ಬೆಂಗಳೂರು: ಕಲಬುರಗಿಯಲ್ಲಿ ಮೈತ್ರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದುತ್ತಿದ್ದು, ಜಾತ್ಯತೀತ ಸಿದ್ಧಾಂತಕ್ಕೆ ಪೆಟ್ಟು ಬೀಳುವ ಲೆಕ್ಕಾಚಾರವಿದೆ.
Advertisement
ಒಂದು ಮಹಾನಗರ ಪಾಲಿಕೆ ಅಧಿಕಾರಕ್ಕಾಗಿ ಜೆಡಿಎಸ್ ಜೊತೆ ಕೈಕೋಡಿಸದೆ ಸುಮ್ಮನಿರುವುದು ಒಳಿತು. ಆಗ ಜೆಡಿಎಸ್ ಸಹಜವಾಗಿಯೆ ಬಿಜೆಪಿ ಜೊತೆ ಕೈಜೋಡಿಸಿ ಅಧಿಕಾರ ಹಿಡಿಯಲು ಮುಂದಾಗುತ್ತೆ. ಮೊದಲೇ ಜೆಡಿಎಸ್ ಬಗ್ಗೆ ರಾಜ್ಯದ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸಾಕಷ್ಟು ಅನುಮಾನಗಳಿವೆ. ಅದರಲ್ಲೂ ಬಿಜೆಪಿಯ ಬಿ ಟೀಮ್ ನಂತೆ ವರ್ತಿಸಿ ಈಗಾಗಲೇ ಅಲ್ಪಸಂಖ್ಯಾತರ ವಿಶ್ವಾಸ ಕಳೆದುಕೊಂಡಿದೆ. ಈಗಲೂ ಮತ್ತೊಮ್ಮೆ ಬಿಜೆಪಿ ಜೊತೆ ಹೋಗಲಿ ಅಧಿಕಾರ ನಡೆಸಲಿ. ಆಗ ಸಹಜವಾಗಿಯೆ ಮುಸ್ಲಿಂ ಮತಗಳು ಜೆಡಿಎಸ್ ನಿಂದ ಮತ್ತಷ್ಟು ದೂರವಾಗುತ್ತೆ. ಹೀಗೆ ಕೈ ಪಾಳಯಕ್ಕೆ ಅಲ್ಪ ಸಂಖ್ಯಾತ ಮತ ಗುಡ್ಡೆ ಹಾಕುವ ತಂತ್ರ ಸಿದ್ದರಾಮಯ್ಯನವರದು ಎನ್ನಲಾಗುತ್ತಿದೆ.
Advertisement
Advertisement
ಆದ್ದರಿಂದ ಕಲಬುರಗಿ ಪಾಲಿಕೆ ವಿಚಾರದಲ್ಲಿ ಕಾಂಗ್ರೆಸ್ ಮೌನವಾಗಿರವುದು ಒಳಿತು. ಬಿಜೆಪಿ ಜೆಡಿಎಸ್ ಮೈತ್ರಿಯಾದರೆ ಆಗಲಿ ಜೆಡಿಎಸ್ ಪಾಲಿನ ಅಲ್ಪ ಸಂಖ್ಯಾತ ವೋಟ್ ಬ್ಯಾಂಕ್ ಇದರಿಂದ ಛಿದ್ರವಾಗುತ್ತೆ. ಕಾಂಗ್ರೆಸ್ ಪರವಾದ ಅಲ್ಪಸಂಖ್ಯಾತರ ಒಲವು ಇನ್ನಷ್ಟು ಹೆಚ್ಚುತ್ತೆ ಅನ್ನೋದು ಸಿದ್ದರಾಮಯ್ಯ ಲೆಕ್ಕಾಚಾರ ಎನ್ನಲಾಗುತ್ತಿದೆ. ಇದನ್ನೂ ಓದಿ: ಹೆಚ್‍ಡಿಕೆಗೆ ಕಲಬುರಗಿ ಮೈತ್ರಿ ಪವರ್ – ಮೇಯರ್ ಪಟ್ಟದ ಬೇಡಿಕೆ ಅಸ್ತ್ರ ಏಕೆ?