ಬೆಂಗಳೂರು: ಕಾಂಗ್ರೆಸ್ಸಿಗೆ ದ್ರೋಹ ಮಾಡಿ ಬಿಜೆಪಿ ಸೇರಿ ಮಂತ್ರಿಯಾಗಿರುವ ಕೆ. ಸುಧಾಕರ್ ಅಧಿಕಾರದ ಮದದಿಂದ ವರ್ತಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಇಂದು ಸರಣಿ ಟ್ವೀಟ್ ಮಾಡುವ ಮೂಲಕ ಸಿದ್ದರಾಮಯ್ಯ ಅವರು ಮತ್ತೆ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಆರ್‍ಎಸ್‍ಎಸ್ ನವರನ್ನು ಹಾಗೂ ಕೇಸರಿ ಕಂಡರೆ ನನಗ್ಯಾಕೆ ಭಯ ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಮಾಜಿ ಸಿಎಂ ಟ್ವೀಟ್ ವಾರ್ ಮುಂದುವರಿಸಿದ್ದಾರೆ.
Advertisement
ಹಣ, ಅಧಿಕಾರದ ಆಸೆಗೆ ಕಾಂಗ್ರೆಸ್ ಗೆ ದ್ರೋಹ ಮಾಡಿ @BJP4Karnataka ಪಕ್ಷ ಸೇರಿ ಮಂತ್ರಿಯಾಗಿರುವ @mla_sudhakar ಅಧಿಕಾರದ ಮದದಿಂದ ವರ್ತಿಸುತ್ತಿದ್ದಾರೆ. ಈ ಅಧಿಕಾರ ಶಾಶ್ವತವಲ್ಲ.
2023 ಕ್ಕೆ ಚುನಾವಣೆ ಬರುತ್ತೆ, ಯಾರು ಯಾರನ್ನು ಜೈಲಿಗೆ ಕಳಿಸ್ತಾರೆ ಎಂಬುದನ್ನು ನಾವೂ ನೋಡ್ತೀವಿ. 1/4#Pressmeet
— Siddaramaiah (@siddaramaiah) October 21, 2021
Advertisement
ಟ್ವೀಟ್‍ನಲ್ಲೇನಿದೆ..?
ಹಣ, ಅಧಿಕಾರದ ಆಸೆಗೆ ಕಾಂಗ್ರೆಸ್ ಗೆ ದ್ರೋಹ ಮಾಡಿ ಬಿಜೆಪಿ ಪಕ್ಷ ಸೇರಿ ಮಂತ್ರಿಯಾಗಿರುವ ಕೆ ಸುಧಾಕರ್ ಅಧಿಕಾರದ ಮದದಿಂದ ವರ್ತಿಸುತ್ತಿದ್ದಾರೆ. ಈ ಅಧಿಕಾರ ಶಾಶ್ವತವಲ್ಲ. 2023 ಕ್ಕೆ ಚುನಾವಣೆ ಬರುತ್ತೆ, ಯಾರು ಯಾರನ್ನು ಜೈಲಿಗೆ ಕಳಿಸ್ತಾರೆ ಎಂಬುದನ್ನು ನಾವೂ ನೋಡ್ತೀವಿ. ಇದನ್ನೂ ಓದಿ: ಹತಾಶೆ ಹಾಗೂ ಪ್ರಚಾರಕ್ಕಾಗಿ ಕಟೀಲ್ ಟೀಕೆ: ಪ್ರಿಯಾಂಕ್ ಖರ್ಗೆ
Advertisement
ಉಪ ಚುನಾವಣೆ ಆಗಲೀ, ಸಾರ್ವತ್ರಿಕ ಚುನಾವಣೆಯೇ ಆಗಲಿ ಎಲ್ಲಾ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಗೆಲುವಿಗಾಗಿ ಹೋರಾಟ ಮಾಡುತ್ತೇನೆ. ಕಳೆದ ಉಪಚುನಾವಣೆಯಲ್ಲಿ ಕೂಡ 15 ಕ್ಷೇತ್ರಗಳಲ್ಲಿ ನಿರಂತರ ಪ್ರಚಾರ ಮಾಡಿದ್ದೆ.
ನಮ್ಮ ಪಕ್ಷದ ಪ್ರತಿ ಅಭ್ಯರ್ಥಿಯ ಗೆಲುವು ನನಗೆ ಮುಖ್ಯ. 2/4#Pressmeet
— Siddaramaiah (@siddaramaiah) October 21, 2021
Advertisement
ಉಪ ಚುನಾವಣೆ ಆಗಲೀ, ಸಾರ್ವತ್ರಿಕ ಚುನಾವಣೆಯೇ ಆಗಲಿ ಎಲ್ಲಾ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಗೆಲುವಿಗಾಗಿ ಹೋರಾಟ ಮಾಡುತ್ತೇನೆ. ಕಳೆದ ಉಪಚುನಾವಣೆಯಲ್ಲಿ ಕೂಡ 15 ಕ್ಷೇತ್ರಗಳಲ್ಲಿ ನಿರಂತರ ಪ್ರಚಾರ ಮಾಡಿದ್ದೆ. ನಮ್ಮ ಪಕ್ಷದ ಪ್ರತಿ ಅಭ್ಯರ್ಥಿಯ ಗೆಲುವು ನನಗೆ ಮುಖ್ಯ. ಇದನ್ನೂ ಓದಿ: ಉತ್ತರಾಖಂಡ್ ಮೇಘ ಸ್ಫೋಟ – ಸಾವಿನ ಸಂಖ್ಯೆ 52ಕ್ಕೆ ಏರಿಕೆ 5 ಮಂದಿ ನಾಪತ್ತೆ
ಬೆಲೆಯೇರಿಕೆ ವಿರುದ್ಧ ಜನರು ತಿರುಗಿ ಬೀಳುವವರೆಗೆ ನಿರಂತರವಾಗಿ ಸರ್ಕಾರಗಳು ಬೆಲೆ ಹೆಚ್ಚು ಮಾಡುತ್ತಲೇ ಇರುತ್ತವೆ. ವಿರೋಧ ಪಕ್ಷವಾಗಿ ನಾವು ಶಕ್ತಿಮೀರಿ ಹೋರಾಟ ಮಾಡುತ್ತಲೇ ಇದ್ದೇವೆ, ಜನ ಬೀದಿಗಳಿದಾಗ ಮಾತ್ರ ನಮ್ಮ ಹೋರಾಟಕ್ಕೆ ಬಲ ಬರುವುದು. 3/4#Pressmeet
— Siddaramaiah (@siddaramaiah) October 21, 2021
ಬೆಲೆಯೇರಿಕೆ ವಿರುದ್ಧ ಜನರು ತಿರುಗಿ ಬೀಳುವವರೆಗೆ ನಿರಂತರವಾಗಿ ಸರ್ಕಾರಗಳು ಬೆಲೆ ಹೆಚ್ಚು ಮಾಡುತ್ತಲೇ ಇರುತ್ತವೆ. ವಿರೋಧ ಪಕ್ಷವಾಗಿ ನಾವು ಶಕ್ತಿಮೀರಿ ಹೋರಾಟ ಮಾಡುತ್ತಲೇ ಇದ್ದೇವೆ, ಜನ ಬೀದಿಗಿಳಿದಾಗ ಮಾತ್ರ ನಮ್ಮ ಹೋರಾಟಕ್ಕೆ ಬಲ ಬರುವುದು. ಇದನ್ನೂ ಓದಿ: ಭಾರತದ ಐತಿಹಾಸಿಕ ಸಾಧನೆ- ಯಾವ ದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ಲಸಿಕೆ ವಿತರಿಸಲಾಗಿದೆ?
ಕೇಸರಿ ಕಂಡರೆ, ಆರ್.ಎಸ್.ಎಸ್ ನವರನ್ನು ಕಂಡರೆ ನನಗ್ಯಾಕೆ ಭಯ? ನನಗೆ ಸಮಾಜದ ಬಗ್ಗೆ ಕಾಳಜಿ ಇದೆ. ಸಂಘ ಪರಿವಾರದವರು ಅಶಾಂತಿ ನಿರ್ಮಾಣದ ಮೂಲಕ ಸಮಾಜ ಒಡೆಯುವ ಕೆಲಸ ಮಾಡ್ತಾರೆ ಎಂಬ ಭಯವಿದೆ.
ಸೌಹಾರ್ದತೆಗೆ ಧಕ್ಕೆಯಾಗಾದ ಮನಸಿಗೆ ನೋವಾಗುತ್ತದೆ. 4/4#Pressmeet
— Siddaramaiah (@siddaramaiah) October 21, 2021
ಕೇಸರಿ ಕಂಡರೆ, ಆರ್.ಎಸ್.ಎಸ್ ನವರನ್ನು ಕಂಡರೆ ನನಗ್ಯಾಕೆ ಭಯ? ನನಗೆ ಸಮಾಜದ ಬಗ್ಗೆ ಕಾಳಜಿ ಇದೆ. ಸಂಘ ಪರಿವಾರದವರು ಅಶಾಂತಿ ನಿರ್ಮಾಣದ ಮೂಲಕ ಸಮಾಜ ಒಡೆಯುವ ಕೆಲಸ ಮಾಡ್ತಾರೆ ಎಂಬ ಭಯವಿದೆ. ಸೌಹಾರ್ದತೆಗೆ ಧಕ್ಕೆಯಾಗದ ಮನಸಿಗೆ ನೋವಾಗುತ್ತದೆ ಎಂದು ಬರೆದುಕೊಂಡಿದ್ದಾರೆ.