ಹಾಸನ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಸ್ತ ಲಾಘವ ಮಾಡಲು ಕಾರಿನ ಹಿಂದೆ ಓಡಿ ಹೋಗಿ ಅಭಿಮಾನಿಯೊಬ್ಬರು ಬಿದ್ದ ಪ್ರಸಂಗ ನಡೆದಿದೆ.
Advertisement
ಹೌದು. ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಈ ಘಟನೆ ನಡೆದಿದೆ. ಮಾಜಿ ಶಾಸಕ ಸಿ.ಎಸ್ ಪುಟ್ಟೇಗೌಡರ ಮನೆಯಲ್ಲಿ ಊಟ ಮುಗಿಸಿ ಸಿದ್ದರಾಮಯ್ಯ ಸಭೆಗೆ ಹೊರಟರು. ಈ ವೇಳೆ ಅಭಿಮಾನಿಯೊಬ್ಬರು ಅವರ ಕಾರಿನ ಹಿಂದೆ ಓಡಿ ಹೋಗಿದ್ದಾರೆ. ಆಗ ಕಾಲು ಜಾರಿ ಕಾರಿನ ಬಳಿ ಅಭಿಮಾನಿ ಬಿದ್ದಿದ್ದಾರೆ. ಇದನ್ನೂ ಓದಿ: ಡಿಕೆಶಿ ನೀವು ಅಷ್ಟೊಂದು ಅಸಹಾಯಕರೇ?- ಕೆಪಿಸಿಸಿ ಅಧ್ಯಕ್ಷರ ಕಾಲೆಳೆದ ಬಿಜೆಪಿ
Advertisement
Advertisement
ಸ್ಥಳದಲ್ಲಿದ್ದವರು ಕೂಡಲೇ ಅಭಿಮಾನಿಯನ್ನು ರಕ್ಷಣೆ ಮಾಡಿ ಭಾರೀ ಅನಾಹುತದಿಂದ ಪಾರು ಮಾಡಿದ್ದಾರೆ. ಒಟ್ಟಿನಲ್ಲಿ ಸ್ಥಳದಲ್ಲಿದ್ದವರ ಸಮಯಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ಸಿದ್ದರಾಮಯ್ಯ ಅಭಿಮಾನಿ ಪಾರಾಗಿದ್ದಾರೆ.