ಬೆಂಗಳೂರು: ಜೆಡಿಎಸ್ ಜೊತೆ ಮೈತ್ರಿ ಅನಿವಾರ್ಯತೆಯಲ್ಲಿ ಕಾಂಗ್ರೆಸ್ ಇದ್ದು, ಆದರೆ ಕಲಬುರಗಿಯಲ್ಲಿ ಮೈತ್ರಿಗೆ ಕಾಂಗ್ರೆಸ್ಸಿನಲ್ಲೇ ಅಪಸ್ವರ ಎದ್ದಿದೆ. ಮೈತ್ರಿ ವಿಚಾರವಾಗಿ ನಾಯಕರಿಬ್ಬರ ನಡುವೆ ಅಸಮಾಧಾನ ಭುಗಿಲೆದ್ದಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್ ಸಹವಾಸಕ್ಕೆ ಒಪ್ಪಿಗೆ ಸೂಚಿಸುತ್ತಿಲ್ಲ. ಬಹಿರಂಗ ಮೈತ್ರಿ ಬೇಡ, ಒಳ ಒಪ್ಪಂದ ಇರಲಿ ಎನ್ನುವ ಮೂಲಕ ಸಿದ್ದರಾಮಯ್ಯ ಅವರು ಬಹಿರಂಗ ಮೈತ್ರಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರು ಜೆಡಿಎಸ್ ಜೊತೆ ಮೈತ್ರಿಗೆ ಒಲವು ತೋರಿದ್ದಾರೆ. ಇದನ್ನೂ ಓದಿ: ಜಿ.ಟಿ.ದೇವೇಗೌಡ ಪಕ್ಷಕ್ಕೆ ಡ್ಯಾಮೇಜ್ ಮಾಡಿಲ್ಲ: ಎಚ್‍ಡಿಡಿ
ಕಲಬುರಗಿ ಒಂದು ಪಾಲಿಕೆಯಲ್ಲಿ ಮೈತ್ರಿ ಮಾಡಿಕೊಂಡರೆ ಅದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಎಂಬ ಸಂದೇಶ ರವಾನೆ ಆಗಿತ್ತದೆ. ಈ ಸಂದೇಶ ಕಾಂಗ್ರೆಸ್ಸಿಗೆ ಯಾವತ್ತೂ ಲಾಭವಲ್ಲ. ಬದಲಿಗೆ ಜೆಡಿಎಸ್-ಕಾಂಗ್ರೆಸ್ ಜೊತೆಗೆ ಮೈತ್ರಿ ಎಂಬ ಅವಕಾಶವನ್ನೇ ಬಳಸಿಕೊಂಡು ಬೇರೆ ಕಡೆಯೂ ಲಾಭಕ್ಕೆ ಪ್ರಯತ್ನಿಸುತ್ತದೆ. ಆದ್ದರಿಂದ ಬಹಿರಂಗ ಮೈತ್ರಿ ಬೇಡವೇ ಬೇಡ, ಜೆಡಿಎಸ್ ಜೊತೆ ಒಳ ಒಪ್ಪಂದ ಬೇಕಾದರೆ ಮಾಡಿಕೊಳ್ಳಲಿ ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ.
ಇತ್ತ ಖರ್ಗೆ, ಕಲಬುರಗಿಯಲ್ಲಿ ಜೆಡಿಎಸ್ ಜೊತೆ ಬಹಿರಂಗ ಮೈತ್ರಿ ಆದರೆ ಅಧಿಕಾರ ಸಿಗುತ್ತೆ ಆಗೋಣ ಎಂದು ಪಟ್ಟು ಹಿಡಿಸಿದ್ದಾರೆ. ಆದರೆ ಮತ್ತೆ ಮೈತ್ರಿ ಮಾತು ಬೇಡ ಅದರಿಂದ ಪಕ್ಷಕ್ಕೆ ಹಿನ್ನಡೆ ಒಳ ಒಪ್ಪಂದ ಏನು ಬೇಕಾದರು ಮಾಡಿಕೊಳ್ಳಲಿ ಎಂದು ಪಟ್ಟು ಹಿಡಿದಿರುವ ಸಿದ್ದರಾಮಯ್ಯ, ಹಠಕ್ಕೆ ಬಿದ್ದಿದ್ದಾರೆ. ಒಂದು ಪಾಲಿಕೆಗಾಗಿ ಮೈತ್ರಿ ಧರ್ಮ ಪಾಲನೆ ಎಂಬುದು ಯಾವುದೂ ಬೇಡವೆ ಬೇಡ. ಸ್ಥಳೀಯವಾಗಿ ಏನಾದರು ಒಳ ಒಪ್ಪಂದ ಮಾಡಿಕೊಳ್ಳಲಿ ಎಂದು ಸಿದ್ದರಾಮಯ್ಯ ಪಟ್ಟು ಬಿಗಿಗೊಳಿಸಿ ಕೂತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಕಲಬುರಗಿ ಪಾಲಿಕೆ ಮೈತ್ರಿ ವಿಚಾರವಾಗಿ ಖರ್ಗೆ ನನಗೆ ಕಾಲ್ ಮಾಡಿದ್ರು: ಎಚ್‍ಡಿಡಿ
ಒಟ್ಟಿನಲ್ಲಿ ಇದೀಗ ಮಲ್ಲಿಕಾರ್ಜುನ ಖರ್ಗೆಯವರ ಮೈತ್ರಿ ಧರ್ಮ ಪಾಲನೆ ಪ್ರಯತ್ನ ಗೆಲ್ಲುತ್ತಾ….? ಸಿದ್ದರಯ್ಯ ಒಳ ಒಪ್ಪಂದ ಮರ್ಮ ಗೆಲ್ಲುತ್ತಾ ಅನ್ನೋದೇ ಸದ್ಯದ ಕುತೂಹಲವಾಗಿದೆ.