ ಹೈಕಮಾಂಡ್ (Congress High Command) ಪಾತ್ರವಿದೆ. ಇಡೀ ಪ್ರಕರಣದ ಹೊಣೆಯನ್ನು ಸಿಎಂ ಸಿದ್ದರಾಮಯ್ಯ (Siddaramaiah) ಹೊರಬೇಕು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Advertisement
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಗರಣ ಕೇವಲ ನಾಗೇಂದ್ರ ಹಂತದಲ್ಲಿ ನಡೆದಿಲ್ಲ. ಈ ಹಣ ತೆಲಂಗಾಣಕ್ಕೆ ಹೋಗಿದೆ. 14 ಅಕೌಂಟ್‍ಗಳ ಮೂಲಕ ಹಣ ವರ್ಗಾವಣೆಯಾಗಿದೆ. ಎಸ್‍ಟಿ ಸಮುದಾಯದ ಹಣವನ್ನು ಈ ರೀತಿ ಬಳಸಿದ್ದಾರೆ. ಸರ್ಕಾರದ ಎಲ್ಲಾ ಬೋರ್ಡ್‍ನ ತನಿಖೆ ನಡೆದ್ರೆ ಇನ್ನೂ ಏನೇನು ಹಗರಣಗಳು ಹೊರ ಬರುತ್ತೋ ಗೊತ್ತಿಲ್ಲ ಎಂದು ಎಲ್ಲಾ ನಿಗಮಗಳಲ್ಲೂ ಅಕ್ರಮ ನಡೆದಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಮೀಕ್ಷೆಗಳು ಯಾವತ್ತಿಗೂ ತಪ್ಪಾಗಲ್ಲ, ಮತ್ತೆ ಮೋದಿಯೇ ಪ್ರಧಾನಿ – ನಟ ಚೇತನ್
Advertisement
ಈ ಪ್ರಕರಣದಲ್ಲಿ ನಾಗೇಂದ್ರ ಹೊಣೆ ಹೊರಬೇಕಾಗಿರುವುದಲ್ಲ, ಸಿಎಂ ಹೊಣೆ ಹೊರಬೇಕು. ಬೋರ್ಡ್‍ನಲ್ಲಿ ಹಣ ವರ್ಗಾವಣೆ ಆಗಬೇಕಾದರೆ ಸಭೆ ನಡೆಯಬೇಕು. ಆದರೆ ಇಲ್ಲಿ ಸಭೆ ನಡೆದಿಲ್ಲ. ಕರ್ನಾಟಕ ತೆರಿಗೆ ಹಣ ತೆಲಂಗಾಣದಲ್ಲಿ ಉಪಯೋಗ ಆಗಿದೆ. ಯಾವ ನೈತಿಕತೆ ಇದೇ ಸಿದ್ದರಾಮಯ್ಯ ಅವರೇ? ಈ ಸರ್ಕಾರಕ್ಕೆ ನಾಚಿಕೆ ಆಗಿಬೇಕು. ಮಾನ ಮರ್ಯಾದೆ ಇಲ್ಲ. ಹೆಗ್ಗಣ ತಿನ್ನುವ ಕೆಲಸ ಮಾಡಿಕೊಂಡು ಇನ್ನೊಬ್ಬರ ತಲೆಗೆ ಕಟ್ಟಲು ಹೋಗ್ತಿರಾ? ಎಂದು ಅವರು ತೀವ್ರವಾಗಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Advertisement
Advertisement
ಬೆಳಗ್ಗೆ ಹಣ ಅಕೌಂಟ್‍ಗೆ ಹೋಯ್ತು ಮಧ್ಯಾಹ್ನ ಡ್ರಾ ಮಾಡ್ತಾರೆ, ಯಾರ ಅಪ್ಪನ ಹಣ ಅದು? ಈ ಹಣ ವರ್ಗಾವಣೆ ದೆಹಲಿ ಹೈಕಮಾಂಡ್ ನಿರ್ದೇಶನದಂತೆ ನಡೆದಿದೆ. ದೆಹಲಿ ಕಾಂಗ್ರೆಸ್ ಹೈಕಮಾಂಡ್ ಇದರ ಸೂತ್ರಧಾರಿ. ಡೆತ್ ನೋಟ್‍ನಲ್ಲಿ ಇಲಾಖೆ ಸಚಿವರು ಅಂತ ಹೇಳಿಲ್ಲ. ಇಲ್ಲಿ ಸರ್ಕಾರ ಜವಾಬ್ದಾರಿ ತೆಗೆದುಕೊಳ್ಳಬೇಕು, ಒಬ್ಬ ಸಚಿವರ ಹೊಣೆ ಅಲ್ಲ. ಸಿಎಂ ಅವರೇ ನೇರವಾಗಿ ಹೊಣೆ ಹೊರಬೇಕು. ಇಲ್ಲಿ ಸಚಿವರ ತಲೆದಂಡ ಆಗಬೇಕಾಗಿರುವುದಲ್ಲ. ಸರ್ಕಾರದ ತಲೆದಂಡ ಆಗಬೇಕು. ತೆಲಂಗಾಣ ಚುನಾವಣೆ ಜವಾಬ್ದಾರಿ ಯಾರು ಯಾರು ವಹಿಸಿಕೊಂಡಿದ್ದರು? ಯಾರು ಯಾರು ಎಷ್ಟು ತೆಗೆದುಕೊಂಡು ಹೋಗಿದ್ರಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಅವರು ಕಿಡಿಕಾರಿದ್ದಾರೆ.
ಯೂನಿಯನ್ ಬ್ಯಾಂಕ್ ಈ ಪ್ರಕರಣದಲ್ಲಿ ಭಾಗಿಯಾಗಿದೆ. ಅವರು ಕೂಡಾ ಸಿಬಿಐ ತನಿಖೆಗೆ ಪತ್ರ ಬರೆದಿದ್ದಾರೆ. ಹೀಗಾಗಿ ಈ ಕೇಸ್ ಸಿಬಿಐ ವ್ಯಾಪ್ತಿಗೆ ಬರುತ್ತದೆ. ಇದನ್ನ ಮುಚ್ಚಿ ಹಾಕಿಕೊಳ್ಳಬೇಕು ಎಂದು ತರಾತುರಿಯಲ್ಲಿ ಎಸ್‍ಐಟಿ ರಚನೆ ಮಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರನ್ ಅವರ ಪೆನ್‍ಡ್ರೈವ್ ವಶಪಡಿಸಿಕೊಳ್ಳಲಾಗಿದೆ. ಅದು ಏನ್ ಆಯ್ತು? ಎಂದು ಪ್ರಶ್ನಿಸಿದ ಅವರು ಸರ್ಕಾರ ಹಾಗೂ ಎಸ್‍ಐಟಿ ತನಿಖೆ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕುರಾನ್ ಅಪವಿತ್ರದ ಆರೋಪ- ಪಾಕ್‌ನಲ್ಲಿ ಕ್ರಿಶ್ಚಿಯನ್ ವೃದ್ಧನ ಮೇಲೆ ಮಾರಣಾಂತಿಕ ಹಲ್ಲೆ, ಸಾವು