ನವದೆಹಲಿ: ಮಾಜಿ ಸಿಎಂ ಎಸ್.ಎಂ.ಕೃಷ್ಣ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬುಧವಾರ ಸಂಜೆ ದೆಹಲಿಯ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನೇತೃತ್ವದಲ್ಲಿ ಎಸ್‍ಎಂಕೆ ಬಿಜೆಪಿ ಮನೆಯನ್ನು ಪ್ರವೇಶಿಸಿದ್ದಾರೆ.
ನಾನು ಹಲವು ಜವಾಬ್ದಾರಿ ನಿಭಾಯಿಸಿದ್ದು, ನನ್ನ ರಾಜಕೀಯ ಜೀವನದಲ್ಲಿ ಇದೊಂದು ಬಹಳ ಮುಖ್ಯವಾದ ಹೆಜ್ಜೆ. ಅಟಲ್ ಬಿಹಾರಿ ವಾಜಪೇಯಿ ಉತ್ತಮ ಪ್ರಧಾನಿಯಾಗಿದ್ದು ಹಲವು ಗಣ್ಯರ ಸಮ್ಮುಖದಲ್ಲಿ ನಾನು ಬಿಜೆಪಿ ಸೇರಿದ್ದೇನೆ. ಪ್ರಧಾನಿ ಮೋದಿ ಅವರನ್ನು ನಾನು ಬೆಂಬಲಿಸಿದ್ದೇನೆ ಎಂದು ಎಸ್‍ಎಂ ಕೃಷ್ಣ ಹೇಳಿದರು.
Advertisement
ಕೇಂದ್ರ ಸಚಿವರಾದ ಅನಂತ್ ಕುಮಾರ್, ಸದಾನಂದ ಗೌಡ, ರಾಜ್ಯ ನಾಯಕರಾದ ಆರ್ ಅಶೋಕ್, ಸಿಟಿ ರವಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Advertisement
ಉಪಚುನಾಚಣೆ ಪ್ರಚಾರದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಎಸ್‍ಎಂಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸ್ತಿಲ್ಲ. ಆದ್ರೆ ಎಸ್‍ಎಂಕೆ ದೆಹಲಿಯಿಂದ ವಾಪಸ್ ಆದ ಬಳಿಕ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಇನ್ನೊಂದು ಕಾರ್ಯಕ್ರಮವನ್ನು ಏರ್ಪಡಿಸಿ ಪಕ್ಷದ ಕಚೇರಿಗೆ ಬರಮಾಡಿಕೊಳ್ಳಲಿದ್ದಾರೆ. ಅಲ್ಲದೆ ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಗಳಲ್ಲೂ ಎಸ್‍ಎಂಕೆ ಪ್ರಚಾರ ನಡೆಸಲಿದ್ದಾರೆ.
Advertisement
ಕಳೆದ ವಾರವೇ ಎಸ್‍ಎಂಕೆ ಬಿಜೆಪಿ ಸೇರ್ಪಡೆಯಾಗಬೇಕಿತ್ತು. ಆದ್ರೆ ಸಹೋದರಿಯ ಹಠಾತ್ ನಿಧನದಿಂದ ಸೇರ್ಪಡೆಯನ್ನ ಮುಂದೂಡಲಾಗಿತ್ತು. 46 ವರ್ಷಗಳ ಕಾಲ ಕಾಂಗ್ರೆಸ್‍ನಲ್ಲಿದ್ದ 84 ವರ್ಷದ ಎಸ್‍ಎಂಕೆ ಜನವರಿಯಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.
Advertisement
ಕರ್ನಾಟಕ ಕಂಡ ಅತ್ಯಂತ ಸುಸಂಸ್ಕೃತ ರಾಜಕಾರಣಿ ಶ್ರೀ ಎಸ.ಎಂ. ಕೃಷ್ಣ ರವರು ಇಂದು ಬಿ ಜೆ ಪಿ ಸೇರ್ಪಡೆಯಾಗುತ್ತಿರುವುದು ಸಂತಸದ ವಿಷಯ. pic.twitter.com/WAVVdCz1Oh
— Sadananda Gowda (@DVSBJP) March 22, 2017
"Heartily welcome to Sri S M Krishna to BJP."It is a delightful moment for us to welcome the most respected veteran leader of our state. pic.twitter.com/oD22xoKLAY
— Sadananda Gowda (@DVSBJP) March 22, 2017
Watch LIVE Former Foreign Minister SM Krishna joins BJP https://t.co/AI1pvJys8i
— ANI (@ANI_news) March 22, 2017