ಮತಾಂತರ ನಿಷೇಧ ಕಾಯ್ದೆಯನ್ನು ಕಿತ್ತೆಸೆಯುತ್ತೇವೆ: ಸಿದ್ದರಾಮಯ್ಯ

Public TV
2 Min Read
SIDDARAMAIAH 4

– ಲವ್ ಮಾಡಿ ಮದ್ವೆ ಆಗೋದು ಅವರ ಹಕ್ಕು
– ಕಾಂಗ್ರೆಸ್ ಪಾದಯಾತ್ರೆಗೆ ಯಾವುದೇ ಸಮಸ್ಯೆಯಾಗಲ್ಲ

ಬೆಂಗಳೂರು: ಮತಾಂತರ ನಿಷೇಧ ಕಾಯ್ದೆಯನ್ನು ಕಿತ್ತೆಸೆಯುತ್ತೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಒಂದೇ ವಾರದಲ್ಲಿ ಮತಾಂತರ ವಿಧೇಯಕ ಹಿಂಪಡೆಯುತ್ತೇವೆ. ಮೊದಲ ಅಧಿವೇಶನದಲ್ಲೇ ಮಸೂದೆ ಹಿಂಪಡೆದು ಎಸೆಯುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

Siddaramaiah 1

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧೇಯಕದ ಡ್ರಾಫ್ಟ್ ಗೆ ನಾನು ಸಹಿ ಮಾಡಿದ್ದನ್ನೇ ಬಿಜೆಪಿ ಅಜೆಂಡಾ ಮಾಡಿಕೊಂಡಿದೆ. ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅಂದ್ರೆ 2009 ರಲ್ಲಿ ಇದು ಹುಟ್ಟಿದ್ದು. ಜಯಚಂದ್ರ ಸಹಿ ಹಾಕಿ, ನಾನು ಕ್ಯಾಬಿನೆಟ್ ಮುಂದೆ ತನ್ನಿ ಅಂದಿದ್ದು ನಿಜ. ಆದರೆ ಬಳಿಕ ನಾನು ಆಗಿನ ಸಮಾಜಕಲ್ಯಾಣ ಸಚಿವ ಆಂಜನೇಯಗೆ ಹೇಳಿ ಅದನ್ನ ಸ್ಟಾಪ್ ಮಾಡುವಂತೆ ಹೇಳಿದ್ದೆ. ನಾನು ಹೇಳಿದ ತಕ್ಷಣ ಆಂಜನೇಯ ಇದು ಅಗತ್ಯವಿಲ್ಲ ಎಂದು ಫೈಲ್ ನಲ್ಲಿ ಬರೆದು ಕ್ಯಾಬಿನೆಟ್ ಗೆ ತಂದಿಲ್ಲ. ಅದು ಅಲ್ಲಿಗೆ ಸತ್ತುಹೋಗಿತ್ತು.. ಬಿಜೆಪಿಯವರು ವಾಸ್ತವ ಹೇಳ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಡಿಕೆಶಿ ಬಗ್ಗೆ ಅವಹೇಳನಕಾರಿ ಪೋಸ್ಟ್ – ಪ್ರಶಾಂತ್ ಸಂಬರ್ಗಿ ವಿರುದ್ಧ FIR ದಾಖಲು

marriage

ಒಂದು ಹುಡುಗ ಹುಡುಗಿ ಮದುವೆ ಆಗುವುದು ಮತಾಂತರನಾ..? ಲವ್ ಮಾಡಿ ಮದುವೆ ಆಗೋದ್ ಅವರ ಹಕ್ಕು. ಇವರು ತಂದಿರೋದ್ ಸಂವಿಧಾನದ ಬಾಹಿರ. ಇವರ ಉದ್ದೇಶ ವೋಟ್ ಪಡೆಯೋದ್ ಅಷ್ಟೆ. ಭಾವನಾತ್ಮಾಕ ವಿಷಯಗಳನ್ನ ಇಟ್ಕೊಂಡು ಜನರ ದಾರಿ ತಪ್ಪಿಸುತ್ತಾರೆ. ಜನರನ್ನ ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ನಿರುದ್ಯೋಗ, ನೆರೆ, ಪರಿಹಾರ, ಮಹಿಳೆಯರ ಸಮಸ್ಯೆ ಇವೆಲ್ಲಾ ಬಿಟ್ಟು ಡೈವರ್ಟ್ ಮಾಡ್ತಾ ಇದ್ದಾರೆ. ಈ ಕಾಯ್ದೆ ಹಿಂದೆ ದುರುದ್ದೇಶ ಇದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಹಿಂದೆ ಬ್ರಿಟಿಷರು ಮಾಡುತ್ತಿದ್ದ ಕೆಲಸವನ್ನು ಈಗ ಕಾಂಗ್ರೆಸ್ ಮಾಡ್ತಿದೆ: ಧನಂಜಯ್ ಜಾದವ್

night curfew new 1

ನೈಟ್ ಕರ್ಫ್ಯೂ ಜಾರಿ ಮಾಡಿದ್ದರಿಂದ ಕಾಂಗ್ರೆಸ್ ಪಾದಯಾತ್ರೆಗೆ ಯಾವುದೇ ಸಮಸ್ಯೆಯಾಗಲ್ಲ. ಮೇಕೆದಾಟು ಯೋಜನೆಗೆ ಆಗ್ರಹಿಸಿ ನಾವು ಮಾಡುವ ಪಾದತಾತ್ರೆ ತಡೆಯಲು ಸಾಧ್ಯವಿಲ್ಲ. ಓಮಿಕ್ರಾನ್ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಮುಂಜಾಗೃತ ಕ್ರಮಗಳನ್ನ ಕೈಗೊಂಡೆ ನಾವು ಪಾದಯಾತ್ರೆ ನಡೆಸ್ತೇವೆ. ಕೊರೊನಾ ಇದ್ದಾಗಲೇ ಬಿಜೆಪಿಯವರು ಜನಾಶೀರ್ವಾದ ಯಾತ್ರೆ ಮಾಡಲಿಲ್ವಾ..? ನಿನ್ನೆ ಅಮಿತ್ ಶಾ ರ್ಯಾಲಿ ಮಾಡಿದ್ದಾರೆ. ಅಲ್ಲಿ ಏಲ್ರೂ ಮಾಸ್ಕ್ ಹಾಕಿಕೊಂಡಿದ್ದಾರಾ..? ಇವರು ರಾಜಕೀಯ ಕಾರ್ಯಕ್ರಮ ಮಾಡಬಹುದು, ನಾವು ಮಾಡಬಾರದಾ..? ಅವರಿಗೊಂದು ಕಾನೂನು, ವಿಪಕ್ಷಗಳಿಗೊಂದು ಕಾನೂನು ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: ಸರ್ಕಾರದ ನೈಟ್ ಕರ್ಫ್ಯೂ ಆದೇಶಕ್ಕೆ ಸಿ.ಟಿ.ರವಿ ಅಸಮಾಧಾನ

BSY BOMMAI

ಯಡಿಯೂರಪ್ಪ ಬದಲಾವಣೆ ಬಗ್ಗೆ ಮೊದಲೇ ಮುನ್ಸೂಚನೆ ನಿಡಿದ್ದ ಸಿದ್ದರಾಮಯ್ಯ ಇದೇ ವೇಳೆ ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬೊಮ್ಮಾಯಿ ಅವರ ಬದಲಾವಣೆ ನನಗೆ ಗೊತ್ತಿಲ್ಲ. ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಸರ್ಕಾರ ಇದ್ರೆ ತಾನೇ ಅಧಿಕಾರಿಗಳು ಮಾತು ಕೇಳೊದು..? ಅಧಿಕಾರಿಗಳಿಗೆ ಈ ಸರ್ಕಾರ ತೊಲಗಿದರೆ ಸಾಕಾಗಿದೆ. ಅಧಿಕಾರಿಗಳಿಗೆ ದುಡ್ಡು ಕೊಟ್ಟು ಕೊಟ್ಟು ಸಾಕಾಗಿದೆ. ಸರ್ಕಾರದಲ್ಲಿ ಭ್ರಷ್ಟಾಚಾರ, ಲಂಚ ತಾಂಡವವಾಡುತ್ತಿದೆ. ಈ ಸರ್ಕಾರ ಯಾವಾಗ ತೊಲಗುತ್ತೋ ಅಂತಾ ಅಧಿಕಾರಿಗಳು ಕಾಯ್ತಿದ್ದಾರೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *