ಕೋಲಾರ: ರಾಜ್ಯದಲ್ಲಿ 25 ಸ್ಥಾನಗಳ ಪೈಕಿ ಜೆಡಿಎಸ್ 7 ಕಡೆ ಮಾತ್ರ ಅಭ್ಯರ್ಥಿಗಳನ್ನ ಹಾಕಿದೆ ಅಂದ್ರೆ ಉಳಿದ 18 ಕಡೆ ಅಭ್ಯರ್ಥಿಗಳೇ ಇಲ್ಲ ಅಂದ್ರೆ ಏನು ಅರ್ಥ. ಹೊಂದಾಣಿಕೆ ಅಲ್ಲದೆ ಇನ್ನೇನು ಮಾಡಿಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ರು.
ಕೋಲಾರ ತಾಲೂಕಿನ ನರಸಾಪುರ ಬಳಿ ಮಳೆಯಿಂದ ಹಾನಿಯಾದ ಪ್ರದೇಶದಲ್ಲಿ ಬೆಳೆ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈಗಾಗಲೇ ಯಡಿಯೂರಪ್ಪನವರು ಬೆಂಬಲ ಕೇಳಿದ್ದೇವೆ ಎಂದಿದ್ದಾರೆ. ಅಂದರೆ ಚುನಾವಣೆಗೂ ಮೊದಲೇ ಮಾತುಕತೆ ನಡೆದಿದೆ ತಾನೆ ಎಂದ್ರು. ಬೆಂಕಿ ಇಲ್ಲದೆ ಹೊಗೆ ಆಡುತ್ತಾ ಯಡಿಯೂರಪ್ಪ ಸುಮ್ನೆ ಹೇಳ್ತಾರಾ ಎಂದು ಮಾಧ್ಯಮದವರನ್ನೇ ಪ್ರಶ್ನೆ ಮಾಡಿದ್ರು. ಇದನ್ನೂ ಓದಿ: ರೈತರಿಗೆ ಎಲ್ಲ ರೀತಿಯ ನೆರವು ನೀಡಲು ಸರ್ಕಾರ ಬದ್ಧ: ಆರ್. ಅಶೋಕ್
Advertisement
Advertisement
ಇದೇ ವೇಳೆ ಪರಿಷತ್ ಚುನಾವಣೆಯಲ್ಲಿ ಎಷ್ಟು ಸ್ಥಾನ ಗೆಲ್ತೀರಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ನಾನೇನ್ ಜ್ಯೋತಿಷ್ಯ ಹೇಳಲಾ ಎಂದು ಗುಡುಗಿದ್ರು. ಬಳಿಕ ಕಳೆದ ಬಾರಿ 14 ಸ್ಥಾನ ಗೆದ್ದಿದ್ದೆವು. ಈ ಬಾರಿ 15 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದ್ರು. ಅಲ್ಲದೆ ಹಾಸನದ ಎ.ಮಂಜು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರ ಮಗ ಬಿಜೆಪಿ ಸೇರಿಲ್ಲ ಅಂತಾ ಹೇಳಿದ್ದಾನೆ. ಮಂತರ್ ಗೌಡ ಅವರ ತಾಯಿ ಕೊಡಗಿನವರು ಹಾಗಾಗಿ ನಾನು ಅವರನ್ನು ಮಾತನಾಡಿಲ್ಲ, ಇಲ್ಲಿ ಎ ಮಂಜು ಪ್ರಶ್ನೆ ಅಲ್ಲ, ಮಂತರ್ ಗೌಡ ಮುಖ್ಯ ಎಂದು ಹೇಳಿದ್ರು.